ಮಧ್ಯಪ್ರದೇಶದ ಮುಚ್ಚಿದ್ದ ಗಣಿಯೊಂದರಲ್ಲಿ ಎರಡು ದಿನಗಳಲ್ಲಿ 7 ಜನರ ಮೃತದೇಹ ಪತ್ತೆಯಾಗಿದ್ದು,  ಘಟನೆಗೆ ಸಂಬಂಧಿಸಿಂದಂತೆ ಎಫ್‌ಐಆರ್ ದಾಖಲಾಗಿದೆ.  

ಭೋಪಾಲ್/ಜಬಲ್‌ಪುರ: ಮಧ್ಯಪ್ರದೇಶದ ಮುಚ್ಚಿದ್ದ ಗಣಿಯೊಂದರಲ್ಲಿ ಎರಡು ದಿನಗಳಲ್ಲಿ 7 ಜನರ ಮೃತದೇಹ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿಂದಂತೆ ಎಫ್‌ಐಆರ್ ದಾಖಲಾಗಿದೆ. ಸೌತ್ ವೆಸ್ಟರ್ನ್ ಕೋಲ್ ಫೀಲ್ಡ್‌ ಲಿಮಿಟೆಡ್‌ (SECL)ಗೆ ಸೇರಿದ ಗಣಿ ಇದಾಗಿದ್ದು, ಮಧ್ಯಪ್ರದೇಶ ಅನಾಪುರ ಜಿಲ್ಲೆಯ ಧನ್‌ಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರೆಲ್ಲರೂ ಅಕ್ರಮವಾಗಿ ಗಣಿಗಾರಿಕೆ ಮಾಡುವವರಾಗಿದ್ದು, ಲೋಹ ಹಾಗೂ ಕಲ್ಲಿದ್ದಲ್ಲಿನ ತುಣಕನ್ನು ಶೋಧಿಸುವ ಸಲುವಾಗಿ ಈ ಗಣಿಗೆ ಇಳಿದಿದ್ದರು. ಘಟನೆಗೆ ಸಂಬಂಧಿಸಿದಂತೆ ಎಸ್‌ಇಸಿಎಲ್ ಆಡಳಿತ ಮಂಡಳಿ ವಿರುದ್ಧ ಮುಚ್ಚಲ್ಪಟ್ಟ ಗಣಿಯನ್ನು ಸರಿಯಾಗಿ ಮುಚ್ಚದೇ ನಿರ್ಲಕ್ಷಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಾಗಿದೆ ಎಂದು ಅನಾಪುರ ಎಸ್ಪಿ ಕುಮಾರ್ ಪ್ರತೀಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಅಕ್ರಮ ತುಣುಕುಗಳ(scrap) ವ್ಯವಹಾರವನ್ನು ನಿಯಂತ್ರಿಸಲು ವಿಫಲವಾದ ಹಿನ್ನೆಲೆ ಸ್ಥಳೀಯ ಪೊಲೀಸ್ ಠಾಣೆಯ ಮೇಲಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈ ಸಂತ್ರಸ್ತರಿಂದ ಕಲ್ಲಿದ್ದಲು (coal) ಹಾಗೂ ಲೋಹದ ತುಣಕನ್ನು (Metal) ಖರೀದಿಸುತ್ತಿದ್ದ ಇಬ್ಬರು ಅಕ್ರಮ ಡೀಲರ್‌ಗಳಿಗೆ ಸೇರಿದ ಸಂಸ್ಥೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. 

ಬೆಳಗಾವಿ: ಜನರ ನೆಮ್ಮದಿ ಕಳೆಯುತ್ತಿರುವ ಕಲ್ಲು ಗಣಿಗಾರಿಕೆ

ಮೃತರು ಮೂವರು ಹಾಗೂ ನಾಲ್ವರ ಬೇರೆ ಬೇರೆ ಗುಂಪುಗಳಲ್ಲಿ ಲೋಹ ಹಾಗೂ ಕಲ್ಲಿದ್ದಲ್ಲಿನ ತುಣಕನ್ನು ಶೋಧಿಸುವ ಸಲುವಾಗಿ ಗಣಿಗೆ ಜನವರಿ 26ರಂದು ಇಳಿದಿದ್ದರು. ಈ ಎರಡು ಗುಂಪುಗಳಿಗೂ ಮತ್ತೊಂದು ಗುಂಪಿರುವ ಬಗ್ಗೆ ಅರಿವಿರಲಿಲ್ಲ. ಎಲ್ಲರೂ ಗ್ಯಾಸ್ ತುಂಬಿನ ಕೊಳವೆಯ ಒಳಗೆ ಹೋಗಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆದರೆ ಕೊಳವೆ ಹೊರಗೆ ನಿಂತಿದ್ದ ಈ ಗುಂಪನ್ನು ನೋಡುತ್ತಾ ನಿಂತಿದ್ದ ಗ್ರಾಮದ ವ್ಯಕ್ತಿಯೊಬ್ಬ ಈ ಗುಂಪು ಎಷ್ಟು ಹೊತ್ತಾದರೂ ಹೊರಗೆ ಬರುವುದನ್ನು ಕಾಣದ ಹಿನ್ನೆಲೆಯಲ್ಲಿ ಬೇರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. 

ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸಂತ್ರಸ್ತರ ಸಂಬಂಧಿ ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆ SECL ನ ವಿಶೇಷ ರಕ್ಷಣಾ ತಂಡ ಅಲ್ಲಿಗೆ ಹೋಗಿದೆ. ಅಲ್ಲಿ ಇಡೀ ರಾತ್ರಿ ಹುಡುಕಾಡಿದ ಬಳಿಕ ಜನವರಿ 27 ರಂದು ಮುಂಜಾನೆ ಹಜರಿ ಲಾಲ್‌ ಕೊಲ್ (Hajari lal kol), ರಾಹುಲ್ ಕೊಲ್, ಕಪಿಲ್ ವಿಶ್ವಕರ್ಮ (Kapil vishwakarma) ಹಾಗೂ ರಾಜ್ ಮೆಹ್ತೊ (Raj Mehto) ಎಂಬ ನಾಲ್ವರ ಮೃತದೇಹ ಪತ್ತೆಯಾಗಿದೆ. ಆದರೆ ಉಳಿದ ಮೂವರು ನಾಪತ್ತೆಯಾಗಿದ್ದು, ಅವರಿನ್ನು ಸಿಕ್ಕಿರಲಿಲ್ಲ. ಹೀಗಾಗಿ ನಾಪತ್ತೆಯಾದವರ ಕುಟುಂಬ ಜನವರಿ 28 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ನಾಲ್ಕು ಜನ ಈ ಮುಚ್ಚಿದ ಗಣಿಯೊಳಗೆ ಹೋಗಿದ್ದು, ಅದರಲ್ಲಿ ಓರ್ವ ಪಾರಾಗಿ ಬಂದಿದ್ದ, ಅವನನ್ನು ವಿಚಾರಿಸಿದಾಗ ಆತ ಈ ವಿಚಾರ ಖಚಿತಪಡಿಸಿದ್ದ. ನಂತರ ಮತ್ತೆ ಶೋಧ ಕಾರ್ಯಾಚರಣೆ ಮುಂದುವರೆಸಿದಾಗ ಮತ್ತೆ ಮೂವರ ಶವ ಪತ್ತೆಯಾಗಿತ್ತು. ಮೃತರನ್ನು ರೋಹಿತ್ ಕೊಲ್ (Rohit kol) , ಮನೋಜ್ ಪಡ್ರಿ (manoj padri) , ರಾಜೇಶ್ ಮಿಶ್ರಾ (Rajesh Mishra) ಎಂದು ಗುರುತಿಸಲಾಗಿದೆ. ಈ ಎರಡೂ ಗುಂಪುಗಳು ಪ್ರತ್ಯೇಕವಾಗಿ ಗಣಿಗಿಳಿದು ಲೋಹದ ತುಣಕಿನ ಕಳವಿಗೆ ಹೋಗಿದ್ದರು ಎಂದು ಎಸ್ಪಿ ಹೇಳಿದ್ದರು.

Belagavi news: ಜಿಲ್ಲಾಡಳಿತದ ನೆರಳಲ್ಲಿ ಕಲ್ಲು ಗಣಿಗಾರಿಕೆ?

100 ರಿಂದ 200 ಮೀಟರ್ ಅಂತರದಲ್ಲಿ ಕಾಡಿನಲ್ಲಿ ಈ ಎರಡೂ ಗುಂಪುಗಳು ಬೇರೆ ಬೇರೆ ಜಾಗದಲ್ಲಿ ಗಣಿಗಿಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಧನ್‌ಪುರಿ (Dhanpuri) ಪೊಲೀಸ್ ಠಾಣೆಯ ಉಸ್ತುವಾರಿ ರತ್ನಂಬರ್ ಶುಕ್ಲಾ (Ratnamber Shukla) ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.