ಡೆಲ್ಲಿ ವಿಶ್ವವಿದ್ಯಾಲಯದ ಕಾಲೇಜೊಂದರಲ್ಲಿ ಶೌಚಾಲಯಗಳ ಸ್ಥಿತಿಗತಿಯನ್ನು ವಿಶ್ವವಿದ್ಯಾಲಯ ಒಕ್ಕೂಟದ ಅಧ್ಯಕ್ಷರು ಪರಿಶೀಲಿಸುವ ವೀಡಿಯೊ ವೈರಲ್ ಆಗಿದೆ. ವಿದ್ಯಾರ್ಥಿಗಳಿಗೆ ಶೌಚಾಲಯಗಳ ಸ್ಥಿತಿ ತೀರಾ ಕಳಪೆಯಾಗಿದೆ ಎಂದು ವರದಿಯಾಗಿದೆ.

ರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಹಾಗೂ ಅವುಗಳ ಹಾಸ್ಟೆಲ್‌ಗಳಲ್ಲಿನ ಸ್ವಚ್ಛತೆ ಮತ್ತು ಸೌಲಭ್ಯಗಳ ಕೊರತೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ವಿದ್ಯಾರ್ಥಿ ನಿಲಯಗಳಲ್ಲಿನ ಅಸ್ವಚ್ಛತೆ ಮತ್ತು ಸುರಕ್ಷತಾ ಕೊರತೆ ನಿರಂತರ ದೂರಾಗಿ ಉಳಿದಿದೆ. ಇತ್ತೀಚೆಗೆ ಡೆಲ್ಲಿ ವಿಶ್ವವಿದ್ಯಾಲಯದ ಕಾಲೇಜೊಂದರಲ್ಲಿ ಶೌಚಾಲಯಗಳ ಭದ್ರತೆಯ ಕುರಿತು ವೀಡಿಯೊ ವೈರಲ್ ಆಗಿದೆ.

ಡೆಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (DUSU) ಅಧ್ಯಕ್ಷರು ಕಾಲೇಜಿಗೆ ಭೇಟಿ ನೀಡಿ ಅನಾವಶ್ಯಕ ತಪಾಸಣೆ ನಡೆಸಿದಾಗ ಈ ಸಮಸ್ಯೆ ಬೆಳಕಿಗೆ ಬಂದಿದೆ. ವೀಡಿಯೊದಲ್ಲಿ ಮಕ್ಕಳು ಬಳಸುವ ಶೌಚಾಲಯಗಳು ತೀರಾ ಶಿಥಿಲಾವಸ್ಥೆಯಲ್ಲಿರುವುದನ್ನು ಕಾಣಬಹುದು. ಹಲವು ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ಈ ವೀಡಿಯೊವನ್ನು ರೋನಕ್ ಖತ್ರಿ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು 'ನಿಮ್ಮ ಅಧ್ಯಕ್ಷರು, ನಿಮ್ಮ ಧ್ವನಿ' ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

View post on Instagram

ವೀಡಿಯೊದಲ್ಲಿ ಕಾಲೇಜಿನ ಶೌಚಾಲಯಗಳು, ತುಕ್ಕು ಹಿಡಿದ ಕಿಟ್ಕಿಗಳು ಮತ್ತು ಶಿಥಿಲಗೊಂಡ ಸ್ಯಾನಿಟರಿ ವೈಂಡಿಂಗ್ ಮೆಷಿನ್‌ಗಳನ್ನು ಪರಿಶೀಲಿಸುತ್ತಿರುವುದನ್ನು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸುತ್ತಿರುವುದನ್ನು ಕಾಣಬಹುದು. 'ವಿದ್ಯಾರ್ಥಿಗಳು ಹೇಗೆ ಕೂರುತ್ತಾರೆ' ಎಂದು ಅವರು ಪ್ರಶ್ನಿಸುತ್ತಾರೆ. ಕಾಲೇಜಿನ ಅಧಿಕಾರಿಗಳು 'ಇದು ಆಗಾಗ್ಗೆ ಹಾಳಾಗುತ್ತದೆ, ನಾವು ಅದನ್ನು ಸರಿಪಡಿಸುತ್ತೇವೆ' ಎಂದು ಹೇಳುವುದನ್ನು ಕೇಳಬಹುದು.

ಇದನ್ನೂ ಓದಿ: ವಿಶ್ವದಲ್ಲಿ ಅತಿ ಕಡಿಮೆ ಬೆಲೆಗೆ ಬಂಗಾರ ಸಿಗುವ ದೇಶ ಯಾವುದು? ನೀವು ಹೋದಾಗ ತೆರಿಗೆ ಕಟ್ಟದೇ ಬಂಗಾರ ತರಬಹುದು!

ಕೇವಲ 18 ಗಂಟೆಗಳಲ್ಲಿ ಈ ವೀಡಿಯೊ 50 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸೂಕ್ತ ಕ್ರಮ ಕೈಗೊಂಡ DUSU ಅಧ್ಯಕ್ಷರನ್ನು ಶ್ಲಾಘಿಸಿ, ಇಂತಹ ರಾಜಕಾರಣಿಗಳೇ ನಮಗೆ ಬೇಕು ಎಂದು ಹಲವರು ಬರೆದಿದ್ದಾರೆ. ಇನ್ನು ಕೆಲವರು ತಮ್ಮ ಕಾಲೇಜುಗಳಲ್ಲೂ ಇದೇ ರೀತಿಯ ಸಮಸ್ಯೆಗಳಿವೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಟಾಯ್ಲೆಟ್‌ಗಳನ್ನು ಅಧ್ಯಕ್ಷರು ಮೂರ್ಛೆ ಹೋಗಿರಬಹುದು ಅನ್ಸುತ್ತೆ ಹೋಗಿ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. 

ನಮ್ಮ ದೇಶದ ಹಲವು ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಇಂತಹದೇ ಸ್ಥಿತಿಗಳು ಇವೆ. ಅವುಗಳನ್ನು ಬದಲಿ ಮಾಡುವುದಕ್ಕೆ ಹಣಕಾಸು ಕೊಟ್ಟರೂ ಅದನ್ನು ನುಂಗಿ ನೀರು ಕುಡಿದವರು ಇದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಎಷ್ಟೇ ದುರಸ್ತಿ ಮಾಡಿಸಿದರೂ ಕೆಲವು ವಿದ್ಯಾರ್ಥಿಗಳನ್ನು ಅವುಗಳನ್ನು ಹಾನಿ ಮಾಡುತ್ತಿರುತ್ತಾರೆ. ಅಂಥವರಿಂದಲೂ ಕಾಲೇಜು ಆಡಳಿತ ಮಂಡಳಿ ಬೇಸತ್ತು ಹೋಗಿರುತ್ತದೆ.