ಕಾಶಿ ಮಥುರಾ ಮರಳಿ ಸಿಕ್ಕರೆ, ಮತ್ಯಾವ ಮಂದಿರ ವಾಪಸ್ ಕೇಳಲ್ಲ,ರಾಮಜನ್ಮಭೂಮಿ ಸ್ವಾಮೀಜಿ ಘೋಷಣೆ!
ಆಯೋಧ್ಯೆ ರಾಮಜನ್ಮಭೂಮಿಯನ್ನು ಕಾನೂನು ಮೂಲಕ ಮರಳಿ ಪಡೆಯಲಾಗಿದೆ. ಇದೀಗ ಕಾಶಿ ವಿಶ್ವನಾಥ ಮಂದಿರ ಹಾಗೂ ಮಥುರಾ ಶ್ರೀ ಕೃಷ್ಣ ಮಂದಿರವನ್ನು ಸೌಹಾರ್ಧಯುತವಾಗಿ ಶಾಂತಿಯುತವಾಗಿ ಹಿಂದೂಗಳಿಗೆ ಮರಳಿಸಿದರೆ, ಇನ್ಯಾವ ಮಂದಿರ ವಾಪಸ್ ಕೇಳುವುದಿಲ್ಲ ಎಂದು ರಾಜಜನ್ಮಭೂಮಿ ಸ್ವಾಮೀಜಿ ಘೋಷಿಸಿದ್ದಾರೆ.
ಆಯೋಧ್ಯೆ(ಫೆ.05) ಶ್ರೀರಾಮ ಹುಟ್ಟಿದ ರಾಮಜನ್ಮಭೂಮಿ 500 ವರ್ಷಗಳ ಹೋರಾಟದ ಬಳಿಕ ಮರಳಿ ಸಿಕ್ಕಿದೆ. ಈ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಯಾಗಿದೆ. ದಾಳಿಕೋರರ ಮತಾಂಧತೆಗೆ ಸಿಕ್ಕಿ ಸಾವಿರಾರು ದೇವಾಲಯಗಳು ಧ್ವಂಸಗೊಂಡಿದೆ. ಸಾವಿರಾರು ದೇವಾಲಯಗಳ ಗೋಡೆ ಕಂಬಗಳ ಮೇಲೆ ಮಸೀದಿ ತಲೆ ಎತ್ತಿದೆ. ಆದರೆ ಕಾಶಿ ವಿಶ್ವನಾಥ ಮಂದಿರ,ಮಥುರಾ ಶ್ರೀಕೃಷ್ಮ ಮಂದಿರವನ್ನು ಮುಸ್ಲಿಮ್ ಬಾಂಧವರು ಶಾಂತಿಯುತವಾಗಿ ಹಿಂದೂಗಳಿಗೆ ಮರಳಿಸಿದರೆ ಮತ್ಯಾವ ಮಂದಿರವನ್ನು ಹಿಂದೂ ಸಮಾಜ ವಾಪಸ್ ಕೇಳುವುದಿಲ್ಲ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವಾಮೀಜಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹೇಳಿದ್ದಾರೆ.
ಗುರು ಗೋವಿಂದ್ ಗಿರಿ ಮಹಾರಾಜ್ ಅವರ 75ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಆಯೋಧ್ಯೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಗುರು ಗೋವಿಂದ್ ಗಿರಿ ಮಹಾರಾಜ್, ದೇಶ ಒಗ್ಗಟ್ಟಾಗಿ ಮುಂದೆ ಸಾಗಬೇಕಿದೆ. ನಮ್ಮ ಸಾವಿರಾರು ದೇಗುಲ ಮೇಲೆ ಮಸೀದಿ ಕಾರ್ಯನಿರ್ವಹಿಸುತ್ತಿದೆ. ಇತಿಹಾಸವನ್ನು ಕೆದಕಲು ಹೋಗುತ್ತಿಲ್ಲ. ಕೇವಲ ಕಾಶಿ ಹಾಗೂ ಮಥುರಾ ಎರಡನ್ನು ಶಾಂತಿಯುತವಾಗಿ ಹಿಂದೂಗಳಿಗೆ ಮರಳಿಸಿ. ಇನ್ನುಳಿದ ಯಾವುದೇ ಮಂದಿರವನ್ನು ಮರಳಿ ಕೇಳುವುದಿಲ್ಲ ಎಂದು ಗಿರಿ ಮಹರಾಜ್ ಹೇಳಿದ್ದಾರೆ.
ಉಪವಾಸ ಅಂತ್ಯಗೊಳಿಸಲು ಏನಾದರು ಕೊಡುವುದಿದ್ದರೆ..,ಮೋದಿ ಮನವಿಗೆ ಭಾವುಕರಾದ ಸ್ವಾಮೀಜಿ!
3,500ಕ್ಕೂ ಹೆಚ್ಚು ಮಂದಿರಗಳು ಹೊರಗಿನ ದಾಳಿಕೋರರ ದಾಳಿಗೆ ಬಲಿಯಾಗಿದೆ. ಆದರೆ ಅದ್ಯಾವುದನ್ನು ಮರಳಿ ಕೇಳುತ್ತಿಲ್ಲ. ಹಿಂದೂ ಧರ್ಮ 7 ಕ್ಷೇತ್ರ ಹಾಗೂ ಮೋಕ್ಷ ಧಾಮಗಳಲ್ಲಿ ಕೇವಲ 3 ಮಾತ್ರ ಕೇಳುತ್ತಿದ್ದೇವೆ. ಇದರಲ್ಲಿ ಆಯೋಧ್ಯೆಯಲ್ಲಿ ರಾಮ ವಿರಾಜಮಾನನಾಗಿದ್ದಾನೆ. ಇದೇ ರೀತಿ ಕಾಶಿ ವಿಶ್ವನಾಥ ಹಾಗೂ ಮಥುರಾ ಶ್ರೀಕೃಷ್ಣನ ಜನ್ಮಸ್ಥಾನ ಮಾತ್ರ ಮರಳಿ ಕೇಳುತ್ತಿದ್ದೇವೆ ಎಂದು ಮಹರಾಜ್ ಹೇಳಿದ್ದಾರೆ.
ಹೊರಗಿನ ದಾಳಿಕೋರರ ದಾಳಿಯಿಂದ ಮಂದಿರಗಳು ಮಸೀದಿಯಾಗಿದೆ. ಹಿಂದಿನ ದಾಳಿ, ಇತಿಹಾಸವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿಲ್ಲ. ಈ ದೇಶದಲ್ಲಿ ಹಿಂದೂ ಮುಸ್ಲಿಮ್ ಸಮುದಾಯಕ ಜೊತೆಯಾಗಿ ಸಾಗಬೇಕಿದೆ. ಹೀಗಾಗಿ ಶಾಂತಿಯುತವಾಗಿ ಪರಿಹಾರ ಅಗತ್ಯ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ, ರಾಮ ಪರಿವಾರದ 13 ದೇವಸ್ಥಾನಕ್ಕೆ ಅಯೋಧ್ಯೆ ಸಿದ್ಧತೆ!