Asianet Suvarna News Asianet Suvarna News

ಚುನಾವಣಾ ಗಿಫ್ಟ್‌ ಸಮರ: ಅಂಗನವಾಡಿ ಕಾರ‍್ಯಕರ್ತೆಯರ ಗೌರವಧನ 13000 ರೂ.ಗೆ ಏರಿಕೆ

ವೇತನ ಹೆಚ್ಚಳದ ಜೊತೆಗೆ ಲಾಡ್ಲಿ ಬೆಹೆನಾ ಯೋಜನೆಯಡಿ ಹೆಚ್ಚುವರಿ 1 ಸಾವಿರ ರೂ. ಸಹಾಯಧನವನ್ನೂ ಸಹ ಅಂಗನವಾಡಿ ಕಾರ್ಯಕರ್ತೆಯರು ಪಡೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದರು

madhya pradesh anganwadi workers will get honorarium of rs 13000 shivraj government has given many benefits ash
Author
First Published Jun 12, 2023, 8:43 AM IST

ಭೋಪಾಲ್‌ (ಜೂನ್ 12, 2023): ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಯೋಜನೆಯನ್ನು ಜಾರಿಗೊಳಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 3 ಸಾವಿರ ರೂ. ಹೆಚ್ಚಳ ಮಾಡಿದೆ. ಈ ಮೂಲಕ ಅವರ ವೇತನ 13 ಸಾವಿರ ರೂ.ಗೆ ಏರಿಕೆಯಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌, ವೇತನ ಹೆಚ್ಚಳದ ಜೊತೆಗೆ ಲಾಡ್ಲಿ ಬೆಹೆನಾ ಯೋಜನೆಯಡಿ ಹೆಚ್ಚುವರಿ 1 ಸಾವಿರ ರೂ. ಸಹಾಯಧನವನ್ನೂ ಸಹ ಅಂಗನವಾಡಿ ಕಾರ್ಯಕರ್ತೆಯರು ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಪ್ರಸ್ತುತ ಮಧ್ಯಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಗೌರವಧನ ನೀಡಲಾಗುತ್ತಿತ್ತು. ಈಗ ಅದನ್ನು 13 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. 

ಇದನ್ನು ಓದಿ: ಈಗ ಬಿಜೆಪಿಯಿಂದಲೂ ಫ್ರೀ ಸ್ಕೀಂ: ಈ ರಾಜ್ಯದ ಸ್ತ್ರೀಯರಿಗೆ 1000 ರೂ. ಬಂಪರ್‌

ಅಲ್ಲದೇ ಇದನ್ನು ಪ್ರತಿ ವರ್ಷ 1 ಸಾವಿರ ರೂ. ಹೆಚ್ಚಳ ಮಾಡಲಾಗುತ್ತದೆ. ಅಲ್ಲದೇ ಕಿರು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 6,500 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿಯ ಬಳಿಕ 1.25 ಲಕ್ಷ ರೂ. ನೀಡಲಾಗುವುದು. ಜೊತೆಗೆ ಅವರು 5 ಲಕ್ಷ ರೂ. ಆರೋಗ್ಯ ಮತ್ತು ಅಪಘಾತ ವಿಮೆಯನ್ನು ಸಹ ಪಡೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು ಸರ್ಕಾರ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ. ಸಹಾಯಧನ ನೀಡುವ ಲಾಡ್ಲಿ ಬೆಹೆನಾ ಯೋಜನೆಯನ್ನು ಜಾರಿ ಮಾಡಿತ್ತು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು: ತಪ್ಪಿತು ಮತ್ತೊಂದು ದೊಡ್ಡ ಅನಾಹುತ! 

ವರ್ಷಾಂತ್ಯಕ್ಕೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್‌ ಈಗಾಗಲೇ ಮಹಿ​ಳೆ​ಯ​ರಿಗೆ ಮಾಸಿಕ 1500 ರೂ. ಭತ್ಯೆ, 100 ಯುನಿಟ್‌ ಉಚಿತ ವಿದ್ಯುತ್‌, 500 ರೂ.ಗೆ ಗ್ಯಾಸ್‌ ಸಿಲಿಂಡರ್‌, ರೈತ ಸಾಲ ಮನ್ನಾ, ಹಳೇ ಪಿಂಚಣಿ ಮೊದಲಾದವುಗಳನ್ನು ಜಾರಿ ಮಾಡುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಅಕ್ಟೋಬರ್ 11 ರಂದು Ujjain ಮಹಾಕಾಲ ಲೋಕ ಉದ್ಘಾಟನೆ: ಪ್ರಧಾನಿ Modiಯಿಂದ ಲೋಕಾರ್ಪಣೆ

Follow Us:
Download App:
  • android
  • ios