ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ 4.8 ತೀವ್ರತೆಯ ಭೂಕಂಪನದ ಅನುಭವವಾಗಿದ್ದು, ಭೂಮಿಯ ಕಂಪನಕ್ಕೆ ಅಮೆರಿಕಾದ ಸ್ವಾತಂತ್ರದ ಪ್ರತಿಮೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಅಲುಗಾಡಿದೆ.
International Apr 7, 2024, 9:57 AM IST
ತೈವಾನಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದ ಅತೀವ ಹಾನಿಯಾಗಿದೆ. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಮೂವರು ನರ್ಸ್ ಗಳು ನವಜಾತ ಶಿಶುಗಳನ್ನು ರಕ್ಷಣೆ ಮಾಡುತ್ತಿರುವ ವಿದ್ಯಮಾನ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತೊಟ್ಟಿಲುಗಳನ್ನು ಒಂದೆಡೆ ಸೇರಿಸಿ, ಆಚೀಚೆಯಾಗದಂತೆ ನೋಡಿಕೊಳ್ಳುವ ನರ್ಸ್ ಗಳ ಕಳಕಳಿಗೆ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
relationship Apr 6, 2024, 5:09 PM IST
ಭೂಮಿ ಕಂಪಿಸಿದ್ರೆ ಎಲ್ಲರೂ ಅವರವರ ಜೀವ ಉಳಿಸ್ಕೊಳೋಕೆ ಹೊರಗೋಡ್ತಾರೆ. ಆದ್ರೆ ಜಪಾನ್ನ ಈ ನರ್ಸ್ಗಳು ನವಜಾತ ಶಿಶುಗಳ ಕ್ರಿಬ್ ಬೀಳದಂತೆ ಹಿಡಿದುಕೊಂಡು ಆ ಮಕ್ಕಳನ್ನು ಕಾಪಾಡುತ್ತಾರೆ.
International Apr 6, 2024, 9:58 AM IST
ತೈವಾನ್ನಲ್ಲಿ ಕೆಲ ದಿನಗಳ ಹಿಂದಷ್ಟೇ 7.4 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಈ ಭೂಕಂಪನದ ಸಮಯದಲ್ಲೂ ತೈವಾನ್ನ ಗಗನಚುಂಬಿ ಕಟ್ಟಡ ತೈಪೆ 101 ಯಾವುದೇ ಹಾನಿಗೊಳಗಾಗದೇ ಸಧೃಡವಾಗಿ ನಿಂತಿದ್ದು, ಅಚ್ಚರಿಗೆ ಕಾರಣವಾಗಿದೆ.
International Apr 5, 2024, 2:37 PM IST
ತೈವಾನ್ ಬಳಿಕ ಹಿಮಾಚಲ ಪ್ರದೇಶದಲ್ಲಿ ಭಮಿ ಕಂಪಿಸಿದ್ದು, ರಿಕ್ಟರ ಮಾಪಕದಲ್ಲಿ 5.3 ತೀವ್ರತೆಯ ಕಂಪನ ದಾಖಲಾಗಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಸಣ್ಣಗೆ ಕಂಪಿಸಿದ ಅನುಭವವಾಗಿದ್ದು, ಹಿಮಾಚಲ ಪ್ರದೇಶದ ಚಂಬಾದಲ್ಲಿ 5.3 ತೀವ್ರತೆ ದಾಖಲಾಗಿದೆ.
India Apr 5, 2024, 7:02 AM IST
25 ವರ್ಷಗಳಲ್ಲೇ ಅತ್ಯಂತ ಬಲಿಷ್ಠವಾದ ಭೂಕಂಪನ ದ್ವೀಪರಾಷ್ಟ್ರ ತೈವಾನ್ನಲ್ಲಿ ಸಂಭವಿಸಿದ್ದು, ಕಟ್ಟಡಗಳು ಹಾಗೂ ಹೆದ್ದಾರಿಗಳಿಗೆ ಅಪಾರ ಹಾನಿಯಾಗಿದೆ. 7 ಮಂದಿ ಸಾವಿಗೀಡಾಗಿದ್ದಾರೆ. 7.2 ತೀವ್ರತೆಯ ಕಂಪನ ಇದಾಗಿದ್ದು, ಸಮುದ್ರದಾಳದಲ್ಲಿ ಘಟಿಸಿದೆ.
International Apr 4, 2024, 7:03 AM IST
ಇಂದು ಮುಂಜಾನೆ ತೈವಾನ್ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ ಅಲ್ಲಿನ ಸ್ಥಳೀಯ ಕಾಲಮಾನ 8 ಗಂಟೆಗೆ ಪೂರ್ವ ತೈವಾನ್ನಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದೆ. ಈ ಭೂಕಂಪನದ ಹಿನ್ನೆಲೆಯಲ್ಲಿ ಪೂರ್ವ ತೈವಾನ್ ಹಾಗೂ ಜಪಾನ್ ದಕ್ಷಿಣ ಭಾಗದಲ್ಲಿ ಸುನಾಮಿ ಅಲರ್ಟ್ ಘೋಷಿಸಲಾಗಿದೆ.
