Asianet Suvarna News Asianet Suvarna News

ಆನ್‌ಲೈನ್ ಗೇಮ್‌ನಿಂದ ಗಳಿಸಿದ ಆದಾಯಕ್ಕೂ ತೆರಿಗೆ; ಐಟಿಆರ್-ಯು ಫೈಲ್ ಮಾಡದಿದ್ರೆ ಬೀಳುತ್ತೆ ದಂಡ

*ಆನ್ ಲೈನ್ ಗೇಮ್, ಲಾಟರಿ, ಬೆಟ್ಟಿಂಗ್ ಮೂಲಕ ಗಳಿಸಿದ ಹಣಕ್ಕೂ ತೆರಿಗೆ
*ಐಟಿಆರ್-ಯು ಫೈಲ್ ಮಾಡೋದು ಅಗತ್ಯ ಎಂದ ಸಿಬಿಡಿಟಿ
*ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದ ನಂತರದ ಎರಡು ವರ್ಷಗಳೊಳಗೆ ಐಟಿಆರ್-ಯು ಫೈಲ್ ಮಾಡಲು ಅವಕಾಶ
 

Income from online games CBDT asks people to pay tax file ITR U
Author
First Published Aug 30, 2022, 5:18 PM IST

ನವದೆಹಲಿ (ಆ.30): ಕಳೆದ ಹಣಕಾಸು ಸಾಲಿನಲ್ಲಿ ನೀವು ಆನ್ ಲೈನ್ ಗೇಮ್ ಗಳ ಮೂಲಕ ಆದಾಯ ಗಳಿಸಿದ್ರೆ, ಅದಕ್ಕೂ ಕೂಡ ತೆರಿಗೆ ಕಟ್ಟಬೇಕಾಗಿದೆ. ಹೌದು, ಈ ರೀತಿ ಆನ್ ಲೈನ್ ಗೇಮ್ ಗಳ ಮೂಲಕ ಗಳಿಸಿರುವ ಆದಾಯಕ್ಕೆ ನೀವು ತೆರಿಗೆಗಳನ್ನು ಪಾವತಿಸುವ ಜೊತೆಗೆ ಅಪ್ಡೇಟ್ ಆಗಿರುವ ಐಟಿಆರ್ (ಐಟಿಆರ್-ಯು) ಕೂಡ ಸಲ್ಲಿಕೆ ಮಾಡಬೇಕು. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಆನ್ ಲೈನ್ ಗೇಮ್ ಗಳ ಮೂಲಕ ಆದಾಯ ಗಳಿಸಿರೋರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಆನ್ ಲೈನ್ ಗೇಮ್ ಗಳಲ್ಲಿ ಜಯ ಸಾಧಿಸಿ ಹಣ ಗಳಿಸಿರೋರು ಅಪ್ಡೇಟ್ ಆಗಿರುವ ರಿಟರ್ನ್ ಫೈಲ್ ಮಾಡುವ ಜೊತೆಗೆ ಅದಕ್ಕೆ ತೆರಿಗೆ ಪಾವತಿಸುವಂತೆ ಸಿಬಿಡಿಟಿ ತಿಳಿಸಿದೆ. ಆನ್ ಲೈನ್ ಗೇಮ್ ಗಳು, ಲಾಟರಿಗಳು ಹಾಗೂ ಬೆಟ್ಟಿಂಗ್ ಇತ್ಯಾದಿಯಿಂದ ಆದಾಯ ಗಳಿಸಿರುವ ತೆರಿಗೆದಾರರು ಐಟಿಆರ್-ಯು ಬಳಸಿಕೊಳ್ಳಬಹುದು. 'ಇದು ಆದಾಯ ತೆರಿಗೆ ಕಾನೂನು ಅಡಿಯಲ್ಲಿ ಇಂಥವರಿಗೆ ಮುಂದೆ ಬಂದು ತೆರಿಗೆ ಪಾವತಿಸಲು ಇರುವ ಒಂದು ಅವಕಾಶವಾಗಿದೆ. ದಂಡ ಅಥವಾ ಇತರ ಯಾವುದೇ ಕಾನೂನು ಕ್ರಮದ ಪರಿಣಾಮಗಳನ್ನು ಎದುರಿಸುವ ಬದಲು ಈ ಅವಕಾಶ ಬಳಸಿಕೊಳ್ಳಬಹುದು' ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಏನಿದು ಐಟಿಆರ್-ಯು?
ಐಟಿಆರ್-ಯು (ITR-U) ಅಂದ್ರೆ ಆದಾಯ ತೆರಿಗೆ ರಿಟರ್ನ್ ಅಪ್ಡೇಟ್. ಐಟಿಆರ್-ಯು ಅನ್ನು ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) 2022ನೇ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಆದಾಯ ತೆರಿಗೆ ಕಾಯ್ದೆ (Income Tax Act) 1961ರ ಸೆಕ್ಷನ್  139(8A) ಅಡಿಯಲ್ಲಿ ಐಟಿಆರ್-ಯು ಫೈಲ್ (File) ಮಾಡಬಹುದು. ಅಪ್ಡೇಟ್ ರಿಟರ್ನ್ (Update Return) ಆಯ್ಕೆ ತೆರಿಗೆದಾರರಿಗೆ (Taxpayers) ತೆರಿಗೆ (Tax) ಪಾವತಿಸಬೇಕಾದ ಆದಾಯವನ್ನು ಅಂದಾಜಿಸುವ ಸಂದರ್ಭದಲ್ಲಿನ ತಪ್ಪುಗಳನ್ನು ಸರಿಪಡಿಸುವ ಕಾರ್ಯವನ್ನು ತೆರಿಗೆದಾರರಿಗೆ ಸುಲಭವಾಗಿಸಲಿದೆ. 

