Asianet Suvarna News Asianet Suvarna News

ಲಸಿಕೆಯಿಂದ ಪ್ರಯೋಜನವಾಗಿಲ್ಲ; ಆದರ್ ಪೂನವಾಲ, ICMR ಮುಖ್ಯಸ್ಥರ ವಿರುದ್ಧ ದೂರು!

  • ಕೋವಿಶೀಲ್ಡ್ ಲಸಿಕೆ ಪಡೆದರೂ ಪ್ರತಿಕಾಯ ವೃದ್ಧಿಯಾಗಿಲ್ಲ
  • ಸೀರಂ ಸಂಸ್ಥೆ ಮುಖ್ಯಸ್ಥ, ICMR ಮುಖ್ಯಸ್ಥರ ವಿರುದ್ಧ ದೂರು
  • ಲಸಿಕೆಯಿಂದ ಆರೋಗ್ಯ ಕ್ಷೀಣಿಸಿದೆ ಎಂದು ಲಖನೌ ವಕ್ತಿಯಿಂದ ದೂರು
Luknow man files complaint against poonawalla icmr chief on no antibodies developed after taking vaccine ckm
Author
Bengaluru, First Published Jun 1, 2021, 9:22 PM IST

ಲಖನೌ(ಜೂ.01): ಕೊರೋನಾ ಮೊದಲ ಅಲೆ ಬಳಿಕ ಲಸಿಕೆ ಮಾರುಕಟ್ಟೆ ಪ್ರವೇಶಿಸಿದರೂ ಹೆಚ್ಚಿನವರಿಗೆ ಆಸಕ್ತಿ ಇರಲಿಲ್ಲ. ಆದರೆ 2ನೇ ಅಲೆ ಬಳಿಕ ಲಸಿಕೆ ಬೇಡಿಕೆ ಯಾವ ಮಟ್ಟಿಗೆ ಇದೆ ಅನ್ನೋ ಚಿತ್ರಣ ಈಗಾಗಲೇ ಸ್ಪಷ್ಟವಾಗಿದೆ. ಕೊರೋನಾ ಲಸಿಕೆ ಅಭಾವ ಈಗಲೂ ಇದೆ. ಆದರೆ ಇದೇ ಲಸಿಕೆ ಪಡೆದ ಲಖನೌ ವ್ಯಕ್ತಿ, ಕೋವಿಶೀಲ್ಡ್ ಲಸಿಕಾ ಸಂಸ್ಖೆಯ ಮುಖ್ಯಸ್ಥ ಆದರ್ ಪೂನವಾಲ ಹಾಗೂ ಐಸಿಎಂಆರ್ ಮುಖ್ಯಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿದೇಶದಿಂದ ಲಸಿಕೆ ತರಿಸಲು ಖಾಸಗಿ ಆಸ್ಪತ್ರೆಗಳ ಯತ್ನ

ಕೋವಿಶೀಲ್ಡ್ ಲಸಿಕೆಯಿಂದ ನನ್ನ ದೇಹದಲ್ಲಿ ಯಾವುದೇ ಪ್ರತಿಕಾಯಗಳು ಅಭಿವೃದ್ಧಿಯಾಗಿಲ್ಲ. ಲಸಿಕೆ ಪಡೆದ ಬಳಿಕ ನನ್ನ ಆರೋಗ್ಯ ಕೂಡ ಕ್ಷೀಣಿಸಿದೆ ಎಂದು ಆರೋಪಿಸಿ ಲಖನೌ ನಗರದ ರುಚಿ ಖಂಡ್ ವಲಯದ ಪ್ರತಾಪ್ ಚಂದ್ರ ದೂರು ನೀಡಿದ್ದಾರೆ. ಕೋವಿಶೀಲ್ಡ್ ಲಸಿಕೆ ಘಟಕ ಸೀರಂ ಸಂಸ್ಥೆಯ ಮುಖ್ಯಸ್ಥ ಆದರ್ ಪೂನವಾಲ ಹಾಗೂ ಐಸಿಎಂಆರ್ ಮುಖ್ಯಸ್ಥ  ಡಾ. ಬಲರಾಮ್ ಭಾರ್ಗವ್ ವಿರುದ್ಧ ಪ್ರತಾಪ್ ಚಂದ್ರ ದೂರು ನೀಡಿದ್ದಾರೆ.

ದೂರಿನಲ್ಲಿ ಇವರಿಬ್ಬರ ಜೊತೆ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಗರ್ವಾಲ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಅಪರ್ಣಾ ಉಪಾಧ್ಯ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.  

ಜೂನ್‌ 2ನೇ ವಾರದಿಂದ ಸ್ಪುಟ್ನಿಕ್‌ ಲಸಿಕೆ ಲಭ್ಯ: ಪ್ರತೀ ಡೋಸ್‌ಗೆ 1,195 ರೂ.!

ಮೊದಲ ಡೋಸ್ ಪಡೆದು ತಿಂಗಳು ಇದೀಗ ಮೂರು ತಿಂಗಳಾಗುತ್ತಿದೆ. ಆದರೆ ದೇಹದಲ್ಲಿ ರೋಗನಿರೋಧ ಶಕ್ತಿ ಅಭಿವೃದ್ಧಿಯಾಗಿಲ್ಲ. ಬದಲಾಗಿ ಆರೋಗ್ಯ ಕ್ಷೀಣಿಸಿದೆ. ರಕ್ತದಲ್ಲಿ ಪ್ಲೇಟ್‌ಲೇಟ್ ಸಂಖ್ಯೆ ಕುಸಿದಿದೆ. ಲಸಿಕೆಯಿಂದ ದೇಹಲ್ಲಿ ಬದಲಾವಣೆಗಳಾಗಿವೆಯೇ ಎಂಬುದನ್ನು ಪರೀಕ್ಷಿಸಿದ್ದೇನೆ. ಪ್ರಯೋಗಾಲದ ವರದಿಯಲ್ಲಿ ಇದು ಸ್ಪಷ್ಟವಾಗಿದೆ. ದೂರಿನಲ್ಲಿ ಪ್ರತಾಪ್ ಚಂದ್ರ ತನ್ನ ಲ್ಯಾಬ್ ರಿಪೋರ್ಟ್ ಕೂಡ ಲಗತ್ತಿಸಿದ್ದಾರೆ.

ಪೊಲೀಸರು ತನ್ನ ದೂರು ದಾಖಲಿಸಿದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಪ್ರತಾಪ್ ಚಂದ್ರ ಎಚ್ಚರಿಸಿದ್ದಾರೆ. ಪ್ರತಾಪ್ ಚಂದ್ರ ದೂರು ಇದೀಗ ಲಖನೌ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Follow Us:
Download App:
  • android
  • ios