ನೀರು, ಬೆಂಕಿ ಎರಡನ್ನೂ ಉಗುಳುತ್ತಿದೆ ಈ ಕೈ ಪಂಪ್..! ವಿಡಿಯೋ ವೈರಲ್‌

ಮಧ್ಯ ಪ್ರದೇಶದ ಕೈ ಪಂಪ್‌ವೊಂದು ನೀರು, ಬೆಂಕಿ ಎರಡನ್ನೂ ಉಗುಳುತ್ತಿದೆ. ಇದು ಸ್ಥಳಿಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. 

madhya pradesh hand pump is spitting water and fire video goes viral ash

ದೇಶದ ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ಸಹ ನೀರಿಗಾಗಿ ಹಲವರು ಕೈ ಪಂಪ್‌ ಬಳಸುತ್ತಿದ್ದಾರೆ. ಆದರೆ, ಒಮ್ಮೆ ನೀರು ಹಿಡಿಯಲು ಹೋದ್ರೆ ಬೆಂಕಿ ಬಂದ್ರೆ ಏನು ಮಾಡೋದು..! ನಿರಿನ ಪಂಪ್‌ನಲ್ಲಿ ಬೆಂಕಿ ಬರೋದು ಹೇಗಪ್ಪಾ ಅಂತೀರಾ..? ಮಧ್ಯ ಪ್ರದೇಶದ ಈ ಗ್ರಾಮದ ಕೈ ಪಂಪ್‌ನಲ್ಲಿನೀರು, ಬೆಂಕಿ ಎರಡೂ ಬರುತ್ತಿದ ನೋಡಿ..  ಹೌದು, ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಸಾಮಾನ್ಯ ಕೈ ಪಂಪ್‌ಗಳಲ್ಲಿ ಒಂದು ನೀರಿನೊಂದಿಗೆ ಬೆಂಕಿಯನ್ನು ಉಗುಳಲು ಪ್ರಾರಂಭಿಸಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಳಗಾಗಿದ್ದಾರೆ. 

ಕಚ್ಚರ್ ಗ್ರಾಮದ ಕೈ ಪಂಪ್‌ನಿಂದ ಬೆಂಕಿ ಮತ್ತು ನೀರು ಉಗುಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಛತ್ತರ್‌ಪುರ ಜಿಲ್ಲೆಯ ಬಕ್ಸ್‌ವಾಹ ಪಂಚಾಯತ್‌ನಿಂದ 10 ಕಿಲೋಮೀಟರ್ ದೂರದಲ್ಲಿದೆ ಈ ಕಚ್ಚರ್‌ ಗ್ರಾಮ. ಈ ಅಸ್ವಾಭಾವಿಕ ದೃಶ್ಯದ ಬಗ್ಗೆ ಪ್ರದೇಶದ ಜನರು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಈ ಸಂಬಂಧದ ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದು, ಕೈ ಪಂಪ್ ನೀರು ಮತ್ತು ಜ್ವಾಲೆ ಎರಡನ್ನೂ ಏಕಕಾಲದಲ್ಲಿ ಉಗುಳುವುದು ನೋಡುಗರನ್ನು ಬೆಚ್ಚಿಬೀಳಿಸುತ್ತದೆ. ಇದನ್ನು ಟ್ವಿಟ್ಟರ್‌ನಲ್ಲಿ ಸಹ ಹಂಚಿಕೊಳ್ಳಲಾಗಿದೆ, ‘’ ಕೈ ಪಂಪ್‌ನಿಂದ ಬೆಂಕಿ ಮತ್ತು ನೀರು ಹೊರಬರುತ್ತಿದೆ. ಸ್ಥಳ - ಮಧ್ಯಪ್ರದೇಶದ ಬಕ್ಸ್ವಾಹದ ಕಚ್ಚರ್ ಗ್ರಾಮ’’ ಎಂದು ಟ್ವಿಟ್ಟರ್‌ನಲ್ಲಿ ಕ್ಯಾಪ್ಷನ್‌ ನೀಡಲಾಗಿದೆ. 

ಗಣೇಶೋತ್ಸವಕ್ಕೆ ಯುಪಿಯಲ್ಲಿ ರೆಡಿಯಾಗ್ತಿದೆ 18 ಅಡಿ ಎತ್ತರದ ಗೋಲ್ಡನ್ ಗಣೇಶ

ಮೀಥೇನ್‌ ಗ್ಯಾಸ್‌ ಕಾರಣ..!

