Asianet Suvarna News Asianet Suvarna News

ಹಿರಿಯಜ್ಜಿಯ ಶವಪೆಟ್ಟಿಗೆ ಮುಂದೆ ಕುಟುಂಬದವರ ಸಖತ್ ಪೋಸ್‌: ಫೋಟೋ ವೈರಲ್

ಕೇರಳದ ಕುಟಂಬವೊಂದು ತಮ್ಮ ಕುಟುಂಬದ ಹಿರಿಯಜ್ಜಿಯನ್ನು ಬಹಳ ಸಂಭ್ರಮದಿಂದ ಅಂತಿಮ ಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅಜ್ಜಿಯ ಶವಪೆಟ್ಟಿಗೆಯ ಮುಂದೆ ಇಡೀ ಕುಟುಂಬದ ಸದಸ್ಯರು ನಗು ನಗುತ್ತಾ ಪೋಸ್‌ ಕೊಟ್ಟಿದ್ದಾರೆ.

Kerala family and relatives gave smiling pose at grad mother funeral, photo goes viral akb
Author
First Published Aug 25, 2022, 10:43 AM IST

ಪ್ರೀತಿಪಾತ್ರರ ಅಗಲಿಕೆ ಬಹುತೇಕರಿಗೆ ಅರಗಿಸಿಕೊಳ್ಳಲಾಗದಷ್ಟು ನೋವು ನೀಡುತ್ತದೆ. ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ ಊರವರನ್ನೆಲ್ಲಾ ಕರೆದು ಸಂಬಂಧಿಕರನ್ನೆಲ್ಲಾ ಜೊತೆ ಸೇರಿಸಿ, ಅತ್ತು ಕರೆದು ಗೋಗರೆದು ಗೋಳಾಡಿ ಒಲ್ಲದ ಮನಸ್ಸಿನಿಂದ ಅವರನ್ನು ಬಾರದ ಲೋಕಕ್ಕೆ ಕಳುಹಿಸಿ ಕೊಡಲಾಗುತ್ತದೆ. ಹಾಗೆಯೇ ಮೃತರ ಅಂತ್ಯಸಂಸ್ಕಾರ ಒಂದೊಂದು ಕಡೆ ಒಂದೊಂದು ಜಾತಿ, ಸಮುದಾಯ ಧರ್ಮಗಳಲ್ಲಿ ಒಂದೊಂದು ರೀತಿ ಇದೆ. ಒಂದೊಂದು ಕಡೆ ಡಾನ್ಸ್ ಮಾಡುತ್ತಾ ಬ್ಯಾಂಡ್ ವಾದನಗಳೊಂದಿಗೆ ಮೆರವಣಿಗೆ ಮಾಡಿ ಕೊನೆಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ ಈಗ ಕೇರಳದ ಕುಟುಂಬವೊಂದು ಎಲ್ಲಾ ಹಳೆ ಸಂಪ್ರದಾಯಗಳನ್ನು ಮುರಿದು ಹೊಸ ಟ್ರೆಂಡ್‌ ಶುರು ಮಾಡಿದ್ದು, ಇದು ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಲ್ಲದೇ, ಈ ರೀತಿಯ ಯೋಚನೆಯೇ ಒಂದು ರೀತಿ ಕಚಗುಳಿ ಇಟ್ಟಂತೆ ಮಾಡುತ್ತಿದೆ. ಹಾಗಿದ್ದರೆ ಕೇರಳದ ಕುಟುಂಬ ಮಾಡಿದ್ದೇನು ಗೊತ್ತಾ? 

ಫೋಟೋ, ಹೌದು ಕೇರಳದ ಕುಟಂಬವೊಂದು ತಮ್ಮ ಕುಟುಂಬದ ಹಿರಿಯಜ್ಜಿಯನ್ನು ಬಹಳ ಸಂಭ್ರಮದಿಂದ ಅಂತಿಮ ಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅಜ್ಜಿಯ ಶವಪೆಟ್ಟಿಗೆಯ ಮುಂದೆ ಇಡೀ ಕುಟುಂಬದ ಸದಸ್ಯರು ನಗು ನಗುತ್ತಾ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋ ನೋಡಿ ಇಂಟರ್‌ನೆಟ್ ಕೂಡ ಕೆಲ ಕ್ಷಣ ಸ್ತಬ್ಧಗೊಂಡಿದೆ! ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದ ಪತ್ನತಿಟ್ಟ ಜಿಲ್ಲೆಯ ಮಲ್ಲಪಲ್ಲಿ ಗ್ರಾಮದಲ್ಲಿ. ಇಲ್ಲಿ 95 ವರ್ಷದ ಮರಿಯಮ್ಮ ಎಂಬುವವರ ಅಂತ್ಯಸಂಸ್ಕಾರ ಕಳೆದ ವಾರ ನಡೆದಿತ್ತು. ಆಗಸ್ಟ್ 17 ರಂದು ಈ ಮರಿಯಮ್ಮ ಸಾವನ್ನಪ್ಪಿದ್ದರು. ಸಾವಿಗೂ ಮೊದಲು ಸುಮಾರು ಒಂದು ವರ್ಷ ಕಾಲ ಮರಿಯಮ್ಮ ತಮ್ಮ ವಯೋಸಹಜ ಕಾಯಿಲೆಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದರು.

