ರುಂಡ ಕತ್ತರಿಸುವ ಮದರಸಾ ಶಿಕ್ಷಣಕ್ಕಿಂತ ಮುಸ್ಲಿಮ್ ಮಕ್ಕಳಿಗೆ ಆಧುನಿಕ ಶಿಕ್ಷಣ ಬೇಕು, ಆರೀಫ್ ಖಾನ್!
- ಉದಯಪುರ ಘಟನೆ ಖಂಡಿಸಿದ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್
- ಈ ರೀತಿಯ ಘಟನೆಗಳಿಗೆ ಮದರಸಾ ಶಿಕ್ಷಣವೂ ಒಂದು ಕಾರಣ
- ಮುಸ್ಲಿಮ್ ಕಾನೂನು ಬೋಧಿಸುವ ಮದರಸಾದಿಂದ ಈ ಅವಾಂತರ
ಕೇರಳ(ಜೂ.29): ಉದಯಪುರದಲ್ಲಿ ಹಿಂದೂ ವ್ಯಕ್ತಿಯ ರುಂಡ ಕತ್ತರಿಸಿದ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ದೇಶದಲ್ಲಿ ಮುಸ್ಲಿಮ್ ಮೂಲಭೂತವಾದಿತ್ವ ಹಾಗೂ ಧರ್ಮಾಂಧತೆ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಇದೀಗ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಘಟನೆ ಖಂಡಿಸಿದ್ದಾರೆ. ಇಷ್ಟೇ ಅಲ್ಲ ಈ ರೀತಿಯ ಘಟನೆಗೆ ಮದರಸಾ ಶಿಕ್ಷಣ ವ್ಯವಸ್ಥೆ ಕಾರಣ ಎಂದಿದ್ದಾರೆ.
ಮಕ್ಕಳಿಗೆ ಮದರಸ ಶಿಕ್ಷಣದ ಅಗತ್ಯವಿಲ್ಲ. ಇದು ಸಂಕುಚಿತ ಹಾಗೂ ಧರ್ಮಾಧಾರಿತ ಶಿಕ್ಷಣವಾಗಿದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಧರ್ಮಾಂಧತೆಯನ್ನು ಬೋಧಿಸಲಾಗುತ್ತಿದೆ. ಇದರ ಪರಿಣಾಮ ಉದಯಪುರದಲ್ಲಿ ನಡೆದಂತಾ ಹತ್ಯೆಗಳು ನಡೆಯುತ್ತಿದೆ ಎಂದು ಆರೀಫ್ ಮೊಹಮ್ಮದ್ ಹೇಳಿದ್ದಾರೆ.
ಉದಯಪುರ ಕನ್ಹಯ್ಯಾಲಾಲ್ ಶಿರಚ್ಛೇದ, ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದ ತಸ್ಲೀಮಾ ನಸ್ರೀನ್
ಮುಸ್ಲಿಮ್ ಲಾ(ಮುಸ್ಲಿಮ್ ಕಾನೂನು) ಖುರಾನ್‌ನಲ್ಲಿ ಇಲ್ಲ. ಇದು ಆಡಳಿತ ಮಾಡಿದ ಮುಸ್ಲಿಮ್ ದೊರೆಗಳು ಮಾಡಿದ ಕಾನೂನು. ಈ ಕಾನೂನುಗಳಲ್ಲಿ ರುಂಡ ಕತ್ತರಿಸುವುದನ್ನು ಬೆಂಬಲಿಸಲಾಗಿದೆ. ಮುಸ್ಲಿಮ್ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ರುಂಡ ಕತ್ತರಿಸುವ ಅಧಿಕಾರ ಇತ್ತು. ಇದೇ ಕಾನೂನನ್ನು ಮದರಸಾಗಳಲ್ಲಿ ಬೋಧಿಸಲಾಗುತ್ತದೆ ಎಂದು ಮದರಸಾ ಶಿಕ್ಷಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕ ಮಕ್ಕಳಲ್ಲೇ ವಿಷ ಬೀಜ ಬಿತ್ತುವುದರಿಂದ ಅವರ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರುತ್ತಿದೆ. 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ನೀಡುವ ವಿಧ್ಯಾಭ್ಯಾಸ ಯಾವುದೇ ಧರ್ಮಾಧಾರಿತ ಆಗಿರಬಾರದು. ಇದು ಮಕ್ಕಳ ಹಕ್ಕಾಗಿದೆ. ಆಧುನಿಕ ಶಿಕ್ಷಣ ಪಡೆಯುವುದು ಅವರ ಹಕ್ಕು. ಆದರೆ ಮದರಸಗಳಲ್ಲಿ ಮುಸ್ಲಿಮ್ ಕಾನೂನು, ಶಿರಚ್ಚೇದಂತಹ ಪಾಠಗಳನ್ನು ಭೋಡಿಸಿ ಸಂಕುಚಿತ ಮಾಡಲಾಗುತ್ತಿದೆ ಎಂದು ಆರೀಫ್ ಮೊಹಮ್ಮದ್ ಹೇಳಿದ್ದಾರೆ.
