ಹಿಜಾಬ್ ಹಲಾಲ್ ಬಳಿಕ ಇದೀಗ ಮದರಸಾ ವಿವಾದ ಮದರಸಾದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸಿಲೆಬಸ್ ಉಗ್ರವಾದಕ್ಕೆ ಅವಕಾಶವಿಲ್ಲ, ರಾಷ್ಟ್ರೀಯತೆ ಮೊದಲು ಯುಪಿ ಸಚಿವನ ಹೇಳಿಕೆಯಿಂದ ವಿವಾದ ಸೃಷ್ಟಿ  

ಲಖನೌ(ಏ.03): ಹಿಜಾಬ್, ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ವಿವಾದಗಳ ಇದೀಗ ಮದರಸಾ ವಿವಾದ ಹುಟ್ಟಿಕೊಂಡಿದೆ. ಇನ್ನು ಮುಂದೆ ಮದರಸಾದಲ್ಲಿ ಮಕ್ಕಳಿಗೆ ರಾಷ್ಟ್ಪೀಯತೆ ಪಾಠ ಹೇಳಿಕೊಡಬೇಕು. ಬದಲಾಗಿ ಉಗ್ರವಾದ ಪಾಠವಲ್ಲ ಎಂದು ಉತ್ತರ ಪ್ರದೇಶ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಧರ್ಮಪಾಲ್‌ ಸಿಂಗ್ ಹೇಳಿದ್ದಾರೆ. ಇದು ಮುಸ್ಲಿಮ್ ಸಮುದಾಯವನ್ನು ಕೆರಳಿಸಿದೆ.

ಬರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧರ್ಮಪಾಲ್ ಸಿಂಗ್, ಮದರಸಾಗಳು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸಿಲೆಬಸ್ ನೀಡಲಾಗುತ್ತದೆ. ಹೀಗಾಗಿ ರಾಷ್ಟ್ರೀಯತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ಉಗ್ರವಾದ ಕುರಿತು ಒಂದು ಪದ ಇರುವುದಿಲ್ಲ ಎಂದು ಧರ್ಮಪಾಲ್ ಹೇಳಿದ್ದಾರೆ. 

Hijab Row: 'ಮದರಸಾಗಳು ದೇಶದ್ರೋಹದ ಪಾಠ ಮಾಡುತ್ತವೆ, ಬ್ಯಾನ್ ಆಗಲಿ'

ಮದರಸಾಗಳಲ್ಲಿ ಪಾಠಗಳಲ್ಲಿ ಮಕ್ಕಳಿಗೆ ರಾಷ್ಟ್ರೀಯತೆ ಕುರಿತು ಯಾವ ಪಠ್ಯವೂ ಇರಲಿಲ್ಲ. ಆದರೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ ಪಠ್ಯ ಕ್ರಮದಲ್ಲೂ ಬದಲಾವಣೆ ತರಲಾಗುತ್ತಿದೆ. ಮಕ್ಕಳಿಗೆ ತನ್ನ ದೇಶದ ಕುರಿತು ಹೆಮ್ಮೆ ಇರಬೇಕು. ಈ ನಿಟ್ಟಿನಲ್ಲಿ ಪಠ್ಯ ಕ್ರಮ ಇರಲಿದೆ ಎಂದು ಧರ್ಮಪಾಲ್ ಸಿಂಗ್ ಹೇಳಿದ್ದಾರೆ.

ಧರ್ಮಪಾಲ್ ಸಿಂಗ್ ಹೇಳಿಕೆ ಉತ್ತರ ಪ್ರದೇಶದ ಮುಸ್ಲಿಮ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಸರ್ಕಾರ ಇದೀಗ ಶಿಕ್ಷಣವನ್ನೂ ಕೇಸರಿಕರಣ ಮಾಡುತ್ತಿದೆ. ಮದರಸಾಗಳಲ್ಲಿ ಯಾವ ಪಾಠ ಮಾಡಬೇಕು ಅನ್ನೋದು ಮದರಸಾ ಆಡಳಿತ ಮಂಡಳಿ ನಿರ್ಧರಿಸುತ್ತದೆ ಎಂದಿದ್ದಾರೆ. ಉಗ್ರವಾದ ಕುರಿತು ಯಾವುದೇ ಬೋಧನೆ ಇಲ್ಲ ಎಂದು ಮುಸ್ಲಿಮ್ ಮುಖಂಡರು ಹೇಳಿದ್ದಾರೆ.

