PM Modi : ಪ್ರಧಾನಿ ಮೋದಿ ರಾಮ, ಕೃಷ್ಣನ ಅವತಾರ ಎಂದ ಬಿಜೆಪಿ ಸಚಿವ!
ದೇಶದಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಬಂದಿರುವ ಮೋದಿ ದೇವರ ಅವತಾರ
ರಾಮ, ಕೃಷ್ಣನ ಅವತಾರ ಎಂದ ಮಧ್ಯಪ್ರದೇಶ ಬಿಜೆಪಿ ಸಚಿವ
ಭಾರತವನ್ನು ಇವರು ವಿಶ್ವಗುರು ಮಾಡಲಿದ್ದಾರೆ
ನವದೆಹಲಿ (ಜ. 19): ಮಧ್ಯಪ್ರದೇಶದ ಕೃಷಿ ಸಚಿವ (Madhya Pradesh Agriculture Minister ) ಮತ್ತು ಬಿಜೆಪಿ ನಾಯಕ ಕಮಲ್ ಪಟೇಲ್ (BJP leader Kamal Patel) ಅವರು ಪ್ರಧಾನಿ ನರೇಂದ್ರ ಮೋದಿಯನ್ನು (Prime Minister Narendra Modi) ರಾಮ ಹಾಗೂ ಕೃಷ್ಣರಂಥ ದೇವರ ಅವತಾರ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಭಷ್ಟಾಚಾರವನ್ನು ಪೋಷಿಸಿದ್ದು ಮಾತ್ರವಲ್ಲ, ದೇಶದ ಸಂಸ್ಕೃತಿಯನ್ನು ನಾಶ ಮಾಡಿ ಜನರ ಮೇಲೆ ದೌರ್ಜನ್ಯ ನಡೆಸುತ್ತಿತ್ತು ಈ ಹತಾಶೆಯ ವಾತಾವರಣವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಭಗವಾನ್ ರಾಮ ಹಾಗೂ ಭಗವಾನ್ ಕೃಷ್ಣನ ರೂಪದಲ್ಲಿ ಬಂದಿರುವ ಅವತಾರ ಪ್ರಧಾನಿ ಮೋದಿ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಹರ್ದಾದಲ್ಲಿ ಇತ್ತೀಚೆಗೆ ಸುದ್ದಿಗಾರರ ಜೊತೆ ಮಾತನಾಡಿದ ಕಮಲ್ ಪಟೇಲ್. "ಭಾರತವನ್ನು ವಿಶ್ವಗುರುವಾಗಿಸುವ (Vishwa Guru) ನಿಟ್ಟಿನಲ್ಲಿ ಮುನ್ನಡೆಸುತ್ತಿದ್ದಾರೆ. ಅದರೊಂದಗೆ ದೇಶವನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಸುವುದು, ಸಾರ್ವಜನಿಕ ಕಲ್ಯಾಣವನ್ನು ಖಾತ್ರಿ ಪಡಿಸಿಕೊಳ್ಳುವಂಥ ಕೆಲಸಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಿಂದ ಇದನ್ನೆಲ್ಲ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮೋದಿ ದೇವರ ಅವತಾರ' ಎಂದು ಬಣ್ಣನೆ ಮಾಡಿದ್ದಾರೆ.
Karnataka Politics ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ, ಮುಖ್ಯಕಾರ್ಯದರ್ಶಿಗೆ ಮನವಿ
"ಭಾರತದ ಮೇಲೆ ಯಾವುದೇ ಬಿಕ್ಕಟ್ಟು ಬಂದಾಗ ಮತ್ತು ದೌರ್ಜನ್ಯ ಹೆಚ್ಚಾದಾಗ, ದೇವರು ಮಾನವ ರೂಪದಲ್ಲಿ ಅವತಾರವನ್ನು ತೆಗೆದುಕೊಳ್ಳುತ್ತಾನೆ ಎಂದು ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಹೇಳಲಾಗುತ್ತದೆ" ಎಂದು ಪಟೇಲ್ ಹೇಳಿದ್ದಾರೆ. ಭಗವಾನ್ ರಾಮನು (Ram) ಮಾನವ ರೂಪದಲ್ಲಿ ಅವತಾರ ಪಡೆದು, ರಾವಣನ್ನು ಕೊಂದಿದ್ದು ಮಾತ್ರವಲ್ಲದೆ, ಇತರ ದುಷ್ಟ ಶಕ್ತಿಗಳನ್ನು ಸೋಲಿಸಿ, ಜನರ ಅಬ್ಯುಧಯವನ್ನು ಮಾಡುವ ಮೂಲಕ ರಾಮರಾಜ್ಯ ಸ್ಥಾಪಿಸಿದರು. ಕಂಸನ ದೌರ್ಜನ್ಯಗಳು ಹೆಚ್ಚಾದಾಗ ಶ್ರೀಕೃಷ್ಣನು (Sri Krishna) ಜನ್ಮ ತಳೆದು ಅವನ ಕ್ರೌರ್ಯವನ್ನು ಕೊನೆಗಾಣಿಸಿ ಜನರ ಸಹಾಯಕ್ಕೆ ಧಾವಿಸಿದ ಎಂದು ಸಚಿವ ಹೇಳಿಕೆ ನೀಡಿದ್ದಾರೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ದೌರ್ಜನ್ಯಗಳು ಹೆಚ್ಚಾದಾಗ ... ಭ್ರಷ್ಟಾಚಾರ, ಜಾತೀಯತೆ ಹೆಚ್ಚಾದಾಗ, ದೇಶದ ಸಂಸ್ಕೃತಿ ನಾಶವಾಯಿತು ಮತ್ತು ಹತಾಶೆಯ ವಾತಾವರಣವು ಎಲ್ಲೆಡೆ ನಿರ್ಮಾಣವಾಯಿತು. ಅದನ್ನು ಕೊನೆಗೊಳಿಸಲು ನರೇಂದ್ರ ಮೋದಿ ಜನಿಸಿದರು," ಎಂದು ಪಟೇಲ್ ಹೇಳಿದ್ದಾರೆ.
ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವ ಗುರು ಆಗಲಿದ್ದು, ಸಾಮಾನ್ಯ ಹಾಗೂ ಬಡ ಜನರ ಕಲ್ಯಾಣ ಇವರಿಂದ ಸಾಧ್ಯವಾಗಲಿದೆ ಎಂದಿದ್ದಾರೆ. ಮೋದಿ ಮಾಡಿರುವ ಕಾರ್ಯಗಳು ಅಸಾಧ್ಯವಾದವು. ಸಾಮಾನ್ಯ ವ್ಯಕ್ತಿಯಿಂದ ಇದನ್ನೆಲ್ಲ ಮಾಡಲು ಸಾಧ್ಯವಿಲ್ಲ. ಸಾಧ್ಯವಾಗುವುದಾಗಿದ್ದರೆ ಕಳೆದ 60 ವರ್ಷಗಳಲ್ಲೇ ಇದು ಆಗುತ್ತಿತ್ತು. ಹಾಗಾಗಿ ಮೋದಿ ಅವತಾರ ಪುರುಷ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಮಲ್ ಪಟೇಲ್ ಹೇಳಿದ್ದಾರೆ.
Karnataka Politics: ಕಾಂಗ್ರೆಸ್ ಬೇರೆ ಪಕ್ಷದೆದುರು ಅಂಗಲಾಚುತ್ತಿದೆ: ಪ್ರಹ್ಲಾದ್ ಜೋಶಿ
ಅದೇ ರೀತಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan)ರನ್ನು ಹೊಗಳಿರುವ ಪಟೇಲ್, ಕಳೆದ ನವೆಂಬರ್‌ನಲ್ಲಿ ಬುಡಕಟ್ಟು ಐಕಾನ್ ತಾಂತ್ಯ ಭಿಲ್ ಅವರ ಅವತಾರ ಎಂದು ಬಣ್ಣಿಸಿದ್ದರು. ಶಿವರಾಜ್ ಸಿಂಗ್ ಚೌಹ್ವಾಣ್ ಅವರು ಭಾರತೀಯ ‘ರಾಬಿನ್ ಹುಡ್’ ಎಂದು ಪಟೇಲ್ ಹೇಳಿದ್ದರು. "ತಾಂತ್ಯಾ ಮಾಮಾ ಹೆಣ್ಣುಮಕ್ಕಳ ಮದುವೆಗೆ ಸಹಾಯ ಮಾಡಿಕೊಡುತ್ತಿದ್ದರು. ನಮ್ಮ 'ಮಾಮಾ' (ಮುಖ್ಯಮಂತ್ರಿ ಚೌಹಾಣ್ ) ಕೂಡ ಅದನ್ನೇ ಮಾಡುತ್ತಾರೆ. ತಾಂತ್ಯ ಮಾಮಾ (Tantya Mama) ಶ್ರೀಮಂತರನ್ನು ಲೂಟಿ ಮಾಡುತ್ತಿದ್ದರು ಮತ್ತು ಬಡವರಿಗೆ ಸಂಪತ್ತನ್ನು ಹಂಚುತ್ತಿದ್ದರು. ನಮ್ಮ ಮುಖ್ಯಮಂತ್ರಿ ಲೂಟಿ ಮಾಡುವುದಿಲ್ಲ. ಆದರೆ ಶ್ರೀಮಂತರಿಂದ ತೆರಿಗೆ ವಸೂಲಿ ಮಾಡಿ ಬಡವರಿಗಾಗಿ ವಿನಿಯೋಗಿಸುತ್ತಿದ್ದಾರೆ. ಒಂದು ರೀತಿಯಲ್ಲಿ ತಾಂತ್ಯಾ ಮಾಮ ನಮ್ಮ ಮುಖ್ಯಮಂತ್ರಿ ಶಿವರಾಜ್ ಆಗಿ ಮರುಜನ್ಮ ಪಡೆದಿದ್ದಾರೆ ಎಂದು ಹೇಳಬಹುದು ಎಂದಿದ್ದರು.