ದುಬೈನಲ್ಲಿ ಮಹದೇವ್ ಬೆಟ್ಟಿಂಗ್ ಆಪ್ ಪ್ರವರ್ತಕ ರವಿ ಉಪ್ಪಲ್ ಬಂಧನ
ಮಹತ್ವದ ಬೆಳವಣಿಗೆಯೊಂದರಲ್ಲಿ ದುಬೈಬಲ್ಲಿ ಮಹದೇವ ಬೆಟ್ಟಿಂಗ್ ಆಪ್ ಪ್ರವರ್ತಕ ರವಿ ಉಪ್ಪಲ್‌ನನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಈತನ ವಿರುದ್ಧಇಂಟರ್‌ಪೋಲ್, ರೆಡ್‌ಕಾರ್ನರ್ ನೋಟೀಸ್ ಹೊರಡಿಸಿತ್ತು.
ನವದೆಹಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ದುಬೈನಲ್ಲಿ ಮಹದೇವ ಬೆಟ್ಟಿಂಗ್ ಆಪ್ ಪ್ರವರ್ತಕ ರವಿ ಉಪ್ಪಲ್‌ನನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಈತನ ವಿರುದ್ಧಇಂಟರ್‌ಪೋಲ್, ರೆಡ್‌ಕಾರ್ನರ್ ನೋಟೀಸ್ ಹೊರಡಿಸಿತ್ತು. ಕಳೆದ ವಾರವೇ ಉಪ್ಪಲ್‌ನನ್ನು ಬಂಧಿಸಲಾಗಿದ್ದು, ಶೀಘ್ರದಲ್ಲಿಯೇ ಭಾರತಕ್ಕೆ ಆತನನ್ನು ಗಡೀಪಾರು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಮಹದೇವ ಬೆಟ್ಟಿಂಗ್ ಆಪ್ ಹಗರಣ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ದಿನಕ್ಕೆ ಈ ಆಪ್ 200 ಕೋಟಿ ಲಾಭ ಗಳಿಸುತ್ತಿದೆ ಎಂಬ ಸುದ್ದಿಯ ಜೊತೆಗೆ ಮಹಾದೇವ್ ಆಪ್ ಹಗರಣದ ಹಿಂದೆ ರಾಜಕೀಯ ವ್ಯಕ್ತಿಗಳು ಕೂಡ ಸೇರಿದ್ದಾರೆ ಎಂಬ ವಿಚಾರ ಛತ್ತೀಸ್‌ಗಢದ ವಿಧಾನಸಭಾ ಚುನಾವಣೆ ವೇಳೆ ಸಂಚಲನ ಸೃಷ್ಟಿಸಿತ್ತು.
ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣ: ದುಬೈಗೆ ಪರಾರಿಯಾಗಲು ಹೇಳಿದ್ದೇ ಸಿಎಂ ಬಘೇಲ್: ಶುಭಂ ಸೋನಿ
ಈ ಮಹಾದೇವ ಬೆಟ್ಟಿಂಗ್ ಆಪ್‌ನ ಪ್ರವರ್ತಕ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ 508 ಕೋಟಿ ಹಣ ಪಾವತಿಸಿದ್ದಾರೆ ಎಂದು ಕ್ಯಾಶ್ ಕೊರಿಯರ್‌ನ ಅಸಿಮ್ ದಾಸ್ ಹೇಳಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು. ಈ ವಿಚಾರ ಛತ್ತೀಸ್‌ಗಢ ಚುನಾವಣೆ ವೇಳೆ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿತ್ತು. ಆದರೆ ಅಸೀಮ್ ದಾಸ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದಾಗ ಅಸೀಮ್ ದಾಸ್ ಅವರು ತಾನು ಯಾವುದೇ ರಾಜಕಾರಣಿಗಳಿಗೆ ಹಣ ತಲುಪಿಸಿಲ್ಲ ರಾಜಕೀಯ ಪಿತೂರಿ ಭಾಗವಾಗಿ ತನ್ನನ್ನು ಬಂಧಿಸಲಾಗಿದೆ ಎಂದು ಕೋರ್ಟ್ ಮುಂದೆ ಹೇಳಿದ್ದ.
ಏನಿದು ಮಹದೇವ್ ಬೆಟ್ಟಿಂಗ್ ಆ್ಯಪ್ , ರಣಬೀರ್, ಶ್ರದ್ಧಾ ಕಪೂರ್ ಸೇರಿ ಖ್ಯಾತ ನಟ-ನಟಿಯರು ದಂಧೆಯಲ್ಲಿ!