ಮಹಾಕುಂಭದಲ್ಲಿ ಯುವತಿಯೊಬ್ಬಳು ಟವೆಲ್ ಸುತ್ತಿಕೊಂಡು ಸ್ನಾನ ಮಾಡಲು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಅತ್ಯಂತ ಪವಿತ್ರ ಮತ್ತು ಭವ್ಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾಕುಂಭವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಕ್ತರ ದೊಡ್ಡ ಸಮೂಹವನ್ನು ಆಕರ್ಷಿಸುತ್ತಿದೆ. ಸಂಗಮದ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಜನರು ದೂರದೂರುಗಳಿಂದ ಬರುತ್ತಿದ್ದಾರೆ. ಆದರೆ, ಈ ಮಧ್ಯೆ ಯುವತಿಯೊಬ್ಬಳು ಕೇವಲ ಟವೆಲ್ ಸುತ್ತಿಕೊಂಡು ಜಾಲಿಯಾಗಿ ಸ್ನಾನ ಮಾಡಲು ಹೋಗುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಸಂಗಮ ತೀರದಲ್ಲಿ ಟವೆಲ್ ಸುತ್ತಿಕೊಂಡು ರೀಲ್: ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಸಂಗಮ ತೀರದಲ್ಲಿ ಟವೆಲ್ ಸುತ್ತಿಕೊಂಡು ಸ್ನಾನಕ್ಕೆ ಹೋಗುತ್ತಿದ್ದಾರೆ. ಈ ವಿಡಿಯೋವನ್ನು ಸಂಪೂರ್ಣವಾಗಿ ರೀಲ್ ಮಾಡುವ ಉದ್ದೇಶದಿಂದ ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ಬಿಳಿ ಬಣ್ಣದ ಟವೆಲ್ ಸುತ್ತಿಕೊಂಡ ಯುವತಿ ಸಂಗಮದ ಕಡೆಗೆ ನಡೆಯುತ್ತಿದ್ದಾಳೆ. ನಂತರ ಪವಿತ್ರ ಸ್ನಾನದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಆಕೆಯ ನಡವಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು @meevkt ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇದು ಈಗ ಇಂಟರ್ನೆಟ್‌ನಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ಧಾರ್ಮಿಕ ಪ್ರದೇಶಕ್ಕೆ ಅವಮಾನ: ಇನ್ನು ಯುವತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಯುವತಿ ವಿರುದ್ಧ ಭಾರೀ ಆಕ್ರೋಶ ಭುಗಿಲೆದ್ದಿದೆ. ಒಬ್ಬ ಬಳಕೆದಾರರು 'ಮಹಾಕುಂಭದ ಪವಿತ್ರ ಭೂಮಿಯಲ್ಲಿ ಈ ನಾಟಕ ಏನು? ಈ ಹುಡುಗಿಗೆ ತಾನು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಅರ್ಥವಾಗುತ್ತಿಲ್ಲವೇ?' ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, 'ಈ ಅರೆಬೆತ್ತಲೆ ರೀಲ್‌ಗಳ ಕಾಯಿಲೆ ಈಗ ಮಹಾಕುಂಭಕ್ಕೂ ತಲುಪಿದೆ' ಎಂದಿದ್ದಾರೆ. ಜನರು ಈ ವಿಡಿಯೋ ಮೂಲಕ ಯುವತಿಯನ್ನು ಖಂಡಿಸಿ ಇದನ್ನು ಸಾಮಾಜಬಾಹಿರ ಮತ್ತು ಅನುಚಿತ ವರ್ತನೆ ಎಂದು ಹೇಳಿದ್ದಾರೆ. ಇದು ಮಹಾಕುಂಭದ ಪವಿತ್ರತೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾಲಯದ ಕಾಲೇಜಿನ ಟಾಯ್ಲೆಟ್ ನೋಡಿ ಮೂರ್ಛೆ ಹೋದ ಅಧ್ಯಕ್ಷ!
ಯುವತಿ ಟವೆಲ್ ಸುತ್ತಿಕೊಂಡು ನಗಾಡುತ್ತಾ ಮುಂದೆ ಹೋಗುತ್ತಿದ್ದರೆ ಅವರ ಹಿಂದೆ ಮತ್ತೊಬ್ಬ ವಿಡಿಯೋ ಮಾಡುವ ವ್ಯಕ್ತಿ ಆಕೆಯನ್ನು ಹಿಂಬಾಲಿಸುತ್ತಿದ್ದಾರೆ. ಅರೆಬೆತ್ತಲೆ ದೇಹ ತೋರಿಸುತ್ತಾ ಈಕೆ ನದಿಯತ್ತ ಹೋಗುತ್ತಿದ್ದ ಸಮಯ ಬೆಳಗ್ಗೆ ಸುಮಾರು 4-5 ಗಂಟೆ ಆಗಿರಬಹುದು. ಈ ಸಮಯದಲ್ಲಿ ಜನರ ಸಂಖ್ಯೆಯೂ ವಿರಳವಾಗಿತ್ತು. ಜೊತೆಗೆ, ಅಲ್ಲಿ ಯಾವುದೇ ಸಾಧುಗಳು ಕೂಡ ಇರಲಿಲ್ಲ. ಸಾಧು-ಸಂತರು ಇದ್ದಿದ್ದರೆ ಆಕೆಗೆ ಚೆನ್ನಾಗಿ ಮುದ್ಧಿಯನ್ನು ಕಲಿಸುತ್ತಿದ್ದರು. ಏಕೆಂದರೆ ಸಂಪ್ರದಾಯ ಪಾಲಿಸುವ ಸಾಧುಗಳು ಇಂಥವರ ಅರೆಬೆತ್ತಲೆ ವಿಡಿಯೋ ಮಾಡುವುದಕ್ಕು ಕಂಡರೆ ಕಡುಕೋಪವನ್ನೇ ತೋರಿಸುತ್ತಿದ್ದರು.