ಹೌದು, ಮಧ್ಯ ಪ್ರದೇಶದ ಬಕ್ಸ್‌ವಾಹ ಅರಣ್ಯದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯ ನಿವಾಸಿಗಳು, ಛತ್ತರ್‌ಪುರ ಜಿಲ್ಲೆಯಲ್ಲಿ ಕೈ ಪಂಪ್‌ನಿಂದ ಏಕಕಾಲದಲ್ಲಿ ಬೆಂಕಿ ಮತ್ತು ನೀರು ಹೊರಬರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಆದರೆ, ಇದಕ್ಕೆ ಕಾರಣವನ್ನು ನೋಡೋದಾದ್ರೆ ಅಪೋಕ್ಯಾಲಿಪ್ಸ್ ವಿದ್ಯಮಾನ ಎಂದು ಹೇಳಬಹುದು. ಈ ವಿದ್ಯಮಾನದ ಪ್ರಕಾರ, ಹೆಚ್ಚು ದಹಿಸುವ ಮೀಥೇನ್ ಅನಿಲವನ್ನು ಭೂಮಿಯ ಕೆಳಗಿನ ಆಳದಿಂದ ಬಿಡುಗಡೆ ಮಾಡುವ ಸಂದರ್ಭ ಎಂದು ಹೇಳಲಾಗುತ್ತದೆ. 
ಇದೇ ರೀತಿ, ಸೆಡಿಮೆಂಟರಿ ಬಂಡೆಗಳಲ್ಲಿನ ಸಸ್ಯಗಳು ಮತ್ತು ಪ್ರಾಣಿಗಳ ಅವಶೇಷಗಳು (ಮರಳುಕಲ್ಲು, ಸುಣ್ಣದ ಕಲ್ಲು ಮತ್ತು ಬಕ್ಸ್ವಾಹಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಶೇಲ್) ರಾಸಾಯನಿಕ ಕ್ರಿಯೆಯ ಕಾರಣದಿಂದಾಗಿ ಮೀಥೇನ್ ಅನ್ನು ಉತ್ಪಾದಿಸಲು ಖಿನ್ನತೆಯೊಂದಿಗೆ (ಸೂಕ್ಷ್ಮ ಮರಳು) ಜೌಗು ಪ್ರದೇಶದಲ್ಲಿ ಸಂಗ್ರಹವಾಗುತ್ತವೆ ಎಂದು ವಿವರಿಸಿದರು. (ಉತ್ತಮ ಮರಳು) ರಾಸಾಯನಿಕ ಕ್ರಿಯೆಯಿಂದ ಮೀಥೇನ್ ಉತ್ಪಾದಿಸಿ ತಾಪನ ಅಥವಾ ಸುಡುವಿಕೆಯು ಅನಿಲದ ಸಾಂದ್ರತೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ, ಇದು ನೀರಿನ ಏರಿಕೆಗೆ ಕಾರಣವಾಗುತ್ತದೆ ಎಂದು  ಭೋಪಾಲ್‌ನ ಸರ್ಕಾರಿ ವಿಜ್ಞಾನ ಕಾಲೇಜಿನ ಡಾ. ಜ್ಞಾನೇಂದ್ರ ಪ್ರತಾಪ್ ಸಿಂಗ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಜನರು ಮಾತ್ರ ಈ ನೀರು, ಬೆಂಕಿ ಎರಡನ್ನೂ ಉಗುಳುತ್ತಿರುವ ಹ್ಯಾಂಡ್‌ ಪಂಪ್‌ ಅನ್ನು ಕಂಡು ಅಚ್ಚರಿಯ ಜೊತೆಗೆ ಭಯಭೀತರೂ ಆಗಿದ್ದಾರೆ.

ಹಿರಿಯಜ್ಜಿಯ ಶವಪೆಟ್ಟಿಗೆ ಮುಂದೆ ಕುಟುಂಬದವರ ಸಖತ್ ಪೋಸ್‌: ಫೋಟೋ ವೈರಲ್

ಅನುರಾಗ್‌ ದ್ವಾರಿ ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಸುಮಾರು 3 ಸಾವಿರ ಜನರು ವೀಕ್ಷಿಸಿದ್ದಾರೆ. ಅಲ್ಲದೆ, ಇದನ್ನು 69 ಜನ ಈವರೆಗೆ ರೀಟ್ವೀಟ್‌ ಮಾಡಿದ್ದು, 200 ಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ. ಆಗಸ್ಟ್‌ 25, 2022 ರ ಮಧ್ಯಾಹ್ನ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಹಲವರು ವಿಭಿನ್ನವಾಗಿ ಕಮೆಂಟ್‌ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios