ಶೂಗಳಿಗೆ ಪಾಲಿಶ್ ಮಾಡಿದ ಬಿಜೆಪಿ ಸಂಸದ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಮರ್ ಸಿಂಗ್ ಸೋಲಂಕಿ ಶೂಗಳಿಗೆ ಪಾಲಿಶ್ ಮಾಡಿ ಚಮ್ಮಾರರಿಗೆ ಸನ್ಮಾನ
ಬರ್ವಾನಿ (ಫೆ.17): ಭಾರತೀಯ ಜನತಾ ಪಕ್ಷದ ಸಂಸದರೊಬ್ಬರು ಶೂಗಳಿಗೆ ಪಾಲಿಶ್ ಮಾಡುವ ಜೊತೆಗೆ ಚಮ್ಮಾರರಿಗೆ ಸನ್ಮಾನ ಮಾಡುವ ಮೂಲಕ ರವಿದಾಸ್ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು. ಮಧ್ಯಪ್ರದೇಶದ(Madhya Pradesh) ಬರ್ವಾನಿ(Barwani) ಜಿಲ್ಲೆಯಲ್ಲಿ ಬಿಜೆಪಿ ಸಂಸದ ಸುಮರ್ ಸಿಂಗ್ ಸೋಲಂಕಿ (Sumer Singh Solanki) ಅವರು ಶೂಗಳಿಗೆ ಪಾಲಿಶ್ ಮಾಡುತ್ತಿರುವುದು ಕಂಡು ಬಂದಿದೆ. ಜೊತೆಗೆ ತಾವೇ ಬೂಟ್‌ಗಳಿಗೆ ಪಾಲಿಶ್ ಮಾಡುವ ಮೂಲಕ 15ನೇ ಶತಮಾನದ ಸಂತನಿಗೆ ಗೌರವ ನಮನ ಸಲ್ಲಿಸಿದರು.
ಟ್ವಿಟ್ಟರ್‌ನಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಯಾವುದೇ ವ್ಯಕ್ತಿ ತನ್ನ ಹುಟ್ಟಿನಿಂದ ದೊಡ್ಡವ ಅಥವಾ ಸಣ್ಣವನಾಗುವುದಿಲ್ಲ. ಆತ ಅವನ ಕರ್ಮದಿಂದ ಸಣ್ಣವ ಅಥವಾ ದೊಡ್ಡವನೆನಿಸಿಕೊಳ್ಳುತ್ತಾನೆ. ಒಬ್ಬ ವ್ಯಕ್ತಿಯ ಕ್ರಿಯೆಗಳು ಅವನನ್ನು ರೂಪಿಸುತ್ತವೆ. ಸಂತ ರವಿದಾಸ್. ಇಂದು ಸಂತ ಶಿರೋಮಣಿ ರವಿದಾಸ್ ಜಯಂತಿಯ(Sant Shiromani Ravidas Jayanti) ಶುಭ ಸಂದರ್ಭದಲ್ಲಿ ನಾನು ಬರ್ವಾನಿ ನಗರದ ಫುಟ್‌ಪಾತ್‌ನಲ್ಲಿ ಶೂ ಪಾಲಿಶ್ ಮಾಡಲು ಕುಳಿತಿದ್ದೆ ಎಂದು ಸಂಸದ ಸುಮರ್ ಸಿಂಗ್ ಸೋಲಂಕಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು ಈ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಸಂಸದರು 25 ವರ್ಷಗಳ ಹಿಂದೆ ಇಲ್ಲಿ ಓದುವಾಗ ಅವರ ಚಪ್ಪಲಿ ತುಂಡಾಗುತ್ತಿತ್ತು. ಆಗ ಅವುಗಳನ್ನು ರಿಪೇರಿ ಮಾಡಲು ಸಂಸದರು ಇಲ್ಲಿಗೆ ಬರುತ್ತಿದ್ದರಂತೆ. ಇಂದು ನಾನು ಚಮ್ಮಾರನಿಗೆ ಭಗವದ್ಗೀತೆಯನ್ನು ಅರ್ಪಿಸಿದೆ ಮತ್ತು ಅವನ ಬೂಟುಗಳನ್ನು ಪಾಲಿಶ್ ಮಾಡಿದೆ. ಅವರಿಗೆ ಸಂತ ರವಿದಾಸರ ಫೋಟೋವನ್ನೂ ನೀಡಿದ್ದೇನೆ ಎಂದರು. ಒಬ್ಬ ವ್ಯಕ್ತಿಯ ಅರ್ಹತೆಯು ಹುಟ್ಟಿನಿಂದ ಬರುವುದಲ್ಲ. ಅವನ ಕೆಲಸಗಳಿಂದ (ಕರ್ಮ) ಬರುವುದು ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿಯ ಕ್ರಿಯೆಗಳೇ ಅವನನ್ನು ದೊಡ್ಡವನನ್ನಾಗಿ ಅಥವಾ ಚಿಕ್ಕವನನ್ನಾಗಿ ಮಾಡುತ್ತವೆ ಎಂದರು. ಸಂಸದರು ಚಮ್ಮಾರರ ಶೂ ಪಾಲಿಶ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Hagaribommanahalli: ಚಪ್ಪಲಿ ಹಿಡಿದು ಶಾಸಕ, ಮಾಜಿ ಶಾಸಕರ ಜಟಾಪಟಿ: ಇವರೇನಾ ನಮ್ಮ ಜನಪ್ರತಿನಿಧಿಗಳು?
ಹಿಂದಿನ ಕಾಲದಲ್ಲಿ ಪಾದರಕ್ಷೆ(Footwear)ಗಳು ಮನೆಯ ಹೊರಗೆ ಇಡುವಂತಹ ವಸ್ತುಗಳಾಗಿದ್ದವು. ಪಾದಗಳಿಗೆ ರಕ್ಷಣೆ ನೀಡಲು ಅನಿವಾರ್ಯ ಎಂಬ ಕಾರಣಕ್ಕೆ ಮಾತ್ರ ಅದನ್ನು ಧರಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಪಾದರಕ್ಷೆಗಳಿಗೂ ವಿಶೇಷ ಸ್ಥಾನ ಸಿಕ್ಕಿದೆ. ಫ್ಯಾಷನ್ (Fashion )ಕ್ಷೇತ್ರದಲ್ಲಿ ಪಾದರಕ್ಷೆಗಳು ಸ್ಥಾನ ಪಡೆದಿವೆ. ಕೇವಲ ಡ್ರೆಸ್,ಮೇಕಪ್ ನೋಡುವುದಿಲ್ಲ.ಚಪ್ಪಲಿ,ಶೂ ಮೇಲೂ ಕಣ್ಣು ಹೋಗುವುದರಿಂದ ಡ್ರೆಸ್ ಗೆ ತಕ್ಕಂತೆ ಪಾದರಕ್ಷೆ ಹಾಕುವುದು ಈಗ ಒಂದು ರೀತಿಯಲ್ಲಿ ಅನಿವಾರ್ಯವಾಗಿದೆ ಎಂದ್ರೆ ತಪ್ಪಾಗಲಾರದು. ಜನ ಬದಲಾದಂತೆ,ಫ್ಯಾಷನ್ ಬದಲಾದಂತೆ ಮಾರುಕಟ್ಟೆಗೆ ಬಗೆ ಬಗೆಯ ಪಾದರಕ್ಷೆಗಳು ಲಗ್ಗೆಯಿಟ್ಟಿವೆ.
24 ತಾಸೂ ಕಾಯಲಿಲ್ಲ, 18ರ ಯುವತಿ ಜೊತೆ 49 ವರ್ಷದ ಪಾಕ್ ಸಂಸದನ 3ನೇ ಮದುವೆ!