ತಾಲಿಬಾನ್ ಮನಸ್ಥಿತಿಗೆ ಹನುಮಂತನ ಗದೆಯಿಂದ ಉತ್ತರ, ಸಿಎಂ ಯೋಗಿ ಎಚ್ಚರಿಕೆ!
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದರೆ ಮರುಕ್ಷಣದಲ್ಲೇ ತಮ್ಮ ಕಾರ್ಯಗತಗೊಳಿಸಿದ ಉದಾಹರಣೆಗಳೇ ಹೆಚ್ಚು. ಇದೀಗ ಯೋಗಿ, ತಾಲಿಬಾನ್ ಮನಸ್ಥಿತಿಗೆ ಹನುಮಂತನ ಗದೆ ಉತ್ತರ ಎಂಬ ಎಚ್ಚರಿಕೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಎಚ್ಚರಿಕೆ ಸಂಪೂರ್ಣ ವಿವರ ಇಲ್ಲಿದೆ.

ಜೈಪುರ(ನ.02) ಬುಲ್ಡೋಜರ್ ಬಾಬಾ ಎಂದೇ ಖ್ಯಾತಿಹೊಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಖಡಕ್ ಎಚ್ಚರಿಕೆ ಮೂಲಕ ಭಾರಿ ಸದ್ದು ಮಾಡಿದ್ದಾರೆ. ರಾಜಸ್ಥಾನದ ತಿಜಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಹಮಾಸ್ ಉಗ್ರರಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ತಾಲಿಬಾನ್ ಮನಸ್ಥಿತಿ ಹೊಂದಿದೆ ಎಂದಿದ್ದಾರೆ. ಇದೇ ವೇಳೆ ತಾಲಿಬಾನ್ ಮನಸ್ಥಿತಿಯವರಿಗೆ ಹನುಮಂತನ ಗದೆ ಉತ್ತರ ನೀಡಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮತದಾರರನ್ನುುದ್ದೇಶಿ ಮಾತನಾಡಿದ ಯೋಗಿ ಆದಿತ್ಯನಾಥ್, ನೀವು ತಾಲಿಬಾನ್ ಮಸ್ಥಿತಿಯನ್ನು ಯಾವ ರೀತಿಯ ಗಾಜಾದಲ್ಲಿ ಪುಡಿ ಮಾಡಲಾಗಿದೆ ಅನ್ನೋದನ್ನು ನೋಡಿರುತ್ತೀರಿ. ಗುರಿಯಿಟ್ಟು ತಾಲಿಬಾನ್ ಮನಸ್ಥಿತಿಯನ್ನು ಇಸ್ರೇಲ್ ನಾಶ ಮಾಡುತ್ತಿದೆ. ಭಾರತದಲ್ಲಿ ತಾಲಿಬಾನ್ ಮನಸ್ಥಿತಿಯನ್ನು ನಾಶ ಮಾಡಲು ಹನುಮಂತನ ಗದೆ ಉತ್ತರ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
'ತಾಲಿಬಾನ್ ಮನಸ್ಥಿತಿಯನ್ನೇ ಛಿಧ್ರ ಮಾಡಬೇಕು..' ಗಾಜಾ ಮೇಲೆ ಇಸ್ರೇಲ್ ದಾಳಿಗೆ ಯೋಗಿ ಆದಿತ್ಯನಾಥ್ ಬೆಂಬಲ
ಕಾಶ್ಮೀರದಿಂದ ಭಯೋತ್ಪಾದನೆವರೆಗೆ ಕಾಂಗ್ರೆಸ್ ಸದಾ ಸಮಸ್ಯೆಗಳನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಹೆಸರಿನಲ್ಲೇ ಹಲವು ಸಮಸ್ಸೆಗಳಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದಲ್ಲಿನ ಸಮಸ್ಯೆಗಳಿಗೆ ಒಂದೊಂದೆ ಪರಿಹಾರ ಒದಗಿಸಲಾಗಿದೆ. ಸರ್ದಾರ್ ವಲ್ಲಬಾಯಿ ಪಟೇಲ್ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದರು. ಆದರೆ ನೆಹರೂ ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿದರು. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕಾಶ್ಮೀರವನ್ನು ಉಗ್ರರ ಕರಿನೆರಳಿನಿಂದ ಮುಕ್ತಿಗೊಳಿಸಿದ್ದಾರೆ ಎಂದು ಯೋಗಿ ಹೇಳಿದ್ದಾರೆ.
ಕಾಂಗ್ರೆಸ್ ಶ್ರೀ ರಾಮ ಮಂದಿರ ವಿವಾದ ಬಗೆಹರಿಸುವ ಪ್ರಯತ್ನ ಮಾಡಲೇ ಇಲ್ಲ. ಕಾರಣ ಕಾಂಗ್ರೆಸ್ ಇತರ ಮತಗಳ ಒಲೈಕೆಯಲ್ಲಿ ಮುಳುಗಿತ್ತು. ಆದರೆ ಪ್ರಧಾನಿ ಮೋದಿ ಈ ವಿವಾದ ಬಗೆಹರಿಸಲು ಕಾನೂನು ತಜ್ಞರ ಸಲಹೆ ಪಡೆದು ಅದರಂತೆ ಕಲಸ ಮಾಡಲಾಯಿತು. ಇದೀಗ ಭವ್ಯ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಿಂದೂ ವಿರೋಧಿ ನೀತಿ ತಳೆದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಕಡೆ ಹಿಂದೂ ವಿರೋಧಿ ನೀತಿಯಿಂದಲೇ ಆಡಳಿತ ನಡೆಸುತ್ತಿದೆ ಎಂದು ಯೋಗಿ ಹೇಳಿದ್ದಾರೆ.
ದಾಖಲೆ ಸಲ್ಲಿಸಿ ಇಲ್ಲಾ ದಿನಕ್ಕೆ 10 ಸಾವಿರ ದಂಡ ಕಟ್ಟಿ, ಅಕ್ರಮ ಮದರಸಾಗೆ ಸಿಎಂ ಯೋಗಿ ನೋಟಿಸ್!