* 18ರ ಯುವತಿ ಜೊತೆ 49 ವರ್ಷದ ಪಾಕ್ ಸಂಸದನ 3ನೇ ಮದುವೆ* ಎರಡನೇ ಪತ್ನಿಗೆ ವಿಚ್ಛೇದನ ನೀಡಿ 24 ತಾಸೂ ಕಾಯಲಿಲ್ಲ ಸಂಸದ* ಮದುವೆ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಖುದ್ದು ಶೇರ್ ಮಾಡಿಕೊಂಡ ಲಿಯಾಕತ್

ಇಸ್ಲಮಾಬಾದ್(ಫೆ.12): 49 ವರ್ಷದ ಪಾಕಿಸ್ತಾನದ ಸಂಸದ ಡಾ. ಅಮೀರ್ ಲಿಯಾಕತ್ ಹುಸೇನ್ ಸದ್ಯ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟ ಈ ಸಂಸ ತಮ್ಮ ಎರಡನೇ ಪತ್ನಿಗೆ ವಿಚ್ಛೇದನ ನೀಡಿದ 24 ತಾಸಿನೊಳಗೆ ಮೂರನೇ ವಿವಾಹವಾಗಿದ್ದಾರೆ. ಲಿಯಾಖತ್ ಹುಸೇನ್ ಬುಧವಾರ ಪಂಜಾಬ್‌ನ ಲೋಧರನ್‌ನ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ 18 ವರ್ಷದ ಸೈಯದಾ ದಾನಿಯಾ ಶಾ ಅವರನ್ನು ವಿವಾಹವಾದರು. ಡಾ.ಲಿಯಾಖತ್ ಫೋನ್ ಮೂಲಕ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.

ಮದುವೆಯ ಫೋಟೋ ಖುದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಸಂಸದ

ತಮ್ಮ ಮೂರನೇ ಮದುವೆಯ ಫೋಟೋವನ್ನು ಸ್ವತಃ ಡಾ.ಲಿಯಾಖತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲಿಯಾಕತ್ ತನ್ನ ಎರಡನೇ ಮದುವೆಯನ್ನು ಕೆಟ್ಟ ಸಮಯ ಎಂದು ಪರಿಗಣಿಸಿದ್ದಾರೆ. ಈ ಬಗ್ಗೆ ಬರೆದಿರುವ ಲಿಯಾಕತ್ ಕಳೆದ ರಾತ್ರಿ, 18 ವರ್ಷದ ಸೈಯದಾ ಡೇನಿಯಾ ಶಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಅವರು ದಕ್ಷಿಣ ಪಂಜಾಬ್‌ನ ಲೋಧ್ರಾನ್‌ನ ಗೌರವಾನ್ವಿತ ನಜೀಬ್ ಉತ್ ತರೈನ್ "ಸಾದತ್" ಕುಟುಂಬಕ್ಕೆ ಸೇರಿದವರು. ದಯವಿಟ್ಟು ನಮಗಾಗಿ ಪ್ರಾರ್ಥಿಸಿ ಎಂದು ನನ್ನ ಎಲ್ಲಾ ಹಿತೈಷಿಗಳಲ್ಲಿ ನಾನು ವಿನಂತಿಸಲು ಬಯಸುತ್ತೇನೆ. ನಾನು ಕತ್ತಲೆಯ ಸುರಂಗವನ್ನು ದಾಟಿದ್ದೇನೆ, ಅದೊಂದು ದೊಡ್ಡ ತಪ್ಪಾಗಿತ್ತು ಎಂದಿದ್ದಾರೆ.

Scroll to load tweet…

ಡಾ. ಲಿಯಾಕತ್ ದೂರದರ್ಶನ ನಿರೂಪಕರೂ ಹೌದು

View post on Instagram

ಡಾ. ಲಿಯಾಕತ್ ಅವರು ಸಂಸದರ ಜೊತೆಗೆ ಪಾಕಿಸ್ತಾನದಲ್ಲಿ ಜನಪ್ರಿಯ ಟಿವಿ ನಿರೂಪಕರಾಗಿದ್ದಾರೆ. ಡಾ. ಲಿಯಾಖತ್ ಅವರ ಎರಡನೇ ಪತ್ನಿ ಸೈಯದ್ ಟುಬಾ ಓರ್ವ ನಟಿ. ಆದರೆ, ಜಗಳದಿಂದಾಗಿ ಇಬ್ಬರೂ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನದ ಬಗ್ಗೆ ಟುಬಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ. ಅವರ ನಡುವಿನ ಸಮನ್ವಯದ ಎಲ್ಲಾ ಭರವಸೆ ಕಳೆದುಹೋಗಿದೆ ಎಂದು ಟುಬಾ ಒಪ್ಪಿಕೊಂಡಿದ್ದರು. ಆದ್ದರಿಂದ, ನ್ಯಾಯಾಲಯದಿಂದ, ಅವರು ಖುಲಾ ಅಂದರೆ ವಿಚ್ಛೇದನದ ಮಾರ್ಗವನ್ನು ಆರಿಸಿಕೊಂಡರು. ಡಾ. ಲಿಯಾಖತ್ ಅವರ ಮೊದಲ ಪತ್ನಿ ಸಯೀದ್ ಬುಸ್ರಾ ಇಕ್ಬಾಲ್. ಡಾ.ಲಿಯಾಖತ್ ಅವರಿಗೆ ದೂರವಾಣಿಯಲ್ಲಿ ತ್ರಿವಳಿ ತಲಾಖ್ ಹೇಳಿದ್ದರು. ಡಾ. ಲಿಯಾಖತ್ ಅವರ ಈ ನಿರ್ಧಾರದಿಂದ ಬುಸ್ರಾ ಸಂತೋಷವಾಗಿರಲಿಲ್ಲ. ಅವರು ಬಹಳ ಆಘಾತಕ್ಕೊಳಗಾಗಿದ್ದರು.