Asianet Suvarna News Asianet Suvarna News

ಸೈಕಲ್‌ನಲ್ಲಿ ಫುಡ್‌ ಡೆಲಿವರಿ ಮಾಡ್ತಿದ್ದವನಿಗೆ ಬೈಕ್‌ ತೆಗ್ದು ಕೊಟ್ಟ ಪೊಲೀಸರು

  • ಮಾನವೀಯತೆ ಮೆರೆದ ಇಂದೋರ್ ಪೊಲೀಸರು
  • ಬಡತನದಿಂದ ಬೈಕ್‌ ಕೊಳ್ಳಲಾಗದೆ ಸೈಕಲ್‌ನಲ್ಲಿ ಫುಡ್ ಡೆಲಿವರಿ
  • ಯುವಕನಿಗೆ ಬೈಕ್ ಖರೀದಿಸಿ ಕೊಟ್ಟ ಪೊಲೀಸರು
Madhya Pradesh Police buy motorcycle for man delivering food on bicycle akb
Author
Madhya Pradesh, First Published May 3, 2022, 12:24 PM IST

ಭೋಪಾಲ್‌: ಕಠಿಣ ಶ್ರಮ ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಇದಕ್ಕೆ ಹಲವು ಉದಾಹರಣೆಗಳನ್ನು ನೀವು ಈಗಾಗಲೇ ನೋಡಿರಬಹುದು. ಅದರಂತೆ ತನ್ನ ಬಳಿ ಬೈಕ್ ಇಲ್ಲದಿದ್ದರೂ ಸೈಕಲ್ ಮೂಲಕ ಆಹಾರ ಪೂರೈಕೆ ಮಾಡುತ್ತಿದ್ದ ಯುವಕನೋರ್ವನಿಗೆ ಮಧ್ಯಪ್ರದೇಶ ಪೊಲೀಸರು ಬೈಕ್‌ ತೆಗೆದುಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಪೊಲೀಸರೆಂದರೆ ಬಹುತೇಕರು ಮೂಗು ಮೂರಿಯುವುದೇ ಹೆಚ್ಚು ಇದಕ್ಕೆ ಕೆಲ ಪೊಲೀಸರ ದುರ್ವತನೆಯೂ ಕಾರಣ. ಎಲ್ಲೆಡೆ ಒಳ್ಳೆಯವರು ಕೆಟ್ಟವರು ಇರುವಂತೆ ಪೊಲೀಸ್‌ ಇಲಾಖೆಯಲ್ಲೂ ಮಾನವೀಯತೆ ಮೆರೆಯುವ ಅನೇಕ ಪೊಲೀಸರಿದ್ದಾರೆ. ಈಗ ಮಧ್ಯಪ್ರದೇಶದ ಪೊಲೀಸರು ಒಂದು ಮಾನವೀಯ ಕಾರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

 

22 ವರ್ಷದ ಯುವಕನೋರ್ವ ಆನ್‌ಲೈನ್ ಆಹಾರ ಡೆಲಿವರಿ ಮಾಡುತ್ತಿದ್ದು, ಆತನ ಬಳಿ ಸೈಕಲ್ ಇರಲಿಲ್ಲ. ಹೀಗಾಗಿ ಆರ್ಡರ್ ಮಾಡಿದವರಿಗೆ ವೇಗವಾಗಿ ಆಹಾರ ತಲುಪಿಸುವ ನಿಟ್ಟಿನಲ್ಲಿ ಆತ ವೇಗವಾಗಿ ಸೈಕಲ್ ತುಳಿಯುತ್ತಿದ್ದ. ಇದನ್ನು ಗಮನಿಸಿದ ಇಂದೋರ್‌ನ ಪೊಲೀಸ್ ಸಿಬ್ಬಂದಿ ಆತನಿಗಾಗಿ ಬೈಕೊಂದನ್ನು ಖರೀದಿಸಿ ನೀಡಿದ್ದಾರೆ. 

