Asianet Suvarna News Asianet Suvarna News

ಆಸ್ಪತ್ರೆಯ ಐಸಿಯು ಒಳಗೆ ಹಸುವಿನ ಓಡಾಟ: ವಿಡಿಯೋ ವೈರಲ್

ಇಲ್ಲೊಂದು ಕಡೆ ಇಂತಹ ತೀವ್ರ ಜಾಗರೂಕವೆನಿಸಿದ ತೀವ್ರ ನಿಗಾ ಘಟಕದ ಒಳಗೆ ಹಸು ಪ್ರವೇಶ ಮಾಡಿ ಬಯಲಿನಂತೆ ಅಡ್ಡಾಡುತ್ತಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Madhya Pradesh cow freely roaming in District Hospital, ward boy suspended after video went viral akb
Author
First Published Nov 20, 2022, 2:19 PM IST

ಮಧ್ಯಪ್ರದೇಶ: ಆಸ್ಪತ್ರೆಯ ತೀವ್ರ ನಿಗಾ ಘಟಕದ ಒಳಗೆ ಯಾರಿಗೂ ಪ್ರವೇಶವಿರುವುದಿಲ್ಲ. ಕೆಲವೊಮ್ಮೆ ವೈದ್ಯರ ಅನುಮತಿಯ ಮೇರೆಗೆ ರೋಗಿಯ ಬಂಧುಗಳಲ್ಲಿ ಯಾರಿಗಾದರು ಒಬ್ಬರಿಗೆ ಪ್ರವೇಶ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಇಂತಹ ತೀವ್ರ ಜಾಗರೂಕವೆನಿಸಿದ ತೀವ್ರ ನಿಗಾ ಘಟಕದ ಒಳಗೆ ಹಸು ಪ್ರವೇಶ ಮಾಡಿ ಬಯಲಿನಂತೆ ಅಡ್ಡಾಡುತ್ತಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯಪ್ರದೇಶದ (Madhya Pradesh) ರಾಜ್ಗರ್ ಜಿಲ್ಲೆಯ (Rajgarh district) ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯೊಳಗೆ ಹಾಯಾಗಿ ಸಾಗುತ್ತಿರುವ ಹಸು ಅಲ್ಲಿನ ಕಸದ ಬುಟ್ಟಿಯಲ್ಲಿ ಹಾಕಿದ್ದ ವೈದ್ಯಕೀಯ ಕಸ (medical waste)ನ್ನು ತಿನ್ನುತ್ತಿರುವುದು ಕಾಣಿಸುತ್ತಿದೆ. ಆಸ್ಪತ್ರೆಯಲ್ಲಿ ದಿನವಿಡೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಹಸುವನ್ನು ಓಡಿಸಲು ಮಾತ್ರ ಯಾರೂ ಇರಲಿಲ್ಲ. ಅಲ್ಲದೇ ಈ ಆಸ್ಪತ್ರೆ ಬಿಡಾಡಿ ದನಗಳ ಕಾಟ ತಡೆಯಲಾರದೇ ಹಸು ಹಿಡಿಯುವವರನ್ನು ಕೂಡ ನೆಮ್ಮಿಸಿದ್ದು, ಈ ಘಟನೆ ನಡೆಯುವ ವೇಳೆ ಅವರಾರು ಸ್ಥಳದಲ್ಲಿ ಇರಲಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(social Media) ವೈರಲ್ ಆಗುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಹಾಗೂ ಇಬ್ಬರು ಆಸ್ಪತ್ರೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. 

ಈ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಸ್ಪತ್ರೆ ಸರ್ಜನ್ ರಾಜೇಂದ್ರ ಕಟರಿಯಾ (Rajendra Kataria) , ಈ ಘಟನೆ ನಮ್ಮ ಗಮನಕ್ಕೆ ಬಂದಿದ್ದು, ವಾರ್ಡ್ ಬಾಯ್ ಹಾಗೂ ಸೆಕ್ಯೂರಿಟಿ ಗಾರ್ಡ್ (security guard) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಆಸ್ಪತ್ರೆಯೆ ಹಳೆಯ ಕೋವಿಡ್ ತೀವ್ರ ನಿಗಾ ಘಟಕದ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. 

Vande Bharat Express: ಮೈಸೂರು-ಚೆನ್ನೈ ರೈಲಿಗೆ ಹಸು ಡಿಕ್ಕಿ, ಮುಂಭಾಗಕ್ಕೆ ಹಾನಿ!

ಮಧ್ಯಪ್ರದೇಶದ (Madhya Pradesh) ಸಾರ್ವಜನಿಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಪ್ರಭುರಾಮ್ ಚೌಧರಿ (Prabhuram Chadudhry) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು. ಆದರೆ ನಂತರದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂವರನ್ನು ಅಮಾನತು ಮಾಡಿದ್ದಾರೆ. ಕಳೆದ ವರ್ಷ ಉತ್ತರಪ್ರದೇಶದ (Uttar Pradesh) ಮೊರದಾಬಾದ್‌ನಲ್ಲಿ(Moradabad) ಇದೇ ರೀತಿಯ ಘಟನೆಯೊಂದು ನಡೆದಿತ್ತು. ಬೀದಿ ನಾಯಿಯೊಂದು ಆಸ್ಪತ್ರೆಯ ವಾರ್ಡ್‌ನಲ್ಲಿ ಹಾಯಾಗಿ ತಿರುಗಾಟ ನಡೆಸಿತ್ತು. ಸೆಕ್ಯೂರಿಟಿ ಗಾರ್ಡ್‌ಗಳು ಆಸ್ಪತ್ರೆ ಗೇಟ್‌ನಲ್ಲಿ ಇದ್ದಾಗಲೇ ಅವರ ಮುಂದೆಯೇ ನುಸುಳಿ ಬಂದ ನಾಯಿಯೊಂದು ನಂತರ ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿತ್ತು. 
 

Follow Us:
Download App:
  • android
  • ios