Asianet Suvarna News Asianet Suvarna News

2022 ರ ಹುಲಿ ಗಣತಿ ವರದಿ ಬಿಡುಗಡೆ: ಮಧ್ಯ ಪ್ರದೇಶದಲ್ಲಿ 785, ಕರ್ನಾಟಕದಲ್ಲಿ 563 ಹುಲಿಗಳು ಪತ್ತೆ; ರಾಜ್ಯವೇ ನಂ. 2

ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುವ ಹುಲಿ ಗಣತಿಯ ವರದಿಯನ್ನು ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಶನಿವಾರ ಬಿಡುಗಡೆ ಮಾಡಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಅಶ್ವಿನಿ ಕುಮಾರ್‌ ಚೌಬೆ ಬಿಡುಗಡೆ ಮಾಡಿರುವ 2022ನೇ ಸಾಲಿನ ವರದಿ ಅನ್ವಯ, 2018ರಲ್ಲಿ 2967 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 3682ಕ್ಕೆ ತಲುಪಿದೆ.

madhya pradesh retains top position in tiger count with 785 karnataka second ash
Author
First Published Jul 30, 2023, 7:42 AM IST

ಭೋಪಾಲ್‌ (ಜುಲೈ 30, 2023): 2022ನೇ ಸಾಲಿನ ರಾಷ್ಟ್ರೀಯ ಹುಲಿ ಗಣತಿ ವರದಿ ಬಿಡುಗಡೆ ಆಗಿದ್ದು, ಅದರನ್ವಯ ದೇಶದ ಅರಣ್ಯ ಪ್ರದೇಶಗಳಲ್ಲಿ 3682 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 785 ಹುಲಿಗಳೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನ ಗಳಿಸಿದ್ದರೆ, 563 ಹುಲಿಗಳೊಂದಿಗೆ ಕರ್ನಾಟಕ 2ನೇ ಸ್ಥಾನ ಹಾಗೂ 560 ಹುಲಿಗಳ ಮೂಲಕ ಉತ್ತರಾಖಂಡ 3ನೇ ಸ್ಥಾನ ಸಂಪಾದಿಸಿವೆ.

ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುವ ಹುಲಿ ಗಣತಿಯ ವರದಿಯನ್ನು ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಶನಿವಾರ ಬಿಡುಗಡೆ ಮಾಡಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಅಶ್ವಿನಿ ಕುಮಾರ್‌ ಚೌಬೆ ಬಿಡುಗಡೆ ಮಾಡಿರುವ 2022ನೇ ಸಾಲಿನ ವರದಿ ಅನ್ವಯ, 2018ರಲ್ಲಿ 2967 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 3682ಕ್ಕೆ ತಲುಪಿದೆ. ಅಂದರೆ ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ.75ರ ಷ್ಟಕ್ಕೆ ಭಾರತವೇ ಆವಾಸಸ್ಥಾನವಾಗಿದೆ. ಗಣತಿ ಅನ್ವಯ ಭಾರತದಲ್ಲಿ ಗರಿಷ್ಠ 3925 ಹುಲಿಗಳಿರಬಹುದು ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಇದನ್ನು ಓದಿ: ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!

ಮಧ್ಯಪ್ರದೇಶ ನಂ.1:
2018ರಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶಗಳಲ್ಲಿ ಇದೀಗ ಸಂಖ್ಯೆ 259ರಷ್ಟು ಹೆಚ್ಚಾಗುವ ಮೂಲಕ 785ಕ್ಕೆ ತಲುಪಿದೆ. ಈ ಮೂಲಕ ಅದು ದೇಶದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಕರ್ನಾಟಕದಲ್ಲಿ 2018ರಲ್ಲಿ 524 ಹುಲಿ ಇದ್ದವು. ಅವುಗಳ ಸಂಖ್ಯೆ 4 ವರ್ಷದಲ್ಲಿ 39ರಷ್ಟು ಹೆಚ್ಚಾಗಿದ್ದು, 563ಕ್ಕೆ ಏರಿದೆ. ಉತ್ತರಾಖಂಡದಲ್ಲಿ 2018ರಲ್ಲಿ 442 ಹುಲಿಗಳಿದ್ದವು. ಅದು ಈಗ 560ಕ್ಕೆ ಏರಿಕೆಯಾಗಿದೆ.

ಇಳಿಕೆ: ಅರುಣಾಚಲ ಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿ ಹುಲಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಕಳೆದ 50 ವರ್ಷದಲ್ಲಿ ಶೇ. 75 ರಷ್ಟು ಹೆಚ್ಚಳ

ರಾಜ್ಯದಲ್ಲಿ ಬಂಡೀಪುರ ನಂ.1
ಅಭಯಾರಣ್ಯ   ಹುಲಿ ಸಂಖ್ಯೆ
ಬಂಡೀಪುರ       191
ಭದ್ರಾ                44
ಬಿಆರ್‌ಟಿ           60
ಕಾಳಿ                  29
ನಾಗರಹೊಳೆ    185

ದೇಶಕ್ಕೆ ಜಿಮ್‌ ಕಾರ್ಬೆಟ್‌ ನಂ.1, ಬಂಡೀಪುರ ನಂ.2
ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಹುಲಿಗಳು ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ಅಭಯಾರಣ್ಯದಲ್ಲಿವೆ. ದೇಶದಲ್ಲಿ 2ನೇ ಅತಿ ಹೆಚ್ಚು ಹುಲಿಗಳು ಕರ್ನಾಟಕದ ಬಂಡೀಪುರ ಅಭಯಾರಣ್ಯದಲ್ಲಿ ಹಾಗೂ 3ನೇ ಅತಿಹೆಚ್ಚು ಹುಲಿಗಳು ನಾಗರಹೊಳೆ ಅಭಯಾರಣ್ಯದಲ್ಲಿವೆ. ಹುಲಿ ಗಣತಿ ವರದಿಯ ಪ್ರಕಾರ ಜಿಮ್‌ ಕಾರ್ಬೆಟ್‌ನಲ್ಲಿ 260, ಬಂಡೀಪುರದಲ್ಲಿ 191 ಹಾಗೂ ನಾಗರಹೊಳೆಯಲ್ಲಿ 185 ಹುಲಿಗಳಿವೆ.

ಇದನ್ನೂ ಓದಿ: ಸಫಾರಿ ಡ್ರೆಸ್‌ನಲ್ಲಿ ಮಿಂಚಿದ ಪ್ರಧಾನಿ ಮೋದಿ: ಹೀರೋ ಥರ ಕಾಣುತ್ತಿದ್ದಾರೆ ಎಂದ ನೆಟ್ಟಿಗರು

Follow Us:
Download App:
  • android
  • ios