ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಲ್ವಾರ್ ಜೈಲಿನಲ್ಲಿದ್ದ ಪ್ರಿಯಾ ಸೇಠ್‌ ಮತ್ತು ಹನುಮಾನ್ ಪ್ರಸಾದ್‌ ಎಂಬ ಇಬ್ಬರು ಕೈದಿಗಳ ನಡುವೆ ಪ್ರೀತಿ ಹುಟ್ಟಿದೆ. ಸ್ನೇಹದಿಂದ ಆರಂಭವಾದ ಇವರ ಸಂಬಂಧವು ಪ್ರೇಮಕ್ಕೆ ತಿರುಗಿ, ಇದೀಗ ರಾಜಸ್ಥಾನ ಹೈಕೋರ್ಟ್‌ನಿಂದ ಪರೋಲ್‌ ಪಡೆದು ವಿವಾಹವಾಗಿದ್ದಾರೆ.

- 6 ತಿಂಗಳಿಂದ ಒಂದೇ ಜೈಲಿನಲ್ಲಿ ಇಬ್ಬರ ವಾಸ

ಜೈಪುರ: ಜೀವಕ್ಕೆ ಜೀವ ಕೊಡುವ ಪ್ರೇಮಿಗಳು ಮದುವೆ ಹೊಸದಲ್ಲ. ಆದರೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಜೋಡಿ ನಡುವೆ ಪ್ರೇಮಾಂಕುರವಾಗಿ, ಇಬ್ಬರೂ ಇದೀಗ ದಾಂಪತ್ಯ ಜೀವನದಲ್ಲಿ ಹೊಸದಾಗಿ ಬಂಧಿಯಾದ ಅಚ್ಚರಿಯ ಘಟನೆ ರಾಜಸ್ಥಾನದಲ ಅಲ್ವಾರ್‌ನಲ್ಲಿ ನಡೆದಿದೆ.

ಪ್ರಿಯಾ ಸೇಠ್‌ ಮತ್ತು ಹನುಮಾನ್ ಪ್ರಸಾದ್‌ ಮದ್ವೆಯಾದ ನವಜೋಡಿ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಇಬ್ಬರೂ ಕಳೆದ 6 ತಿಂಗಳಿನಿಂದ ಒಂದೇ ಜೈಲಿನಲ್ಲಿ ಇದ್ದರು. ಜೈಲಿನಲ್ಲಿಯೇ ಸ್ನೇಹ ಬೆಳೆದು, ಸ್ನೇಹ ಪ್ರೀತಿಗೆ ತಿರುಗಿದೆ. ರಾಜಸ್ಥಾನ ಹೈಕೋರ್ಟ್‌ನಿಂದ ಪರೋಲ್‌ ಪಡೆದು ಶುಕ್ರವಾರ ಹಸೆಮಣೆ ಏರಿದ್ದಾರೆ.

ಕೊ*ಲೆಗಡುಕರು:

ಪ್ರಿಯಾ ಸೇಠ್‌ ಮೂಲತಃ ಮಾಡೆಲ್‌ ಆಗಿದ್ದು, 2018ರಲ್ಲಿ ತನ್ನ ಪ್ರಿಯಕರ ದೀಕ್ಷಂತ್‌ ಕಾಮ್ರಾ ಜೊತೆ ಸೇರಿ ಟಿಂಡರ್‌ ಆ್ಯಪ್‌ನಲ್ಲಿ ಪರಿಚಯವಾಗಿದ್ದ ದುಶ್ಯಂತ್‌ ಸಿಂಗ್‌ ಎಂಬಾತನನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಳು.

ಇದನ್ನೂ ಓದಿ: ಮಾವನ ಮಗನನ್ನೇ ಲವ್ ಮಾಡಿ ಮದುವೆಯಾದ್ರೂ 2 ತಿಂಗಳು ಸಂಸಾರ ಮಾಡದ ಯುವತಿ; ನಗರ ಜೀವನಕ್ಕೆ ಆಸೆಪಟ್ಟು ಬದುಕು ಅಂತ್ಯ!

ಮತ್ತೊಂದೆಡೆ ಈಕೆಯ ಈಗಿನ ವರ ಹನುಮಾನ್‌ ಪ್ರಸಾದ್‌ 2017ರಲ್ಲಿ ತನಗಿಂತ 10 ವರ್ಷ ಹಿರಿಯ ಮಹಿಳೆಯ ಪ್ರೇಮಕ್ಕೆ ಬಿದ್ದು, ಆಕೆಯ ಗಂಡ ಮತ್ತು ನಾಲ್ವರು ಮಕ್ಕಳನ್ನು ಹತ್ಯೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.

ಇದನ್ನೂ ಓದಿ: ಇಡೀ ಥಿಯೇಟರ್‌ನಲ್ಲಿ ಒಂದು ಸೀಟು ಬಿಟ್ಟು ಮತ್ತೊಂದು ಸೀಟ್ ಬುಕ್‌: ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಸಿಂಗಲ್ಸ್‌ಗಳ ಶಾಕ್