Uttar Pradesh ಮದರಸಾಗಳಲ್ಲಿ ಇನ್ನು ಮುಂದೆ ತರಗತಿಗೂ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ!

ರೇಣುಕಾಚಾರ್ಯ ಹೇಳಿಕೆ ವಿವಾದ
ಉತ್ತರ ಪ್ರದೇಶದಲ್ಲಿ ಧರ್ಮಪಾಲ್ ಸಿಂಗ್ ಹೇಳಿಕೆಯಂತೆ ಕರ್ನಾಟಕದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಇತ್ತೀಚೆಗೆ ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡುತ್ತಾರೆ, ಅವುಗಳ ನಿಷೇಧಿಸಬೇಕೆಂಬ ಹೇಳಿಕೆ ನೀಡಿದ್ದರು. ಇದು ಭಾರಿ ವಿವಾದ ಸೃಷ್ಟಿಸಿತ್ತು. 

ಎಂ.ಪಿ.ರೇಣುಕಾಚಾರ್ಯ ಪದೇ ಪದೇ ಮುಸ್ಲಿಂ ಸಮುದಾಯ ಹಾಗೂ ಮದರಸಾಗಳ ಬಗ್ಗೆ ಹಗುರವಾಗಿ ಮಾತನಾಡಬಾರದು ಈ ದೇಶದಲ್ಲಿ ಹುಟ್ಟಿದ ಎಲ್ಲಾ ಧರ್ಮೀಯರು ಭಾರತ ಮಾತೆಯ ಮಕ್ಕಳು ಎಂದು ಅಲ್ಪಸಂಖ್ಯಾತ ಮುಖಂಡ ಚೀಲೂರು ವಾಜೀದ್‌ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ಹಿಂದೆ ಸ್ವಾತಂತ್ರ್ಯ ನಂತರ ಭಾರತ, ಪಾಕಿಸ್ತಾನ ವಿಭಜನೆಯಾದ ಸಂದರ್ಭದಲ್ಲಿ ಭಾರತ ನಮ್ಮ ತಾಯಿ ನಾವು ಇಲ್ಲೇ ಬದುಕಬೇಕು ಹಾಗೂ ಇಲ್ಲೇ ಸಾಯಬೇಕೆಂದು ನಿರ್ಧರಿಸಿ ನಮ್ಮ ಪೂರ್ವಜರು ಬದುಕು ಸಾಗಿಸುತ್ತಾ ಬಂದಿದ್ದಾರೆ ಎಲ್ಲಾ ಧರ್ಮದಲ್ಲೂ ಒಳ್ಳೆಯರು ಮತ್ತು ಕೆಟ್ಟವರು ಇದ್ದೇ ಇರುತ್ತಾರೆ ಎಂದು ಹೇಳಿದರು.

ಒಂದು ಧರ್ಮದಲ್ಲಿ ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಧರ್ಮವನ್ನೇ ದೂಷಿಸುವುದು ಸರಿಯಲ್ಲ ಎಂದ ಅವರು ಮದರಸಾಗಳಲ್ಲಿ ಮತಾಂಧತೆ ಹಾಗೂ ದೇಶದ್ರೋಹದ ಪಾಠಗಳನ್ನು ಹೇಳಿಕೊಡುತ್ತಾರೆ ಎಂದು ಶಾಸಕರು ಹೇಳುತ್ತಿರುವುದು ಸರಿಯಲ್ಲ ಪದೇ ಪದೇ ಒಂದು ಸಮುದಾಯ ಗುರಿಯಾಗಿಟ್ಟು ದೂಷಿಸುವುದು ಸಮಾಜದ ಆರೋಗ್ಯ, ಸಾಮಾಜಿಕ ಶಾಂತಿ ಮತ್ತು ಸಹಬಾಳ್ವೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಿದರು.

ಹಲಾಲ್‌ ಹಾಗೂ ಮದರಸಾಗಳ ಕುರಿತು ಹೇಳಿಕೆ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರೇಣುಕಾಚಾರ್ಯಗೆ ಜೀವ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಈ ಕುರಿತು ಎಂ.ಪಿ.ರೇಣುಕಾಚಾರ್ಯ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.