ಮಗ– ಸೊಸೆ ಮಕ್ಕಳ ಮಾಡಿಕೊಳ್ತಿಲ್ಲ, ಪಾಲಕರ ರೋದನ ಕೇಳೋರಿಲ್ಲ!

ಆದರೆ ಕಳೆದ ವಾರ ಅವರ ಅನಾರೋಗ್ಯ ಬಿಗಡಾಯಿಸಿದ್ದು, ಅವರು ಸಾವನ್ನಪ್ಪಿದ್ದರು. ಅವರಿಗೆ ಒಂಭತ್ತು ಮಕ್ಕಳಿದ್ದು, 19 ಮೊಮ್ಮಕ್ಕಳಿದ್ದರು. ಇವರೆಲ್ಲರೂ ಜಗತ್ತಿನ ವಿವಿಧ ದೇಶಗಳಲ್ಲಿ ಇದ್ದು, ಇವರ ಸಾವಿನ ಸಮಯದಲ್ಲಿ ಎಲ್ಲರೂ ಬಂದು ಮನೆ ಸೇರಿದ್ದರು. ಆದರೆ ಈ ಫೋಟೋ ತೆಗೆಯುವ ಉದ್ದೇಶ ವೈರಲ್ ಮಾಡಬೇಕೆಂಬುದು ಆಗಿರಲಿಲ್ಲ. ಮರಿಯಮ್ಮ ಖುಷಿಯಾಗಿ ತಮ್ಮ 95 ವಸಂತಗಳನ್ನು ಕಳೆದಿದ್ದು, ಆಕೆ ಎಲ್ಲಾ ಮಕ್ಕಳು ಮೊಮ್ಮಕ್ಕಳನ್ನು ತುಂಬಾ ಇಷ್ಟ ಪಡುತ್ತಿದ್ದಳು. ಇವರೆಲ್ಲರೂ ಆಕೆಯೊಂದಿಗೆ ಕಳೆದ ಸಮಯದ ನೆನಪಿಗಾಗಿ ಈ ಫೋಟೋ ತೆಗೆಯಲಾಗಿತ್ತು ಎಂದು ಕುಟುಂಬದ ಸಂಬಂಧಿ ಬಾಬು ಉಮ್ಮನ್ ಹೇಳಿದರು. ಅಂತಿಮ ಸಂಸ್ಕಾರದ ಪ್ರಾರ್ಥನೆಗಳನ್ನು ನಡೆಸಿದ ಬಳಿಕ ಆಕೆಯೊಂದಿಗೆ ಎಲ್ಲರೂ ಇರುವ ಫೋಟೋ ತೆಗೆಯಲಾಯಿತು. ಈ ಕ್ಷಣವನ್ನು ಉಳಿಸಿಕೊಳ್ಳಲು ಕುಟುಂಬ ಬಯಸಿತ್ತು ಎಂದು ಅವರು ಹೇಳಿದರು. 

ಆದರೆ ಈ ಫೋಟೋ ಶೂಟ್ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ, ಮರಿಯಮ್ ಕುಟುಂಬದ ಪರ ಮಾತನಾಡಿದ್ದು, ಇದೊಂದು ಅಂತಿಮ ವಿದಾಯ, ಜೀವನಪೂರ್ತಿ ಖುಷಿಯಾಗಿ ಬದುಕಿದ ಒಬ್ಬರನ್ನು ನಗುನಗುತ್ತಾ ಕಳುಹಿಸಿಕೊಡುವುದಕ್ಕಿಂತ ಖುಷಿಯಾದುದು ಬೇರೇನಿದೆ. ಈ ಫೋಟೋಗೆ ನಕರಾತ್ಮಕವಾಗಿ ಪ್ರತಿಕ್ರಿಯಿಸುವುದು ಅಗತ್ಯವಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 

ಅಜ್ಜ-ಅಜ್ಜಿ ಅತಿ ಮುದ್ದಿನಿಂದ ಮೊಮ್ಮಕ್ಕಳು ಹಾಳಾಗ್ತಾರಾ? Study ಹೇಳುವುದೇನು?

ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕೇರಳದಲ್ಲಿ ದೇಶದ ಬಹುತೇಕ ಹೊಸತನಗಳು ಅದೂ ಮಾರಕ ರೋಗಗಳು ಇರಬಹುದು, ಹೊಸತೆಲ್ಲವೂ ಮೊದಲು ಆರಂಭವಾಗುವುದು ದೇವರನಾಡು ಕೇರಳದಲ್ಲಿ. ಹಾಗೆಯೇ ಈಗ ಈ ಕೊನೆಯ ಕ್ಷಣದ ಫೋಟೋ ವೈರಲ್‌ ಆಗಿದ್ದು, ಮುಂದೆ ಇದೇ ಒಂದು ಟ್ರೆಂಡ್ ಆದರೂ ಆಗಬಹುದು. 
 

Follow Us:
Download App:
  • android
  • ios