ನದಿಯಲ್ಲಿ ಸ್ನಾನ ಮಾಡುತ್ತಿದ್ದ ಹತ್ತು ವರ್ಷದ ಕಂದನನ್ನು ಮೊಸಳೆಯೊಂದು ನುಂಗಿದ ಭಯಾನಕ ಘಟನೆ ಮಧ್ಯಪ್ರದೇಶದ ಚಂಬಲ್‌ನಲ್ಲಿ ನಡೆದಿದೆ. ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದ್ದು, ಸೀದಾ ನದಿಯೊಳಗೆ ಎಳೆದುಕೊಂಡು ಹೋಗಿದೆ.
ಛಂಬಲ್: ನದಿಯಲ್ಲಿ ಸ್ನಾನ ಮಾಡುತ್ತಿದ್ದ ಹತ್ತು ವರ್ಷದ ಕಂದನನ್ನು ಮೊಸಳೆಯೊಂದು ನುಂಗಿದ ಭಯಾನಕ ಘಟನೆ ಮಧ್ಯಪ್ರದೇಶದ ಚಂಬಲ್‌ನಲ್ಲಿ ನಡೆದಿದೆ. ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದ್ದು, ಸೀದಾ ನದಿಯೊಳಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಕೆಲ ಸ್ಥಳೀಯರು ಕೂಡ ಅಲ್ಲೇ ಇದ್ದು, ಬಾಲಕನ ಕುಟುಂಬದವರು ಹಾಗೂ ಸಂಬಂಧಿಕರನ್ನು ತಕ್ಷಣವೇ ಹೋಗಿ ಕರೆತಂದು ಮೊಸಳೆಯನ್ನು ಹಿಡಿದಿದ್ದಾರೆ. ಅಲ್ಲದೇ ಹಾಗೂ ನೆಟ್‌ನ ಸಹಾಯದಿಂದ ಮೊಸಳೆಯನ್ನು ನದಿಯಿಂದ ಮೇಲೆ ಎಳೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಮೊಸಳೆ ಹಿಡಿಯುವ ತಂಡ ಹಾಗೂ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದ್ದು, ಆಕ್ರೋಶಕ್ಕೀಡಾದ ಜನರ ಕೈಯಿಂದ ಮೊಸಳೆಯನ್ನು ಹಿಡಿಯುವ ಪ್ರಯತ್ನ ಮಾಡಿದರು. ಆದರೆ ಬಾಲಕನ ಕುಟುಂಬದವರು ಮಾತ್ರ ಮೊಸಳೆಯನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲು ಸಿದ್ಧರಿರಲಿಲ್ಲ. ಸಂಜೆಯವರೆಗೂ ಅವರು ಅರಣ್ಯ ಹಾಗೂ ಪೊಲೀಸ್ ಇಲಾಖೆಯವರ ಮನವಿಗೆ ಒಪ್ಪಿರಲಿಲ್ಲ. ಅಲ್ಲದೇ ಬಾಲಕನ ಕುಟುಂಬದವರು ಮೊಸಳೆಯ ದೇಹದ ಒಳಗೆ ಬಾಲಕ ಜೀವಂತವಾಗಿರಬಹುದು ಎಂಬ ಭರವಸೆಯನ್ನು ಹೊಂದಿದ್ದರು. ಅಲ್ಲದೇ ಮೊಸಳೆ ಮಗುವನ್ನು ಹೊರಗೆ ಉಗುಳಿದರೆ ಮಾತ್ರ ಮೊಸಳೆಯನ್ನು ಜೀವಂತವಾಗಿ ಹೊರಗೆ ಬಿಡುವುದಾಗಿ ಪಟ್ಟು ಹಿಡಿದರು.
Vijayapura News: ಕೃಷ್ಣಾತೀರದ ನರಭಕ್ಷಕ ಮೊಸಳೆಗೆ ಮತ್ತೊಂದು ಬಲಿ: ಗ್ರಾಮಸ್ಥರಲ್ಲಿ ಆತಂಕ
ಈ ಬಗ್ಗೆ ಮಾತನಾಡಿದ ರಘುನಾಥ್‌ಪುರ ಪೊಲೀಸ್ ಸ್ಟೇಷನ್ (Raghunathpur police station) ಇನ್‌ಚಾರ್ಜ್ ಶ್ಯಾಮ್ ವೀರ್ ಸಿಂಗ್ ತೋಮರ್ (Shyam Veer Singh Tomar), ಬಾಲಕ ಸ್ನಾನ ಮಾಡುವ ವೇಳೆ ಈಜುತ್ತಾ ನದಿಯ ಆಳಕ್ಕೆ ಹೋಗಿದ್ದ. ಗ್ರಾಮಸ್ಥರು ಬಾಲಕನನ್ನು ಮೊಸಳೆ ನುಂಗಿದೆ ಎಂದು ಹೇಳುತ್ತಿದ್ದಾರೆ. ಮೊಸಳೆಯ ಹೊಟ್ಟೆಯಲ್ಲಿ ಬಾಲಕನಿದ್ದಾನೆ ಎಂದು ಅವರು ಮೊಸಳೆಯನ್ನು ಕೋಲು ಹಾಗೂ ನೆಟ್‌ನಿಂದ ಸೆರೆ ಹಿಡಿದಿದ್ದಾರೆ ಎಂದು ಅವರು ಹೇಳಿದರು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.
