ಶ್ರೀಕೃಷ್ಣ ಕೇಳಿದ್ದು 5 ಗ್ರಾಮ, ಈಗ 3 ಶ್ರದ್ಧಾ ಕೇಂದ್ರ, ಕಾಶಿ ಮಥುರಾ ಕುರಿತು ಸಿಎಂ ಯೋಗಿ ಮಹತ್ವದ ಹೇಳಿಕೆ!
ಸಿಎಂ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಆಯೋಧ್ಯೆ ಬೆನ್ನಲ್ಲೇ ಇದೀಗ ಕಾಶಿ ಹಾಗೂ ಮಥುರಾ ಮರಳಿ ಪಡೆಯುವ ಕುರಿತು ಯೋಗಿ ಆದಿತ್ಯನಾಥ್ ಹೇಳಿಕೆ ಹೋರಾಟದ ಹುರುಪು ಹೆಚ್ಚಿಸಿದೆ.
ಲಖನೌ(ಫೆ.07) ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರಗಳ ಪೈಕಿ ಆಯೋಧ್ಯೆ, ಕಾಶಿ, ಮಥುರಾ ಪ್ರಮುಖವಾದದ್ದು. ಇದರಲ್ಲಿ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇತ್ತ ಕಾಶಿ ವಿಶ್ವನಾಥನ ಮಂದಿರ ಹಾಗೂ ಮಥುರಾ ಶ್ರೀಕೃಷ್ಮ ಮಂದಿರ ಮರಳಿ ಪಡೆಯುವ ಹೋರಾಟ ನಡೆಯುತ್ತಲೇ ಇದೆ. ಇದರ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ವಿಧಾಸಭೆಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಠ , ಕೌರವರ ಜೊತೆಗಿನ ಸಂಧಾನದಲ್ಲಿ ಕನಿಷ್ಠ 5 ಗ್ರಾಮಗಳನ್ನು ನೀಡಿ ಎಂದು ಮನವಿ ಮಾಡಿದ್ದ. ಆದರೆ ಈಗ ಹಿಂದೂ ಸಮುದಾಯ ಪ್ರಮು 3 ಶ್ರದ್ಧಾ ಮಾತ್ರ ಮರಳಿ ಕೇಳುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರದ ಮುಂದಿನ ಟಾರ್ಗೆಟ್ ಕಾಶಿ ಹಾಗೂ ಮಥುರಾ ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ.
ಕೇವಲ ಐದೇ ಐದು ಗ್ರಾಮಮವನ್ನು ಪಾಂಡವರಿಗೆ ನೀಡಿ, ಉಳಿದೆಲ್ಲಾ ಆಸ್ತಿ,ಅಂತಸ್ತು, ಅರಮನೆಯನ್ನು ನಿಮ್ಮಲ್ಲೇ ಇರಲಿ ಎಂದು ಸಂಧಾನ ಸೂತ್ರ ಮುಂದಿಡಲಾಗಿತ್ತು. ಆದರೆ ಸಂಧಾನ ಒಪ್ಪಿಕೊಳ್ಳದ ಕಾರಣ ಕೊನೆಗೆ ಏನಾಯಿತು ಅನ್ನೋದು ಎಲ್ಲರಿಗೂ ಗೊತ್ತು. ಈಗ ಹಿಂದೂ ಸಮುದಾಯ ಅತ್ಯಂತ ಪವಿತ್ರ, ಶ್ರದ್ಧಾ ಭಕ್ತಿಯ ಮೂರು ಕೇಂದ್ರಗಳನ್ನು ಮಾತ್ರ ಕೇಳುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಮೂಲಕ ಸಂಧಾನದ ಮೂಲಕ ಇನ್ನುಳಿದ ಕಾಶಿ ಹಾಗೂ ಮಥುರಾ ಮಂದಿರ ಮರಳಿದರೆ ಬೇರೆ ಮಂದಿರ ಕೇಳುವ ಪ್ರಶ್ನೆ ಇಲ್ಲ, ಆದರೆ ಹೋರಾಟದ ಮೂಲಕ ಪಡೆದರೆ ಸಂಪೂರ್ಣವಾಗಿ ಮರಳಿ ಪಡೆಯಬೇಕಾಗುತ್ತದೆ ಅನ್ನೋ ಸೂಚ್ಯ ಸಂದೇಶವನ್ನು ಯೋಗಿ ರವಾನಿಸಿದ್ದಾರೆ.
ಕಾಶಿ ಮಥುರಾ ಮರಳಿ ಸಿಕ್ಕರೆ, ಮತ್ಯಾವ ಮಂದಿರ ವಾಪಸ್ ಕೇಳಲ್ಲ,ರಾಮಜನ್ಮಭೂಮಿ ಸ್ವಾಮೀಜಿ ಘೋಷಣೆ!
ವಿಧಾನಸಭೆ ಅಧಿವೇಶದಲ್ಲೇ ಈ ಮಾತು ಹೇಳಿರುವ ಕಾರಣ ಭಾರಿ ಸಂಚಲನ ಸೃಷ್ಟಿಸಿದೆ. ಆಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಬಳಿಕ ಕಾಶಿಯ ನಂದಿ ಬಾಬನಿಗೆ ಅನಿಸುತ್ತಿದೆ ನಾವು ಯಾಕೆ ಇನ್ನೂ ಕಾಯಬೇಕು ಎಂದು ಕಾಶಿಯ ನಂದಿ ಬಾಬಾಗೆ ಅನಿಸುತ್ತಿದೆ ಎಂದು ಯೋಗಿ ಹೇಳಿದ್ದಾರೆ. ಈ ಕಾಯುವಿಕೆಗೆ ಇತ್ತೀಚೆಗೆ ಗ್ಯಾನವಾಪಿ ನೆಲಮಾಳಿಗೆಯಲ್ಲಿರುವ ಹಿಂದೂ ಮೂರ್ತಿಗಳ ಪೂಜೆಗೆ ಅವಕಾಶ ಸಿಕ್ಕಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
उत्तर प्रदेश विधान सभा में... https://t.co/lQOc8zkPim
— Yogi Adityanath (@myogiadityanath) February 7, 2024
ದೇಶದಲ್ಲಿ ಎಲ್ಲರ ಸಂತೋಷ ಇಮ್ಮಡಿಗೊಂಡಿದೆ. ಕಾರಣ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ದುರಂತ ಅಂದರೆ ಶ್ರೀರಾಮ ತನ್ನ ಅಸ್ತಿತ್ವಕ್ಕೆ ಕೋರ್ಟ್‌ಗೆ ದಾಖಲೆ ಸಲ್ಲಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೆವು. ಆದರೆ ಇದು ನಮಗೆ ಹಲವು ಪಾಠಗಳನ್ನು ಕಲಿಸಿದೆ. ಮಂದಿರ ಉಳಿಸಿಕೊಳ್ಳಲು ನಮಗೆ ಜವಾಬ್ದಾರಿಯನ್ನೂ ನೀಡಿದೆ. ಶ್ರೀರಾಮ ತಾನು ಹುಟ್ಟಿದ ಸ್ಥಳದಲ್ಲಿ ವಿರಾಜಮಾನನಾಗಿದ್ದಾನೆ. ಒಬ್ಬ ಭಕ್ತನಾಗಿ ಇದಕ್ಕಿಂತ ಖುಷಿಯ ವಿಚಾರವೇನಿದೆ? ಇದರ ಜೊತೆಗೆ ನಾವು ರಾಮ ಮಂದಿರ ಅಲ್ಲೆ ಕಟ್ಟುವೆವು ಎಂದಿದ್ದೆವು. ನಮ್ಮನ್ನು ಗೇಲಿ ಮಾಡಲಾಗಿತ್ತು. ಆದರೆ ನಾವು ಹೇಳಿದಂತೆ ಮಾಡಿದ್ದೇವೆ. ಮಂದಿರ ಅಲ್ಲೆ ಕಟ್ಟಿದ್ದೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಗ್ಯಾನವಾಪಿ ಮಸೀದಿಯೊಳಗೆ ಪ್ರತಿ ದಿನ 5 ಬಾರಿ ಹಿಂದೂ ದೇವರ ಪೂಜೆ, ನಂದಿಗೂ ಕೇಳಿಸಲಿದೆ ಶಂಖನಾದ!