ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಮನವಮಿ ದಿನವೇ ದುರಂತ ನಡೆದಿದೆ. ಬಾವಿ ಮೇಲಿನ ತಡೆಹಾಸು( ತಡೆಗೋಡೆ, ಚಾವಣಿ) ಕುಸಿದು ಬಿದ್ದು, ದೇಗುಲದಲ್ಲಿದ್ದ 25ಕ್ಕೂ ಹೆಚ್ಚು ಜನರು ದಿಢೀರನೇ ಬಾವಿಗೆ ಬಿದ್ದಿದ್ದಾರೆ. ಪರಿಣಾಮ 8 ಜನ ಈ ದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ.
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಮನವಮಿ ದಿನವೇ ದುರಂತ ನಡೆದಿದೆ. ಬಾವಿ ಮೇಲಿನ ತಡೆಹಾಸು( ತಡೆಗೋಡೆ, ಚಾವಣಿ) ಕುಸಿದು ಬಿದ್ದು, ದೇಗುಲದಲ್ಲಿದ್ದ 25ಕ್ಕೂ ಹೆಚ್ಚು ಜನರು ದಿಢೀರನೇ ಬಾವಿಗೆ ಬಿದ್ದಿದ್ದಾರೆ. ಬಾವಿಗೆ ಬಿದ್ದ ಹಲವರನ್ನು ಈಗಾಗಲೇ ರಕ್ಷಿಸಲಾಗಿದ್ದು, 8 ಜನ ಈ ದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಇಂದು ರಾಮನವಮಿ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿಶೇಷ ಕಾರ್ಯಕ್ರಮವಿತ್ತು. ಹೀಗಾಗಿ ನೂರಾರು ರಾಮಭಕ್ತರು ಇಲ್ಲಿ ಸೇರಿದ್ದರು. ಈ ವೇಳೆ ದೇಗುಲದೊಳಗಿದ್ದ ಬಾವಿಯ ಚಾವಣಿ ದಿಢೀರ್ ಕುಸಿದಿದ್ದು, 25ಕ್ಕೂ ಹೆಚ್ಚು ಜನ ಬಾವಿಗೆ ಬಿದ್ದಿದ್ದಾರೆ.
ಇಂದೋರ್‌ನ ಶ್ರೀ ಬಾಲೇಶ್ವರ್ ಮಹಾದೇವ್ ಜುಲೇಲಾಲ್ ದೇಗುಲದಲ್ಲಿ ಈ ಘಟನೆ ನಡೆದಿದ್ದು, 25ಕ್ಕೂ ಹೆಚ್ಚು ಜನ ಬಾವಿಯಲ್ಲಿ ಸಿಲುಕಿಕೊಂಡಿದ್ದಾರೆ. ಬಾವಿಗೆ ಬಿದ್ದವರನ್ನು ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ. ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದ್ದು, ರಾಮನವಮಿ ಅಂಗವಾಗಿ ಪಟೇಲ್ ನಗರದ ಈ ದೇಗುಲದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಹೀಗಾಗಿ ಅನೇಕ ಭಕ್ತರು ದೇಗುಲದಲ್ಲಿ ಸೇರಿದ್ದರು. ಈ ವೇಳೆ ದುರಂತ ಸಂಭವಿಸಿದ್ದು, ಬಾವಿಗೆ ಬಿದ್ದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸರು ಹಾಗೂ ಇಂದೋರ್ ಪೊಲೀಸ್ ಕಮೀಷನರ್ ಭೇಟಿ ನೀಡಿದ್ದು, ಪೊಲೀಸರು ಹಗ್ಗಗಳನ್ನು ಬಳಸಿ ಜನರನ್ನು ಮೇಲೆತ್ತುತ್ತಿದ್ದಾರೆ. ಹಲವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಇಂದೋರ್ ಜಿಲ್ಲಾಧಿಕಾರಿ ಹಾಗೂ ಕಮೀಷನರ್‌ಗೆ ರಕ್ಷಣಾ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದ್ದಾರೆ.
ತಡೆಗೋಡೆ ಕುಸಿದು ಬಾವಿಗೆ ಬಿದ್ದ 25ಕ್ಕೂ ಹೆಚ್ಚು ಜನ: ರಾಮನವಮಿ ಆಚರಣೆ ವೇಳೆ ಘಟನೆ
ಇಂದೋರ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಭಕ್ತರ ರಕ್ಷಣೆಗೆ ಎಲ್ಲಾ ಪ್ರಯತ್ನ ನಡೆಯುತ್ತಿದೆ. ಕೆಲವರನ್ನು ಈಗಾಗಲೇ ರಕ್ಷಿಸಲಾಗಿದೆ ಎಂದು ಮಧ್ಯಪ್ರದೇಶ ಸಿಎಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಬಾಲೇಶ್ವರ್ ಮಹೇದೇವ್ ಝುಲೇಲಾಲ್ ದೇಗುಲದ ಬಾವಿಯಿಂದ ಈಗಾಗಲೇ 8 ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಎಸ್‌ಡಿಆರ್‌ಎಫ್ ತಂಡವೂ ಸ್ಥಳದಲ್ಲಿದ್ದು, ಅನೇಕ ಆಂಬುಲೆನ್ಸ್‌ಗಳನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ. ಅಲ್ಲದೇ ಅಲ್ಲಿದ್ದ ಬಹುತೇಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು, ದೇವಸ್ಥಾನಕ್ಕೆ ಬರುವವರಿಗೆ ನಿರ್ಬಂಧ ಹೇರಲಾಗಿದೆ.