ಮದರಸ ಶಿಕ್ಷಣವನ್ನೂ ಈ ಹಿಂದೆಯೂ ಆರೀಫ್ ಮೊಹಮ್ಮದ್ ಖಾನ್ ವಿರೋಧಿಸಿದ್ದಾರೆ. ಮಕ್ಕಳ ಶಿಕ್ಷಣ ಹಕ್ಕನ್ನೇ ಮದಸರಸ ಕಸಿದುಕೊಂಡಿದೆ ಎಂದು ಹಲವು ಭಾರಿ ಆರೋಪಿಸಿದ್ದಾರೆ.
ಉದಯಪುರ ಟೈಲರ್ ಹತ್ಯೆ ಭಯೋತ್ಪಾದಕ ಘಟನೆ ಎಂದ ಕೇಂದ್ರ, NIA ತಂಡ ರವಾನೆ!
ಉದಯಪುರದಲ್ಲಿ ಹಿಂದೂ ಟೈಲರ್ಬ ಬರ್ಬರ ಹತ್ಯೆ ಖಂಡಿಸಿದ ಆರೀಫ್ ಮೊಹಮ್ಮದ್ ಖಾನ್, ಇಂತಹ ಘಟನೆಗಳು ಮರಕಳಿಸಂದೆತೆ ಮಾಡಲು ಮದರಸಾ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಬೇಕಿದೆ. ಮದರಸಾ ಶಿಕ್ಷಣದಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಉದಯಪುರದಲ್ಲಿ ಮುಸ್ಲಿಮ್ ಯುವಕರು ಬಟ್ಟೆ ಹೊಲಿಯುವ ಸೋಗಿನಲ್ಲಿ ಬಂದು ಹಿಂದೂ ಟೈಲರ್ ಕನ್ಹಯ್ಯ ಲಾಲ್ ಮೇಲೆ ದಾಳಿ ಮಾಡಿದ್ದಾರೆ. ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜಸ್ಥಾನದಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿದ ಕಾರಣಕ್ಕೆ ಈ ಕೊಲೆ ನಡೆದಿದೆ. ಇಬ್ಬರು ಮತಾಂಧರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪ್ರವಾದಿಗೆ ಅಗೌರವ ತೋರಿದರೆ ಶಿರಚ್ಛೇದವೇ ಗತಿ ಎಂದು ಬೆದರಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡುವ ಉಗ್ರರು ‘ಗುಶ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುಡಾ’ ಎಂದು ಹೇಳುತ್ತಾರೆ. ಇದರರ್ಥ ‘ಪ್ರವಾದಿಗೆ ಯಾರು ಅಗೌರವ ತೋರುತ್ತಾರೋ ಅವರಿಗೆ ಇರುವ ಒಂದೇ ಶಿಕ್ಷೆಯೆಂದರೆ ಶಿರಚ್ಛೇದ’ ಎಂದಾಗುತ್ತದೆ.