Asianet Suvarna News Asianet Suvarna News

Karnataka Politics: ಕಾಂಗ್ರೆಸ್‌ ಬೇರೆ ಪಕ್ಷದೆದುರು ಅಂಗಲಾಚುತ್ತಿದೆ: ಪ್ರಹ್ಲಾದ್‌ ಜೋಶಿ

*  ಮೋದಿ, ಬಿಜೆಪಿ ಸೋಲಿಸಲು ಕಾಂಗ್ರೆಸ್‌ ಸೇರಿ ಎಲ್ಲ ವಿರೋಧ ಪಕ್ಷಗಳ ಒಗ್ಗಟ್ಟಿನ ಹೋರಾಟ 
*  ಕಾಂಗ್ರೆಸ್‌ ಸೇರಿ ಇತರ ವಿರೋಧ ಪಕ್ಷದವರು ಮುಂದೆ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ 
*  ಕಾಂಗ್ರೆಸ್‌ ಪಕ್ಷ ದೇಶದಿಂದ ದಿವಾಳಿ ಆಗುತ್ತಿದೆ 

Union Minister Pralhad Joshi Slams on Congress grg
Author
Bengaluru, First Published Jan 19, 2022, 9:58 AM IST

ಹುಬ್ಬಳ್ಳಿ(ಜ.19):  ಕಾಂಗ್ರೆಸ್‌(Congress) ದೇಶದಿಂದ ದಿವಾಳಿಯಾಗಿದ್ದಕ್ಕೆ ಬೇರೆ ಪಕ್ಷದವರ ಸಹಕಾರಕ್ಕೆ ಅಂಗಲಾಚುತ್ತಿದೆ. ಗೋವಾದಲ್ಲಿ ಹತ್ತು ವಿರೋಧ ಪಕ್ಷಗಳು ಸೇರಿದರು ಬಿಜೆಪಿ(BJP) ಸೋಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ವ್ಯಂಗ್ಯವಾಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಮೋದಿ ಮತ್ತು ಬಿಜೆಪಿ ಸೋಲಿಸಲು ಕಾಂಗ್ರೆಸ್‌ ಸೇರಿ ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಿನ ಹೋರಾಟ ಮಾಡುತ್ತಿರುವುದನ್ನು ನೋಡಿದರೆ ಆ ಪಕ್ಷಗಳ ಸ್ಥಿತಿ ಏನಾಗಿದೆ ಎಂಬುದಕ್ಕೆ ನಿದರ್ಶನ. ಗೋವಾದಲ್ಲಿ(Goa) ಬಿಜೆಪಿಯವರು ಟಿಎಂಸಿ(TMC) ನಾಯಕರ ಖರೀದಿಸಿದ್ದಾರೆ ಎಂಬ ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ದೂರ. ಕಾಂಗ್ರೆಸ್‌ ಗೋವಾ ಉಸ್ತುವಾರಿ ದಿನೇಶ ಗುಂಡೂರಾವ್‌(Dinesh Gundurao) ಅವರು ಸಹ ನಾಯಕರ ಖರೀದಿಸಿದ್ದಾರೆ ಎಂದು ಅಪವಾದ ಮಾಡಿದ್ದು, ಗಂಭೀರವಾದ ವಿಚಾರ. ಇದು ತನಿಖೆಯಾದರೆ ಖರೀಸಿದವರು ಮತ್ತು ಖರೀದಿಯಾದವರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.

Karnataka: ರೈತರಿಗೆ ಸಿಗುತ್ತಿರುವ ಸೌಲಭ್ಯ ನೇಕಾರರಿಗೂ ವಿಸ್ತರಣೆ: ಸಚಿವ ಮುನೇನಕೊಪ್ಪ

ಬಹುಶಃ ಕಾಂಗ್ರೆಸ್‌ ಸೇರಿ ಇತರ ವಿರೋಧ ಪಕ್ಷದವರು ಮುಂದೆ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮನಸ್ಥಿತಿಯಲ್ಲಿದ್ದಾರೆ. ಅದಕ್ಕಾಗಿ ಬಿಜೆಪಿಯವರು ತರುವ ಎಲ್ಲ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. ಪ್ರತಿ ಹೆಜ್ಜೆಯನ್ನೂ ವಿರೋಧಿಸುತ್ತಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್‌ ಪಕ್ಷ ದೇಶದಿಂದ ದಿವಾಳಿ ಆಗುತ್ತಿದೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ:

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳ(Kerala) ಕಳುಹಿಸಿದೆ ಎಂಬ ಕಾರಣಕ್ಕೆ ಕೇಂದ್ರ ವಿರೋಧಿಸಿಲ್ಲ. ಜತೆಗೆ ಶಂಕರಾಚಾರ್ಯರ ಸ್ತಬ್ಧಚಿತ್ರ ಕಳುಹಿಸಲು ಸೂಚಿಸಿದ್ದೇವೆ ಎನ್ನುವುದು ಶುದ್ಧ ಸುಳ್ಳು. ಈ ವಿಚಾರದಲ್ಲಿ ಸಿದ್ದರಾಮಯ್ಯ(Siddaramaiah) ಮತ್ತು ಕಾಂಗ್ರೆಸ್‌ ನಾಯಕರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಕಿಡಿ ಕಾರಿದರು.
 

ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ ಬೇಡ: ಜೋಶಿ, ಸಿ.ಟಿ.ರವಿ

ಬೆಂಗಳೂರು: ಹೆಚ್ಚುತ್ತಿರುವ ಕೊರೋನಾ(Coronavirus) ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ(Government of Karnataka) ವೀಕೆಂಡ್‌ ಕರ್ಫ್ಯೂ(Weekend Curfew), ಲಾಕ್‌ಡೌನ್‌(Lockdown) ವಿಧಿಸುವುದಕ್ಕಿಂತ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವುದು ಹೆಚ್ಚು ಸೂಕ್ತ ಎಂಬ ಅಭಿಪ್ರಾಯವನ್ನು ಸಂಸದ ಪ್ರತಾಪ ಸಿಂಹ(Pratap Simha) ಬಳಿಕ ಇದೀಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಸಹ ವ್ಯಕ್ತಪಡಿಸಿದ್ದಾರೆ.

Karnataka Politics ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ: ಗುಡುಗಿದ ಯತ್ನಾಳ್

ಮಂಗಳವಾರ ಹುಬ್ಬಳ್ಳಿಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ ಜೋಶಿ, ರಾಜ್ಯದಲ್ಲಿ(Karnataka) ವೀಕೆಂಡ್‌ ಕರ್ಫ್ಯೂ ಅಗತ್ಯವಿಲ್ಲ. ಕರ್ಫ್ಯೂ ಜಾರಿಯಿಂದ ಸಾಕಷ್ಟುಅರ್ಥಿಕ ಸಂಕಷ್ಟಸೃಷ್ಟಿಯಾಗಿದೆ. ಅರ್ಥಿಕ ವಹಿವಾಟು ನಡೆಯಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ವೀಕೆಂಡ್‌ ಕರ್ಫ್ಯೂ ಸಡಿಲಿಕೆ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವದಾಗಿ ಹೇಳಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ವಾರಾಂತ್ಯದ ಕರ್ಫ್ಯೂ ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಬೆಳಗಾವಿಯಲ್ಲಿ(Belagavi) ಮಾತನಾಡಿದ ಸಿ.ಟಿ.ರವಿ, ಮೂರನೇ ಅಲೆಯಲ್ಲಿ ಕೋವಿಡ್‌(Covid-19) ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಅದರಿಂದ ಯಾವುದೇ ಪ್ರಾಣಾಪಾಯವಿಲ್ಲ. ಹಾಗಾಗಿ ವಾರಾಂತ್ಯ ಕರ್ಫ್ಯೂ, ಲಾಕ್ಡೌನ್‌ ಜಾರಿಗೊಳಿಸುವುದಕ್ಕಿಂತ ಕಟ್ಟುನಿಟ್ಟಿನ ಕೋವಿಡ್‌ ನಿಯಮ ಜಾರಿಗೊಳಿಸಬೇಕು ಎಂದರು. ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಿ, ಸೋಂಕು ಹರಡದಂತೆ ಎಚ್ಚರ ವಹಿಸಿ. ಆ ಕಾನೂನು ಈ ಕಾನೂನು ಅಂತಾ ಜನರನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ ಎಂದು ಆಗ್ರಹಿಸಿದರು.

ಸೋಮವಾರವಷ್ಟೇ ಸಂಸದ ಪ್ರತಾಪಸಿಂಹ ಅವರು ಮೈಸೂರಿನಲ್ಲಿ(Mysuru) ಜನರು ಜೀವ ಉಳಿಸಿಕೊಂಡಿದ್ದಾರೆ, ಜೀವನ ದುಸ್ಥರವಾಗಿದೆ. ಜೀವದೊಂದಿಗೆ ಜೀವನವೂ ಮುಖ್ಯ. ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಅಂತಹ ಕಠಿಣ ನಿಯಮ ಬೇಡ ಎಂದು ಹೇಳಿದ್ದರು.
 

Follow Us:
Download App:
  • android
  • ios