Gautam Adani: ಗೌತಮ್‌ ಅದಾನಿ ಈಗ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ!

ಐಟಿಆರ್ -ಯು ಫೈಲ್ ಮಾಡುವವರು ಆದಾಯ ಅಪ್ಡೇಟ್ ಮಾಡಲು ಕಾರಣಗಳೇನು ಎಂಬುದನ್ನು ನಮೂದಿಸಬೇಕು. ಇದರಲ್ಲಿ ಈ ಹಿಂದೆ ಫೈಲ್ ಮಾಡದ ರಿಟರ್ನ್ ಅಥವಾ ಆದಾಯವನ್ನು ಸಮರ್ಪಕವಾಗಿ ವರದಿ ಮಾಡದಿರೋದು, ಆದಾಯದ ತಪ್ಪು ಶೀರ್ಷಿಕೆಗಳ ಆಯ್ಕೆ ಇತ್ಯಾದಿಗಳನ್ನು ಸೇರಿಸಬಹುದು. ಐಟಿಆರ್-ಯುನಲ್ಲಿ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗಿರುವ ಹೆಚ್ಚುವರಿ ಆದಾಯವನ್ನು ಸೂಚಿತ ಆದಾಯ ಶೀರ್ಷಿಕೆಗಳಡಿಯಲ್ಲಿ ನಮೂದಿಸಿದ್ರೆ ಸಾಕು. ಆದಾಯದ ವಿಸ್ಕೃತ ವಿಂಗಡಣೆಯ ಮಾಹಿತಿಯನ್ನು ಬಹಿರಂಗಪಡಿಸಬೇಕಾಗಿಲ್ಲ. 

ಯಾವಾಗ ಸಲ್ಲಿಕೆ ಮಾಡಬಹುದು?
ಐಟಿಆರ್-ಯು (ITR-U) ಸಲ್ಲಿಕೆಗೆ ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದ ನಂತರದ ಎರಡು ವರ್ಷಗಳೊಳಗೆ ಐಟಿಆರ್-ಯು ಫೈಲ್ ಮಾಡಬಹುದು. ಹೀಗಾಗಿ ಪ್ರಸಕ್ತ ಹಣಕಾಸು ಸಾಲಿನಲ್ಲಿ ಅಂದ್ರೆ  2022-23ನೇ ಸಾಲಿನಲ್ಲಿ ಒಬ್ಬ ವ್ಯಕ್ತಿ 2020-21 ಹಾಗೂ 2021-22 ಮೌಲ್ಯಮಾಪನ ವರ್ಷಕ್ಕೆ ಅಪ್ಡೇಟ್ ರಿಟರ್ನ್ (Update Return) ಫೈಲ್ ಮಾಡಬಹುದು. ಐಟಿಆರ್-ಯು ತೆರಿಗೆದಾರರಿಗೆ ಐಟಿಆರ್ ಫೈಲ್ ಮಾಡುವಾಗ ತೆರಿಗೆ ಪಾವತಿಸಲು ಮರೆತ ಯಾವುದೇ ಆದಾಯವನ್ನು (Income) ಸೇರಿಸಲು ಒಂದು ಅವಕಾಶ ಒದಗಿಸುತ್ತದೆ.

ಮತ್ತೊಮ್ಮೆ ಎಸ್ ಬಿಐ ಗ್ರಾಹಕರಿಗೆ ನಕಲಿ ಸಂದೇಶದ ಹಾವಳಿ; ನಿಮಗೂ ಬಂದಿದೆಯಾ? ಚೆಕ್ ಮಾಡಿ

ಹೊಸದಾಗಿ ಪರಿಚಯಿಸಿರುವ ರಿಟರ್ನ್ ಫೈಲಿಂಗ್  (Return Filling) ಅರ್ಜಿಯಾದ ಐಟಿಆರ್-ಯು (ITR-U) ಮುಖಾಂತರ ತೆರಿಗೆದಾರರು ಒಂದು ಲಕ್ಷ ರಿಟರ್ನ್ ಗಳನ್ನು ಫೈಲ್ ಮಾಡಿದ್ದು, ಸುಮಾರು 28 ಕೋಟಿ ರೂ. ತೆರಿಗೆಗಳನ್ನು ಆದಾಯ ತೆರಿಗೆ ಇಲಾಖೆ (Income Tax Department) ಸಂಗ್ರಹಿಸಿದೆ. ಹೀಗಾಗಿ ಆನ್ ಲೈನ್ ಗೇಮ್ , ಲಾಟರಿ ಅಥವಾ ಬೆಟ್ಟಿಂಗ್ ಮುಖಾಂತರ ನೀವು ಆದಾಯ ಗಳಿಸಿದ್ರೆ ಐಟಿಆರ್-ಯು ಸಲ್ಲಿಕೆ (ITR-U) ಮಾಡಲು ಮರೆಯಬೇಡಿ. 

Follow Us:
Download App:
  • android
  • ios