International Apr 3, 2024, 6:58 AM IST
ನೈಋತ್ಯ ಪೆಸಿಫಿಕ್ನಲ್ಲಿರುವ ಪಪುವಾ ನ್ಯೂಗಿನಿಯ ದ್ವೀಪ ರಾಷ್ಟ್ರದಲ್ಲಿ ಭೀಕರ ಭೂಕಂಪ ಸಂಭವಿಸದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಬಳಿಕ ದ್ವೀಪ ರಾಷ್ಟ್ರದಲ್ಲಿ ಪ್ರವಾಹ ಉಂಟಾಗಿದೆ.
International Mar 25, 2024, 3:03 PM IST
28ನೇ ಮಹಡಿಯಲ್ಲಿದ್ದೆವು, ನೆಲ ಚಲಿಸಿತು, ಎದೆ ಝಲ್ ಅಂತು... ಜಪಾನ್ನಲ್ಲಿ ನಡೆದ ಭೂಕಂಪದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಅವರ ಪುತ್ರ ಕಾರ್ತಿಕೇಯ.
Cine World Mar 21, 2024, 4:22 PM IST
ಗುಮ್ಮಟ ನಗರಿ ವಿಜಯಪುರದಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ .ರಾತ್ರಿ 12.22 ಹಾಗೂ ರಾತ್ರಿ 1.20 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಒಟ್ಟು ಎರಡು ಬಾರಿ ಕಂಪಿಸಿರುವ ಭೂಮಿ. ಭೂಕಂಪನ ತೀವ್ರತೆ ಮೊಬೈಲ್ ಆಪ್ ಗಳಲ್ಲೂ ದಾಖಲಾಗಿದೆ.
state Jan 29, 2024, 6:46 AM IST
ವಿವೇಕಾನಂದರು ಬಂಗಾಳದಲ್ಲಿ ಕ್ಷಾಮ, ಫ್ಲೇಗ್ ಬಂದಾಗ, ಭೂಕಂಪವಾದಾಗಿ ಜನ ನರಳಿದಾಗ ಸ್ವತಃ ನಿಂತು ಜನರ ಸೇವೆ ಮಾಡಿದರು. ಒಂದೊಮ್ಮೆ ಅಮೆರಿಕಗೆ ಹೋಗಲು ಅವರ ಶಿಷ್ಯ ಬಳಗದ ಅರುಸಿಂಗ್ ಪೆರಮಾಳ್ ಕೆಲ ಹಣ ತಂದು ಸ್ವಾಮಿಜಿಗೆ ಕೊಡಲು ಬಂದರೆ ರಾಜ್ಯದ ಜನ ಕಷ್ಟದಿಂದ ಕಂಗೆಟ್ಟಿದ್ದಾರೆ, ಇದೇ ಹಣ ಅವರಿಗೆ ನೀಡು ಎಂದು ಹೇಳಿ ಕಲುಹಿಸಿದ್ದರು. ಈ ಬಗೆಯ ಸಮಾಜದ ಬಗೆಗಿನ ಕಾಳಜಿ ಅಪರೂಪವೇ.
state Jan 12, 2024, 10:06 AM IST
ಜಪಾನ್ ಭೂಕಂಪದ ಆತಂಕ ಮಾಸುವು ಮುನ್ನವೇ ಇದೀಗ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ದೆಹಲಿಯಲ್ಲಿ ಜನರು ಆತಂಕಗೊಂಡಿದ್ದಾರೆ.
India Jan 11, 2024, 3:12 PM IST
ಹೊಸ ವರ್ಷದಂದು ಜಪಾನ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ನಟ ಜ್ಯೂ.ಎನ್ಟಿಆರ್ ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
Cine World Jan 2, 2024, 4:08 PM IST
ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದುವಿನ 300 ಕಿಲೋಮೀಟರ್ (190 ಮೈಲುಗಳು) ಒಳಗೆ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.
International Jan 1, 2024, 3:25 PM IST
ಹೊಸ ವರ್ಷಾಚರಣೆಗೆ ಭಾರತ ಸಜ್ಜಾಗಿದೆ. ಇದರ ನಡುವೆ ಭಾರತಕ್ಕೆ ಭೂಕಂಪ ಆತಂಕ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿಂದು ಭೂಮಿ ಕಂಪಿಸಿದೆ. ನಿನ್ನೆ ಮಣಿಪುರದಲ್ಲಿ ಭೂಮಿ ಕಂಪಿಸಿದ್ದರೆ, ಇಂದು ಕುಪ್ವಾರದಲ್ಲಿ ಭೂಕಂಪ ಸಂಭವಿಸಿದೆ.
India Dec 30, 2023, 6:43 PM IST