ಚೀನಾ (ಮೇ 22) ಮಯಾನ್ಮಾರ್ ಮತ್ತು ಚೀನಾ ಗಡಿಯಲ್ಲಿ ಭೂಮಿ ಕಂಪಿಸಿದೆ.  ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪ ದಾಖಲಾಗಿದೆ.

ಭೂಕಂಪನದಲ್ಲಿ ಮೂವರು ಸಾವನ್ನಪ್ಪಿದ್ದು 25 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.  ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಶುಕ್ರವಾರ ರಾತ್ರಿಯೂ ಭೂಕಂಪನ ಸಂಭವಿಸಿದ್ದು ಇದು ಎರಡನೇ ಸಾರಿ ಭೂಮಿ ಕಂಪಿಸಿದೆ. ಮೊದಲನೇ ಭೂಕಂಪನದಲ್ಲಿ ಸಾವು-ನೋವಿನ ವರದಿಗಳು ಬಂದಿರಲಿಲ್ಲ.

ಮೊದಲನೆ ಭೂಕಂಪನದ ಕೇಂದ್ರಕ್ಕೂ ಎರಡನೇ ಭೂಕಂಪನದ ಕೇಂದ್ರಕ್ಕೂ ಸಾವಿರ ಕಿಮೀ ಅಂತರವಿದೆ. ಯುಎಸ್ ಭೂಗೋಳ ಶಾಸ್ತ್ರಜ್ಞ ಜೋನಾಥನ್  ಈ ಎರಡು ಭೂಕಂಪನ ಒಂದಕ್ಕೊಂದು ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಕಂಪಿಸಿದ್ದ ಭೂಮಿ

ಶುಕ್ರವಾರ ರಾತ್ರಿ ಯುನ್ನಾನ್‌ನ ನೈಋತ್ಯ ಭಾಗದಲ್ಲಿ 6.8 ತೀವ್ರತೆಯ ಭೂಕಂಪ ದಾಖಲಾಗಿದ್ದು, ಐದು ಗಂಟೆಗಳ ಅಂತರದಲ್ಲೇ ಮತ್ತೊಂದು ಭೂಕಂಪ ಸಂಭವಿಸಿದೆ. ಎರಡನೇ ಬಾರಿ ದಕ್ಷಿಣ ಕ್ವಿಂಗೈ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ. ಪರ್ವತ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ನಗರಗಳಿಂದ ದೂರವಿರುವ ಕಾರಣ ಹೆಚ್ಚಿನ ಮಟ್ಟದಲ್ಲಿ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಕ್ವಿಂಗೈನಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದುವು ಕ್ಸೈನಿಂಗ್ ನಗರದ ನೈರುತ್ಯಕ್ಕೆ 400 ಕಿ.ಮೀ ದೂರದಲ್ಲಿತ್ತು. ಶುಕ್ರವಾರ 6.8 ತೀವ್ರತೆಯ ಪ್ರಬಲ ಭೂಕಂಪವಾಗಿತ್ತು. ಭಾರತದ ಅರುಣಾಚಲ ಪ್ರದೇಶದಲ್ಲಿಯೂ ಭೂಕಂಪನದ ವರದಿಗಳು ಬಂದಿದ್ದವು.  ಚಾಂಗ್ಲಾಂಗ್ ವಲಯದಲ್ಲಿ ಭೂಕಂಪ ಸಂಭಿವಿಸಿತ್ತು.