Asianet Suvarna News Asianet Suvarna News

'ತಾಲಿಬಾನ್‌ ಮನಸ್ಥಿತಿಯನ್ನೇ ಛಿಧ್ರ ಮಾಡಬೇಕು..' ಗಾಜಾ ಮೇಲೆ ಇಸ್ರೇಲ್‌ ದಾಳಿಗೆ ಯೋಗಿ ಆದಿತ್ಯನಾಥ್‌ ಬೆಂಬಲ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಮಾವೇಶದದಲ್ಲಿ ಗಾಜಾ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಯನ್ನು ಶ್ಲಾಘಿಸಿದರು.
 

Uttar Pradesh CM Yogi Adityanath lauds Israel offensive on Gaza says Crushing Talibani mentality san
Author
First Published Nov 1, 2023, 8:07 PM IST | Last Updated Nov 1, 2023, 8:07 PM IST

ಜೈಪುರ (ನ.1): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಮಾಸ್ ಯುದ್ಧದ ಮಧ್ಯೆ ಗಾಜಾದ ಮೇಲೆ ಇಸ್ರೇಲ್ ದಾಳಿಗಳನ್ನು ಶ್ಲಾಘನೆ ಮಾಡಿದ್ದಾರೆ. ಮಧ್ಯಪ್ರಾಚ್ಯ ದೇಶವು "ತಾಲಿಬಾನಿ ಮನಸ್ಥಿತಿ" ಯನ್ನು ಹತ್ತಿಕ್ಕುವ ದೊಡ್ಡ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಚುನಾವಣಾ ಕಣದಲ್ಲಿರುವ ರಾಜಸ್ಥಾನದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಇಸ್ರೇಲ್-ಹಮಾಸ್ ಯುದ್ಧವನ್ನು ಉಲ್ಲೇಖಿಸಿ, "ತಾಲಿಬಾನ್ ಕಾ ಉಪಚಾರ್‌ ತೋ ಬಜರಂಗಬಲಿ ಕಿ ಗದಾ ಹೈ ಹೈ (ಹನುಮಂತನ ಗದೆಯಿಂದ ಮಾತ್ರ ತಾಲಿಬಾನ್ ನಿರ್ಮೂಲನೆ ಸಾಧ್ಯ)" ಎಂದು ಹೇಳಿದರು. "ದೇಖ್ ರಹೇ ಹೈ ನಾ ಈಸ್ ಸಮಯ್ ಗಾಜಾ ಮೇ ಇಸ್ರೇಲ್ ತಾಲಿಬಾನಿ ಮನ್ಸಿಕ್ತಾ ಕೋ ಕೈಸೇ ಕುಚಾಲ್ನೆ ಕಾ ಕಾಮ್ ಕರ್ ರಹಾ ಹೈ (ಗಾಜಾದಲ್ಲಿ ಇಸ್ರೇಲ್ ಹೇಗೆ ತಾಲಿಬಾನಿ ಮನಸ್ಥಿತಿಯನ್ನು ಹತ್ತಿಕ್ಕುತ್ತಿದೆ ಎಂಬುದನ್ನು ನೀವು ಈಗಾಗಲೇ ನೋಡ್ತಾ ಇದ್ದೀರಲ್ಲ)' ಎಂದು ಹೇಳಿದ್ದಾರೆ.

"ಸಾಥಿಕ್ ತಾರಿಕೆ ಸೆ ಬಿಲ್ಕುಲ್ ಸಾಥಿಕ್ ನಿಶಾನಾ ಮಾರ್ ಮಾರ್ ಕರ್ ಕುಚಲ್ ರಹಾ ಹೈ (ಅವರು ತಮ್ಮ ಗುರಿಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ)," ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಅಕ್ಟೋಬರ್ 7 ರಂದು, ಹಮಾಸ್ ಉಗ್ರರು ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ದೊಡ್ಡ ಮಟ್ಟದ ಘಾತಕ ದಾಳಿ ನಡೆಸಿದ್ದರು. ಇದರ ಪರಿಣಾಮವಾಗಿ 1,400 ಕ್ಕೂ ಹೆಚ್ಚು ಇಸ್ರೇಲಿ ನಾಗರೀಕರು ಪ್ರಾಣ ಕಳೆದುಕೊಂಡಿದ್ದರು. ಕನಿಷ್ಠ 239 ವ್ಯಕ್ತಿಗಳನ್ನು ಹಮಾಸ್‌ ಒತ್ತೆಯಾಳಾಗಿ ಇರಿಸಿಕೊಂಡಿದೆ. ಈ ಘಟನೆಯ ನಂತರ, ಇಸ್ರೇಲ್ ಗಾಜಾದ ಮೇಲೆ ಪ್ರತೀಕಾರದ ವೈಮಾನಿಕ ದಾಳಿಗಳನ್ನು ನಡೆಸಿತು, ಇದರ ಪರಿಣಾಮವಾಗಿ 8,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಿಯಂತ್ರಿಸುವ ಆರೋಗ್ಯ ಸಚಿವಾಲಯವು ತಿಳಿಸಿದೆ.

ಆದಿತ್ಯನಾಥ್ ಅವರು ರಾಜಸ್ಥಾನದ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಬಾಬಾ ಬಾಲಕನಾಥ್ ನಾಮಪತ್ರ ಸಲ್ಲಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನವೆಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ 370 ನೇ ವಿಧಿ ರದ್ದತಿ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದವರೆಗೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ವರ್ಷಗಳಿಂದ ಕಾಂಗ್ರೆಸ್ ಸೃಷ್ಟಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಎಂದು ಆದಿತ್ಯನಾಥ್ ಹೇಳಿದರು.

ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಾಂವಿಧಾನಿಕ ನಿಬಂಧನೆಯಾಗಿದೆ. ದೇಶದ ಪ್ರತಿಯೊಂದು ಸಮಸ್ಯೆಗೂ ಕಾಂಗ್ರೆಸ್ ