Asianet Suvarna News Asianet Suvarna News

ಜಗನ್ನಾಥಯಾತ್ರೆ ವೇಳೆ ಅವಘಡ, ರಥಯಾತ್ರೆ ಸಾಗುತ್ತಿದ್ದಂತೆ ಕುಸಿದ ಕಟ್ಟಡ, ವಿಡಿಯೋ ವೈರಲ್!

ಅತ್ಯಂತ ಪವಿತ್ರ ಜಗನ್ನಾಥನ ಯಾತ್ರೆ ವೇಳೆ ಅವಘಡ ಸಂಭವಿಸಿದೆ. ರಥ ಯಾತ್ರೆ ನೋಡಲು ಕಟ್ಟಡ ಮೇಲೇರಿದ್ದ ಮಂದಿಯಲ್ಲಿ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ಓರ್ವ ಮೃತಪಟ್ಟಿದ್ದಾನೆ.

Lord Jagannath Rath Yatra building balcony collapsed during procession few injured one dead Ahmedabad ckm
Author
First Published Jun 20, 2023, 8:13 PM IST

ಅಹಮ್ಮದಾಬಾದ್(ಜೂ.20): ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇತ್ತ ಅಹಮ್ಮದಾಬಾದ್‌ನಲ್ಲಿನ ಜಗನ್ನಾಥನ ರಥಯಾತ್ರೆಯಲ್ಲಿ ಅವಘಡ ಸಂಭವಿಸಿದೆ. ಪವಿತ್ರ ಜಗನ್ನಾಥ ಯಾತ್ರೆ ದರ್ಶನ ಪಡೆಯಲು ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು. ಪಕ್ಕದಲ್ಲಿದ್ದ ಕಟ್ಟಡ ಮೇಲೂ ಜನ ನಿಂತು ರಥಯಾತ್ರೆ ದರ್ಶನ ಪಡೆದಿದ್ದಾರೆ. ಆದರೆ ಹೀಗೆ ಕಟ್ಟದ ಮೇಲೆ ನಿಂತು ರಥಯಾತ್ರೆ ದರ್ಶನ ಪಡೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದ ಓರ್ವ ಮೃತಪಟ್ಟಿದ್ದರೆ, 11 ಮಂದಿ ಗಾಯಗೊಂಡಿದ್ದಾರೆ. 

ಅಹಮ್ಮದಾಬಾದ್‌ನ ದರಿಯಾಪುರ್ ವಲಯದಲ್ಲಿ ಈ ಘಟೆ ನಡೆದಿದೆ. ಹಳೇ ಕಟ್ಟಡ ಬಾಲ್ಕನಿಯಲ್ಲಿ ನಿಂತು ಹಲವು ಭಕ್ತರು ರಥ ಯಾತ್ರೆ ದರ್ಶನಕ್ಕೆ ಕಾದಿದ್ದರು. ರಸ್ತೆ ಮೂಲಕ ರಥಯಾತ್ರೆ ಸಾಗುತ್ತಿದ್ದಂತೆ ಅತ್ತ ಮೂರನೇ ಮಹಡಿಯ ಬಾಲ್ಕನಿ ಕುಸಿದಿದೆ. ಈ ಬಾಲ್ಕನಿಯಲ್ಲಿ ನಿಂತಿದ್ದ ಭಕ್ತರು ಕೆಳಕ್ಕೆ ಬಿದ್ದಿದ್ದಾರೆ. ಇತ್ತ ಇದೇ ಕಟ್ಟಡದ ಕೆಳಭಾಗದಲ್ಲೂ ಹಲವು ಭಕ್ತರು ನಿಂತಿದ್ದಾರೆ. ಇವರ ಮೇಲೆ ಕಟ್ಟದದ ಅವಶೇಷ ಕುಸಿದಿದೆ. ಇದರಿಂದ 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಓರ್ವ ಮೃತಪಟ್ಟಿದ್ದಾರೆ. 36 ವರ್ಷದ ಮೆಹೂಲ್ ಪಾಂಚಾಲ್ ಮೃತಪಟ್ಟ ದುರ್ದೈವಿ.

Jagannath Rath Yatra 2023: ಮೂಳೆಗಳಿಂದ ಮಾಡಲ್ಪಟ್ಟಿವೆಯೇ ಜಗನ್ನಾಥ ದೇವಾಲಯದ ವಿಗ್ರಹಗಳು?

ಪುರಿ ಜಗನ್ನಾಥ ರಥಯಾತ್ರೆ: ಕಾಲ್ತುಳಿತಕ್ಕೆ 50 ಜನರಿಗೆ ಗಾಯ
ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಮಂಗ​ಳ​ವಾರ ಯಶ​ಸ್ವಿ​ಯಾಗಿ ನೆರ​ವೇ​ರಿತು. ಆದರೆ ಭಕ್ತರ ಸಂಖ್ಯೆ ಹೆಚ್ಚಾಗಿ ನೂಕು​ನು​ಗ್ಗಲು ಉಂಟಾದ ಪರಿ​ಣಾಮ ಕಾಲ್ತು​ಳಿ​ತ​ದಲ್ಲಿ 50 ಮಂದಿ ಗಾಯ​ಗೊಂಡಿ​ದ್ದಾ​ರೆ.Þತ್ರೆ ವೇಳೆ ಮೊದಲಿಗೆ ದೇಗುಲದ ಒಳಗಿನಿಂದ ಬಲಭದ್ರನ (ಬಲರಾಮ) ರಥ ಎಳೆಯುವ ವೇಳೆ ಭಕ್ತರ ನಡುವೆ ಉಂಟಾದ ಘರ್ಷಣೆಯಲ್ಲಿ ಮಹಿಳೆಯರು ಸೇರಿ ಹಲವು ಮಂದಿ ಕೆಳಗೆ ಬಿದ್ದರು. ಅವರ ಮೇಲೆ ಹಲವಾರು ಮಂದಿ ತುಳಿದುಕೊಂಡು ಹೋದರು. ಆಗ ಅಲ್ಲೇ ಇದ್ದ ರಕ್ಷಣಾ ಸಿಬ್ಬಂದಿಯು ಜನರನ್ನು ಚದುರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ರಥಯಾತ್ರೆ ಮುಂದುವರೆದು ಬಲಭದ್ರ ಬಳಿಕ ಸುಭದ್ರೆ ಹಾಗೂ ಕೊನೆಗೆ ಜಗನ್ನಾಥ ರಥ ಸಾಗಿತು. ಈ ನಡುವೆ, ಅಮ​ಹ​ದಾ​ಬಾದ್‌ನಲ್ಲಿನ ಜಗ​ನ್ನಾಥ ರಥ​ಯಾತ್ರೆ ವೇಳೆಯೂ ನೂಕು​ನು​ಗ್ಗಲು ಉಂಟಾಗಿ ಒಬ್ಬ ಸಾವ​ನ್ನ​ಪ್ಪಿ​ದ್ದಾನೆ. 5 ಮಂದಿಗೆ ಗಾಯ​ವಾ​ಗಿ​ದೆ.

 

 

ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಪುರಿ ಜಗನ್ನಾಥ ಯಾತ್ರೆ ದರ್ಶನ ಪಡೆದಿದ್ದರು.  ಸಾಮಾನ್ಯರಂತೆಯೇ 1 ಕಿ.ಮೀ. ನಡೆದು ಮುರ್ಮು ದೇವರ ದರ್ಶನ ಪಡೆದಿದ್ದರು. ದೇವಾಲಯದ ಸಿಂಹದ್ವಾರದಲ್ಲಿ ಮಂಡಿಯೂರಿ ನಮಸ್ಕರಿಸಿದ ಮುರ್ಮು ಸಾಮಾನ್ಯರಂತೆ ಕಾಲು ತೊಳೆದು ಪ್ರವೇಶಿಸಿದ್ದು, ದೇವಾಲಯದ 22 ಮೆಟ್ಟಿಲುಗಳನ್ನು ಮುಟ್ಟಿನಮಸ್ಕರಿಸಿ ಒಳ ಹೋದರು. ಅಧಿಕಾರಿಗಳು ಹಾಗೂ ಪುರೋಹಿತರು ದ್ರೌಪದಿಯವರನ್ನು ಸ್ವಾಗತಿಸಿದ್ದರು. ಜಗನ್ನಾಥನಿಗೆ ತುಳಸಿ ಹಾಗೂ ಮಹಾಲಕ್ಷ್ಮಿಗೆ ಕಮಲದ ಮಾಲೆಯನ್ನು ಮುರ್ಮು ನೀಡಿದರು. ಬಳಿಕ ಮಂಡಿಯೂರಿ ದೇವರಿಗೆ ನಮಸ್ಕರಿಸಿದ ಅವರು ದೀಪ ಬೆಳಗಿ 15 ನಿಮಿಷಗಾಳ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಾಲಯದ ಪಟಚಿತ್ರವನ್ನು ಮುರ್ಮುಗೆ ಉಡುಗೊರೆಯಾಗಿ ನೀಡಲಾಯಿತು.

ಜೀವನದಲ್ಲೊಮ್ಮೆ ಸವಿಯಲೇಬೇಕು ಪುರಿ ಜಗನ್ನಾಥನ 56 ಬಗೆಯ ಮಹಾಪ್ರಸಾದ
 

Follow Us:
Download App:
  • android
  • ios