ಮಧ್ಯಪ್ರದೇಶದ ಇಂದೋರ್‌ನ ವಿಜಯ್ ನಗರ (Vijay Nagar) ಪೊಲೀಸ್ ಠಾಣೆಯ ಉಸ್ತುವಾರಿ ತಹಜೀಬ್ ಖಾಜಿ (Tehzeeb Qazi) ಅವರು ಸೋಮವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ (Madhya Pradesh)  ಆಹಾರದ ಪೊಟ್ಟಣಗಳನ್ನು ತಲುಪಿಸಲು ಯುವಕನೋರ್ವ ಸುರಿಯುತ್ತಿರುವ ಬೆವರನ್ನು ಲೆಕ್ಕಿಸದೇ ವೇಗವಾಗಿ ಸೈಕ್ಲಿಂಗ್ ಮಾಡುವುದನ್ನು ನೋಡಿದರು.

ಬಳಿಕ ಆತನ ಬಳಿ ಮಾತನಾಡಿದಾಗ ಆತನ ಹೆಸರು ಜೇ ಹಲ್ದೆ (Jay Hald) ಎಂಬುದಾಗಿದ್ದು, ಆತನ ಕುಟುಂಬವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಿಂದ  ಬೈಕ್ ಖರೀದಿಸಲು ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾಗಿ ಪೊಲೀಸ್‌ ಅಧಿಕಾರಿ ಹೇಳಿದರು.

ಆತನೊಂದಿಗೆ ಮಾತನಾಡಿದ ಬಳಿಕ ವಿಜಯ್ ನಗರ ಪೊಲೀಸ್ ಠಾಣೆಯ  ಉಸ್ತುವಾರಿ ತಹಜೀಬ್ ಖಾಜಿ ಮತ್ತು ಠಾಣೆಯ ಇತರ ಕೆಲವು ಸಿಬ್ಬಂದಿ ಆಟೋ ಮೊಬೈಲ್ ಶೋರೂಮ್‌ನಲ್ಲಿ ಆರಂಭಿಕವಾಗಿ ಪಾವತಿ ಮಾಡಲು ಬೇಕಾದ ಹಣವನ್ನು ನೀಡಿದರು ಮತ್ತು ಹಾಲ್ಡೆಗೆ ಮೋಟಾರ್‌ ಸೈಕಲ್‌ನ್ನು  ಖರೀದಿಸಿದರು.

ಈ ಬೈಕ್‌ನ ಉಳಿದ ಕಂತುಗಳನ್ನು ತಾನೇ ಪಾವತಿಸುವುದಾಗಿ ಡೆಲಿವರಿ ಮ್ಯಾನ್ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದರು. ಪೋಲೀಸರ ಈ ಮಾನವೀಯ ಕಾರ್ಯಕ್ಕೆ ಧನ್ಯವಾದ ಹೇಳಿದ ಹಾಲ್ಡೆ, ಮೊದಲು ನಾನು ನನ್ನ ಸೈಕಲ್‌ನಲ್ಲಿ ದಿನಕ್ಕೆ ಆರರಿಂದ ಎಂಟು ಆಹಾರ ಪೊಟ್ಟಣಗಳನ್ನು ತಲುಪಿಸುತ್ತಿದ್ದೆ, ಆದರೆ ಈಗ ನಾನು ಮೋಟಾರು ಬೈಕಿನಲ್ಲಿ ಚಲಿಸುವಾಗ ರಾತ್ರಿಯಲ್ಲಿ 15 ರಿಂದ 20 ಆಹಾರ ಪೊಟ್ಟಣಗಳನ್ನು ತಲುಪಿಸುತ್ತಿದ್ದೇನೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ರಾಜಸ್ತಾನದಲ್ಲಿ ಸುಡುಬಿಸಿಲಿನಲ್ಲೂ ಝೊಮಾಟೊ (Zomato) ಡೆಲಿವರಿ ಬಾಯ್‌ ಸೈಕಲ್‌ (Bicycle)ನಲ್ಲಿ ಫುಡ್ ತಂದು ಡೆಲಿವರಿ ಮಾಡಿದ ವಿಚಾರ ವೈರಲ್ ಆಗಿತ್ತು.

 

Follow Us:
Download App:
  • android
  • ios