Asianet Suvarna News Asianet Suvarna News

ಭಗವಾನ್ ಶಿವನ ಕೈಯಲ್ಲಿ ವೈನ್ ಗ್ಲಾಸ್ ಹಿಡಿಸಿದ ಇಸ್ಟಾಗ್ರ್ಯಾಮ್!

* ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿಸ ಇಸ್ಟಾಗ್ರ್ಯಾಮ್
* ಭಗವಾನ್ ಶಿವನ ಕೈಯಲ್ಲಿ ವೈನ್ ಗ್ಲಾಸ್
* ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ
* ಯಾರ ಮೇಲೆ ರಿಪೋರ್ಟ್ ಮಾಡಬೇಕು?

lord shiva sticker Social media instagram hurts hindu emotions mah
Author
Bengaluru, First Published Jun 8, 2021, 4:52 PM IST

ಬೆಂಗಳೂರು(ಜೂ.  08)  ಕನ್ನಡವನ್ನು ಕೊಳಕು ಭಾಷೆ ಎಂದಿದ್ದ ಗೂಗಲ್ ಕನ್ನಡಿಗರ ಸ್ವಾಭಿಮಾನ-ಹಕ್ಕೋತ್ತಾಯಕ್ಕೆ ತಲೆಬಾಗಿ ಕ್ಷಮೆ ಕೇಳಿತ್ತು. ಮುಂದೆ ಹೀಗೆ ಆಗುವುದಿಲ್ಲ ಎಂದು ತಪ್ಪು ಒಪ್ಪಿಕೊಂಡಿತ್ತು.  ಮಹಿಳೆಯರ ಒಳುಡುಪಿನ ಮೇಲೆ ಕನ್ನಡದ ಧ್ವಜ ಮುದ್ರಿಸಿ ಮಾರಾಟ ಮಾಡಲು ಅಮೇಜಾನ್ ಮುಂದಾಗಿತ್ತು.. ಇವು ಇತ್ತೀಚಿನ ಉದಾಹರಣೆಗಳು. ಈಗ ಸೋಶಿಯಲ್ ಮೀಡಿಯಾ ಇಸ್ಟಾಗ್ರ್ಯಾಮ್ ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿಕೊಂಡಿದೆ.

ನಟಿ ಮಣಿಯರು ಶಿವ, ಗಣೇಶ, ಕಾಳಿಯ ಟ್ಯಾಟೋಗಳನ್ನು  ಹಾಕಿಸಿಕೊಳ್ಳಬಾರದ  ಜಾಗದಲ್ಲೆಲ್ಲಾ ಹಾಕಿಸಿಕೊಂಡು ವಿವಾದ ಎಬ್ಬಸಿದ್ದರು, ಪಾಪ್ ಸಿಂಗರ್ Rihanna ಮಾಡಿದ ಕೆಲಸವನ್ನೂ ಯಾರೂ ಮರೆತಿಲ್ಲ. ಇದೀಗ ಇಸ್ಟಾಗ್ರ್ಯಾಮ್ ಸರದಿ.

ಗಣೇಶ ಪೆಂಡೆಂಟ್ ಧರಿಸಿ ಮೇಲುಡುಗೆ ಇಲ್ಲದೆ ಗಾಯಕಿ ರಿಹಾನಾ ವಾಕ್

ಭಗವಾನ್ ಶಿವನ ಚಿತ್ರಕ್ಕೆ ಅಪಮಾನ ಮಾಡಿರುವ ಇಸ್ಟಾಗ್ರ್ಯಾಮ್ ದೇವರ ಕೈಯಲ್ಲಿ ವೈನ್ ಗ್ಲಾಸ್, ಮೊಬೈಲ್ ಹಿಡಿಸಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿಬಂದಿದ್ದು ಕ್ಷಮೆಗೆ ಹಕ್ಕೋತ್ತಾಯ ಮಾಡಲಾಗುತ್ತಿದೆ.

ಕೆಲವೊಂದಿಷ್ಟು ವಿಚಾರಗಳು ಸದ್ದು ಮಾಡಿದಾಗ ಮಾತ್ರ ಪರಿಹಾರ ಕಾಣಲು ಸಾಧ್ಯ. ಫೇಸ್ ಬುಕ್ ನಂತೆ   ಪ್ರಸಿದ್ಧಿ ಪಡೆದುಕೊಂಡ ಇಸ್ಟಾ ಯಾವ ಕಾರಣಕ್ಕೆ ಇಂಥದ್ದನ್ನೆಲ್ಲಾ ಮಾಡಿದೆಯೋ ಗೊತ್ತಿಲ್ಲ. ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸವೆಂತೂ ಆಗಿಹೋಗಿದೆ. 

Follow Us:
Download App:
  • android
  • ios