Asianet Suvarna News Asianet Suvarna News

ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು: ತಪ್ಪಿತು ಮತ್ತೊಂದು ದೊಡ್ಡ ಅನಾಹುತ!

ಜಬಲ್‌ಪುರ್ ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ರೈಲು ಹಳಿ ತಪ್ಪಿದೆ. 

goods train carrying lpg derails in madhya pradesh s jabalpur major accident averted ash
Author
First Published Jun 7, 2023, 1:06 PM IST

ನವದೆಹಲಿ (ಜೂನ್ 7, 2023): ಮಧ್ಯಪ್ರದೇಶದ ಜಬಲ್‌ಪುರ್ ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗೂಡ್ಸ್ ರೈಲಿನಿಂದ ಎರಡು ಬೋಗಿಗಳು ಹಳಿ ತಪ್ಪಿದೆ ಎಂದು ತಿಳಿದುಬಂದಿದೆ. ಗ್ಯಾಸ್ ಫ್ಯಾಕ್ಟರಿಯೊಂದರಲ್ಲಿ ರೇಕ್‌ಗಳನ್ನು ಅನ್ಲೋಡ್‌ ಮಾಡಲು ಹೋದಾಗ ಗೂಡ್ಸ್ ರೈಲಿನಿಂದ ಎರಡು ವ್ಯಾಗನ್‌ಗಳು ಎಲ್‌ಪಿಜಿ ರೇಕ್‌ಗಳು ಹಳಿತಪ್ಪಿ ಈ ಅವಘಡ ನಡೆದಿದೆ.

ಆದರೆ ಈ ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದ್ದು, ದೊಡ್ಡ ಅಪಘಾತವನ್ನು ತಪ್ಪಿಸಲಾಗಿದೆ. ಜಬಲ್‌ಪುರ್ ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ಕೂಡಲೇ ರೈಲ್ವೆ ಅಧಿಕಾರಿಗಳು ಅಪಘಾತ ಪರಿಹಾರ ವಾಹನದೊಂದಿಗೆ ತಡರಾತ್ರಿ ಸ್ಥಳಕ್ಕೆ ತಲುಪಿದ್ದು, ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ. 

ಇದನ್ನು ಓದಿ: ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ್ರೂ ಶವಗಳ ಜತೆ ಹಲವು ದಿನ ಕಾಲ ಕಳೆದ: ಉಳಿದಿದ್ದೇ ಪವಾಡ..

ರೈಲು ಅಧಿಕಾರಿಗಳು ಸಹ ಬುಧವಾರ ಈ ಅವಘಡದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಗೂಡ್ಸ್ ರೈಲನ್ನು ಇಳಿಸಲು ಇರಿಸಿದಾಗ ಹಳಿ ತಪ್ಪಿದೆ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಮಾಹಿತಿ ನೀಡಿದ್ದಾರೆ. "ಕಳೆದ ರಾತ್ರಿ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ನ ಎರಡು ವ್ಯಾಗನ್‌ಗಳನ್ನು ಇಳಿಸಲು ಇರಿಸುವಾಗ ಹಳಿತಪ್ಪಿದೆ. ಇದರಿಂದ ರೈಲುಗಳ ಯಾವುದೇ ಮುಖ್ಯ ಸಂಚಾರಕ್ಕೆ ತೊಂದರೆಯಾಗಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ. ಸೈಡಿಂಗ್ ಅಧಿಕಾರಿಗಳ ಸಮ್ಮುಖದಲ್ಲಿ ಸೂರ್ಯೋದಯದ ನಂತರ ಮರುಸ್ಥಾಪನೆ ಕಾರ್ಯ ಪ್ರಾರಂಭವಾಯಿತು. ಫಿಟ್‌ನೆಸ್ ಸೈಡಿಂಗ್ ಮಾಲೀಕರಿಂದ ಪ್ರಮಾಣಪತ್ರವನ್ನು ನೀಡಲಾಗಿದೆ" ಎಂದು CPRO ವೆಸ್ಟ್ ಸೆಂಟ್ರಲ್ ರೈಲ್ವೆ ಹೇಳಿದೆ.

ಜೂನ್‌ 2 ರಂದು ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ತ್ರಿವಳಿ ರೈಲು ಅಪಘಾತ ನಡೆದು 288 ಜನರು ಮೃತಪಟ್ಟಿದ್ದರು. ಹಾಗೂ ಸುಮಾರು 1000 ಜನ ಗಾಯಗೊಂಡಿದ್ದಾರೆ.  

ಇದನ್ನೂ ಓದಿ: Breaking: ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು: ನೂರಾರು ಜನರನ್ನು ಬಲಿ ತೆಗೆದುಕೊಂಡ 3 ದಿನಗಳಲ್ಲಿ ಮತ್ತೊಂದು ಅವಘಡ

ಪ್ರಾಥಮಿಕ ತನಿಖೆಯ ಪ್ರಕಾರ 'ಸಿಗ್ನಲಿಂಗ್ ಹಸ್ತಕ್ಷೇಪ'ದಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ರೈಲ್ವೆ ಹೇಳಿತ್ತು. ದುರಂತದ ಪ್ರಾಥಮಿಕ ವರದಿಯು ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಹಳಿಗಳಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳನ್ನು ಒಳಗೊಂಡ ಮೂರು ಮಾರ್ಗಗಳಲ್ಲಿ ಅಪಘಾತ ಸಂಭವಿಸಿದೆ.

ಶುಕ್ರವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಈ ಎರಡು ಪ್ಯಾಸೆಂಜರ್ ರೈಲುಗಳ 17 ಬೋಗಿಗಳು ಹಳಿತಪ್ಪಿ ತೀವ್ರವಾಗಿ ಹಾನಿಗೀಡಾಗಿತ್ತು. ಇನ್ನು, ಈ ಅಪಘಾತ ಸಂಬಂಧ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದ್ದು, ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..

Follow Us:
Download App:
  • android
  • ios