Asianet Suvarna News Asianet Suvarna News

ಗಣೇಶೋತ್ಸವಕ್ಕೆ ಯುಪಿಯಲ್ಲಿ ರೆಡಿಯಾಗ್ತಿದೆ 18 ಅಡಿ ಎತ್ತರದ ಗೋಲ್ಡನ್ ಗಣೇಶ

ದೇಶಾದ್ಯಂತ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ರಾಜ್ಯದಲ್ಲಿ ಗಣೇಶ ಕೂರಿಸುವ ಬಗ್ಗೆ ಹಲವು ಗಲಾಟೆಗಳ ನಡುವೆಯೂ ಅನೇಕರು ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಉತ್ತರಪ್ರದೇಶದಲ್ಲಿ 18 ಅಡಿ ಎತ್ತರದ ಗೋಲ್ಡನ್‌ ಗಣೇಶನನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

Ganesh Chaturthi 2022, 18-FeetTall Golden Ganesha being sculpted in Chandausi Uttar Pradesh akb
Author
First Published Aug 25, 2022, 2:59 PM IST

ಲಕ್ನೋ: ದೇಶಾದ್ಯಂತ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ರಾಜ್ಯದಲ್ಲಿ ಗಣೇಶ ಕೂರಿಸುವ ಬಗ್ಗೆ ಹಲವು ಗಲಾಟೆಗಳ ನಡುವೆಯೂ ಅನೇಕರು ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಉತ್ತರಪ್ರದೇಶದಲ್ಲಿ 18 ಅಡಿ ಎತ್ತರದ ಗೋಲ್ಡನ್‌ ಗಣೇಶನನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಉತ್ತರಪ್ರದೇಶ ಚಂದೌಸಿಯಲ್ಲಿ ಚಿನ್ನದ ಲೇಪನದ 18 ಅಡಿ ಗಣೇಶನ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಗಣೇಶೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.

ಈ ವರ್ಷ ಗಣೇಶ ಚತುರ್ಥಿ ಸೆಪ್ಟೆಂಬರ್ 31ರಂದು ನಡೆಯಲಿದ್ದು, ಅಂದು ಮನೆ, ಶಾಲೆ, ಊರು, ಕೇರಿಗಳಲ್ಲಿ ಜನ ಗಣೇಶನನ್ನು ಕೂರಿಸಿ ಹಬ್ಬ ಶುರು ಮಾಡುತ್ತಾರೆ. ಮುಂದಿನ 10 ದಿನಗಳ ಕಾಲ ಭರ್ಜರಿ ಆಚರಣೆ ಪೂಜೆ ಪುನಸ್ಕಾರಗಳು ನಡೆದು ಸೆಪ್ಟೆಂಬರ್ 9ರಂದು ಗಣೇಶನನ್ನು ನಿಮಜ್ಜನ ಮಾಡಲಾಗುತ್ತದೆ. ಆದರೆ ಗಣೇಶನ ಆರಾಧನೆ ಒಂದೊಂದು ಕಡೆ ಒಂದೊಂದು ರೀತಿ ನಡೆಯುತ್ತದೆ. ಕೆಲವು ಕಡೆ ಮೂರು ದಿನ ಆರು ದಿನ ಹೀಗೆ ಪೂಜೆಯ ದಿನಗಳು ಬದಲಿರುತ್ತವೆ. 18 ಅಡಿ ಎತ್ತರದ ಈ ಚಿನ್ನದ ಲೇಪನದ ಗಣೇಶನನ್ನು ತಿರುಪತಿಯ ಬಾಲಾಜಿ ಮಾದರಿಯಲ್ಲಿ ಚಿನ್ನದ ಅಲಂಕಾರಿಕ ವಸ್ತುಗಳೊಂದಿಗೆ ಸಿದ್ಧಪಡಿಸಲಾಗುತ್ತಿದೆ ಎಂದು ಅಜಯ್ ಆರ್ಯ ಹೇಳಿದ್ದಾರೆ. ಗಣೇಶೋತ್ಸವವನ್ನು ದೇಶಾದ್ಯಂತ ಭಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