ಕೃಷ್ಣಾತೀರದಲ್ಲಿ ಮೊಸಳೆಗೆ ಬಲಿ
ಕಳೆದ ತಿಂಗಳು ಕೃಷ್ಣಾತೀರದ ನರಭಕ್ಷಕ ಮೊಸಳೆಗೆ (Crocodile) ಮತ್ತೊಂದು ಜೀವ ಬಲಿಯಾಗಿತ್ತು. ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೃಷ್ಣಾನದಿ ತೀರದ ಹಂಡರಗಲ್ ಗ್ರಾಮದ ನದಿತೀರದಲ್ಲಿ ವ್ಯಕ್ತಿಯೊಬ್ಬರು ಮೊಸಳೆಗೆ ಬಲಿಯಾಗಿದ್ದರು. ಹಂಡರಗಲ್ ಗ್ರಾಮದ ನಾಗಪ್ಪ ಸಂಜೀವಪ್ಪ ಉಂಡಿ (55) ಶವವಾಗಿ ಪತ್ತೆಯಾಗಿದ್ದರು. ಕೃಷ್ಣಾನದಿ ತೀರಕ್ಕೆ ನಾಗಪ್ಪ ಉಂಡಿ ಆಡು ಮೇಯಿಸಲು ಹೋಗಿದ್ದಾಗ ಘಟನೆ ನಡೆದಿತ್ತು. ಆಡುಗಳು ಮನೆಗೆ ಮರಳಿದ್ದವು. ಆದರೆ ನಾಗಪ್ಪ ನಾಪತ್ತೆಯಾಗಿದ್ದರು.
ಮೂರು ಸಿಂಹಗಳೊಂದಿಗೆ ಜೀವಕ್ಕಾಗಿ ಕಾದಾಡುತ್ತಿರುವ ಮೊಸಳೆ: ವಿಡಿಯೋ ವೈರಲ್
ಗ್ರಾಮದ ನದಿತೀರದಲ್ಲಿ ನಂತರ ನಾಗಪ್ಪ ಶವ ಪತ್ತೆಯಾಗಿತ್ತು. ನರಭಕ್ಷಕ ಮೊಸಳೆಗಳಿಗೆ ಮನುಷ್ಯರು ಬಲಿಯಾದ ಎರಡನೇ ಪ್ರಕರಣ ಇದಾಗಿದ್ದು, ಇದೇ ಹಂಡರಗಲ್ ಗ್ರಾಮದ ಬಳಿಯ ನಾಗರಾಳ ಗ್ರಾಮದ ವ್ಯಕ್ತಿ ಕಳೆದ ತಿಂಗಳು ಜೀವ ಕಳೆದುಕೊಂಡಿದ್ದರು. ಇದೇ ಜೂನ್ ತಿಂಗಳ 2ರಂದು ನಾಗರಾಳ ಗ್ರಾಮದ ಮಲ್ಲನಗೌಡ.ಎಸ್.ಬಿರಾದಾರ (50) ಮೊಸಳೆಗೆ ಬಲಿಯಾಗಿದ್ದರು. ನದಿತೀರಕ್ಕೆ ಸ್ನಾನಕ್ಕೆಂದು ಹೋಗಿದ್ದ ಮಲ್ಲನಗೌಡ ನಾಪತ್ತೆಯಾಗಿದ್ದರು.
ಗ್ರಾಮಸ್ಥರ ಆಕ್ರೋಶ
ನರಭಕ್ಷಕ ಮೊಸಳೆಗಳ ಕಾರಣದಿಂದಾಗಿ ನದಿತೀರದ ಗ್ರಾಮದವರಲ್ಲಿ ಆತಂಕ ಸೃಷ್ಟಿಯಾಗಿತ್ತು. ನರಭಕ್ಷಕ ಮೊಸಳೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಮೊದಲ ಮೊಸಳೆ ಬಲಿಯಾದೊಡನೆ ಅರಣ್ಯ ಇಲಾಖೆ ವ್ಯಾಪಕ ಜಾಗೃತಿ ಪ್ರಚಾರ ಮಾಡಬೇಕಿತ್ತು. ಮಾಡಿದ್ದರೆ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು.