ಗಣೇಶ ಪೆಂಡೆಂಟ್ ಧರಿಸಿ ಅರೆಬೆತ್ತಲಾದ ರಿಹಾನಾ; ಭಾರತೀಯರ ತೀವ್ರ ಆಕ್ರೋಶ!
ಪಾಪ್ ಗಾಯಕಿ ರಿಹಾನಾ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ರೈತ ಹೋರಾಟ ಬೆಂಬಲಿ ದೇಶದ ವಿರುದ್ಧ ಪಿತೂರಿ ಮಾಡಿದ ರಿಹಾನಾಗೆ ಭಾರತೀಯ ಸೆಲೆಬ್ರೆಟಿಗಳು ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. ಭಾರತದ ವಿಚಾರದಲ್ಲಿ ಮೂಗು ತೂರಿಸಿ ಕೈಸುಟ್ಟುಕೊಂಡಿದ್ದ ರಿಹಾನ ಇದೀಗ ಗಣೇಶನ ಮೂರ್ತಿ ಇರುವ ಪೆಡೆಂಟ್ ಧರಿಸಿ ಮತ್ತೆ ಭಾರತೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಭಾರತದ ರೈತ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ದೊರಕಿಸಿಕೊಟ್ಟ ಖ್ಯಾತ ಪಾಪ್ ಗಾಯಕಿ ರಿಹಾನ ಭಾರಿ ವಿವಾದ ಸೃಷ್ಟಿಸಿದ್ದರು. ಭಾರತವನ್ನು ಒಡೆಯುವ ಹಾಗೂ ಭಾರತದ ವಿರುದ್ಧ ಪಿತೂರಿ ಮಾಡಿದ ಆರೋಪದಡಿ ತೀವ್ರ ಟೀಕೆಗೆ ಗುರಿಯಾಗಿದ್ದರು.
ಇದೀಗ ಈ ಟೀಕೆ, ವಿರೋಧಗಳ ಬಳಿಕ ರಿಹಾನ ಇದೀಗ ಮತ್ತೊಂದು ವಿವಾದ ಮೈಮೇಲ ಎಳೆದೆಕೊಂಡಿದ್ದಾರೆ. ಇದೀಗ ಗಣೇಶನ ವಿಗ್ರಗದ ಪೆಂಡೆಂಟ್ ಧರಿಸಿದ ರಿಹಾನ ಅರೆಬೆತ್ತಲಾಗಿ ಪೋಸ್ ನೀಡಿದ್ದಾರೆ.
ಹಿಂದೂ ದೇವರ ಪೆಂಡೆಂಟ್ ಧರಿಸಿ ಅಸಭ್ಯತನ ತೋರಿದ್ದಾರೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪವಿತ್ರ ದೇವರ ಹಾಗೂ ನಮ್ಮ ನಂಬಿಕೆಗೆ ಅವಮಾನ ಮಾಡಿದ್ದಾರೆ ಎಂದು ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ಲೆಸ್, ಫುಲ್ ಲೆಸ್ ಆದರೂ ನಮ್ಮ ತಕರಾರಿಲ್ಲ. ಆದರೆ ಹಿಂದೂ ಧರ್ಮವನ್ನು ಹಿಂದೂ ದೇವತೆಗಳನ್ನು ಬಳಸಿಕೊಂಡು ಅಸಭ್ಯತನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗಿದೆ.
ಒಳ ಉಡುಪು ಜಾಹೀರಾತಿಗಾಗಿ ರಿಹಾನ ಈ ರೀತಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಇಂದು ರಾತ್ರಿ ಒಳ ಉಡುಪು ಧರಿಸಬೇಡಿ ಎಂದು ಸಂದೇಶ ರವಾನಿಸಿದ್ದಾರೆ.
ಮೇಲಿಂದ ಮೇಲೆ ರಿಹಾನ ಭಾರತೀಯರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ. ರೈತ ಪ್ರತಿಭಟನೆ ಬೆಂಬಲಿ ಟ್ವೀಟ್ ಮಾಡಿದ ರಿಹಾನ ವಿರುದ್ಧ ಭಾರತೀಯ ಸೆಲೆಬ್ರೆಟಿಗಳು ಟ್ವೀಟ್ ಸಮರ ನಡೆಸಿದ್ದರು.
ನಮ್ಮ ಆಂತರಿಕ ವಿಚಾರಕ್ಕೆ ಕೈಹಾಕಬೇಡಿ, ನಮ್ಮ ಏಕತೆ ಧಕ್ಕೆ ತರಲು ಅವಕಾಶ ನೀಡುವುದಿಲ್ಲ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಗಾಯಕಿ ಲತಾ ಮಂಗೇಶ್ಕರ್, ನಟ ಅಕ್ಷಯ್ ಕುಮಾರ್ ಸುನಿಲ್ ಶೆಟ್ಟಿ ಸೇರಿದಂತೆ ಹಲವರು ರಿಹಾನೆ ಎಚ್ಚರಿಕೆ ನೀಡಿದ್ದರು
ಟೀಕೆ, ಎಚ್ಚರಿಕೆಗಳ ಬಳಿಕವೂ ರೈತ ಹೋರಾಟವನ್ನು ರಿಹಾನ ಬೆಂಬಲಿಸಿದ್ದರು. ಆದರೆ ರಿಹಾನ ರೈತ ಹೋರಾಟದ ಕುರಿತು ಟ್ವೀಟ್ ಮಾಡಲು 18 ಕೋಟಿ ರೂಪಾಯಿ ಪಡೆದಿದ್ದರು ಅನ್ನೋ ಮಾಹಿತಿಯೂ ಹೊರಬಿದ್ದಿತ್ತು. ಈ ಕುರಿತು ತನಿಖೆ ಪ್ರಗತಿಯಲ್ಲಿದೆ