ಇತ್ತ ಮಹಾರಾಷ್ಟ್ರದಲ್ಲೂ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕೋವಿಡ್‌ನಿಂದಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಎರಡು ವರ್ಷಗಳಿಂದ ಅವಕಾಶ ಇರಲಿಲ್ಲ. ಹೀಗಾಗಿ ಎರಡು ವರ್ಷಗಳ ಬ್ರೇಕ್‌ನ ನಂತರ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲು ಗಣೇಶ ಮಹಾ ಮಂಡಳಗಳು, ಜನ ಸಾಮಾನ್ಯರು, ವಿವಿಧ ಸಂಘಟನೆಗಳು ಕಾತುರದಿಂದ ಕಾಯುತ್ತಿವೆ. ಇನ್ನು ಮುಂಬೈನ ಗಣೇಶೋತ್ಸವಕ್ಕೆ ತನ್ನದೇ ಆದ ವೈವಿಧ್ಯಮಯ ಇತಿಹಾಸವಿದೆ. ಗಣಪತಿ ಬೊಪ್ಪ ಮೊರೆಯಾ ಎಂಬ ಕೂಗು ಮುಂಬೈನ ಬೀದಿ ಬೀದಿಗಳು ಗಲ್ಲಿ ಗಲ್ಲಿಗಳಲ್ಲಿ ಯಾವುದೇ ಜಾತಿ ಮತಗಳ ಬೇಧವಿಲ್ಲದೇ ಕೇಳಿ ಬರುತ್ತದೆ. ಆಗಸ್ಟ್ 31 ರಿಂದ ಆರಂಭವಾಗುವ ಆದಿವಂದ್ಯನ ಹಬ್ಬಕ್ಕೆ ಮಹಾರಾಷ್ಟ್ರ ಸರ್ಕಾರ ಈ ಬಾರಿ ಯಾವುದೇ ಕಟ್ಟಳೆಗಳನ್ನು ಹಾಕದಿರಲು ನಿರ್ಧರಿಸಿದೆ. 

ಗಣೇಶೋತ್ಸವಕ್ಕೆ ಸರ್ಕಾರದಿಂದ ಮಾರ್ಗಸೂಚಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

ಮುಂಬೈನ ಅತಿ ಶ್ರೀಮಂತ ಗಣಪತಿ ಮಂಡಲ ಎಂಬ ಹಿರಿಮೆ ಹೊಂದಿರುವ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸೇವಾ ಮಂಡಲದ ಗಣೇಶನಿಗೆ ಈ ವರ್ಷ ದಾಖಲೆಯ 316.40 ಕೋಟಿ ರೂಪಾಯಿಯ ವಿಮೆ ಮಾಡಿಸಲಾಗಿದೆ. ಪ್ರತಿವರ್ಷವೂ ಈ ಗಣೇಶನಿಗೆ ವಿಮೆ ಮಾಡಿಸಲಾಗುತ್ತದೆ. ಈ ಗಣೇಶನಿಗೆ ಭಾರಿ ಮೊತ್ತದ ಆಭರಣಗಳನ್ನು ತೊಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಭರಣದ ಸುರಕ್ಷತೆ ಲೆಕ್ಕದಲ್ಲಿ ಗಣೇಶನಿಗೆ ವಿಮೆ ಮಾಡಿಸಲಾಗಿದೆ. 

ಅಪ್ಪು ರೂಪಕದ ಗಣೇಶ ಮೂರ್ತಿಗೆ ಬಹುಬೇಡಿಕೆ

ಜಿಎಸ್‌ಬಿ ಮಂಡಲ್‌ ಗಣೇಶನಿಗೆ ತೊಡಿಸುವ 66 ಕೆಜಿ ಚಿನ್ನದ ಆಭರಣ, 295 ಕೆಜಿ ಬೆಳ್ಳಿ ಹಾಗೂ ಇನ್ನಿತರ ಬೆಲೆಬಾಳುವ ಆಭರಣಗಳಿಗೆ ನ್ಯೂ ಇಂಡಿಯಾ ಅಶ್ಯುರೆನ್ಸ್‌ನಿಂದ 31.97 ಕೋಟಿ ರು. ಮೊತ್ತದ ರಿಸ್ಕ್‌ ಇನ್ಸುರೆನ್ಸ್‌ ಹಾಗೂ ಭದ್ರತಾ ಸಿಬ್ಬಂದಿ, ಅರ್ಚಕರು, ಅಡುಗೆ ಮಾಡುವವರು, ಸ್ವಯಂ ಸೇವಕರಿಗೂ ಒಟ್ಟಾರೆ 263 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಬೆಂಕಿ ಅಪಘಾತ, ಭೂಕಂಪ ಮೊದಲಾದ ದುರ್ಘಟನೆಗಳ ವಿರುದ್ಧವೂ 1 ಕೋಟಿ ರೂಪಾಯಿಯ ವಿಮೆ ಮಾಡಿಸಲಾಗಿದೆ. ಜೊತೆಗೆ ಸಾರ್ವಜನಿಕ ಹೊಣೆಗಾರಿಕೆ ಅಡಿಯಲ್ಲಿ ಭಕ್ತರು, ಗಣಪತಿ ಕೂರಿಸುವ ಪಂಡಾಲ್‌, ಕ್ರೀಡಾಂಗಣ ಮೊದಲಾದವುಗಳಿಗೂ 20 ಕೋಟಿ ವಿಮೆ ಮಾಡಿಸಲಾಗಿದೆ.
 

Follow Us:
Download App:
  • android
  • ios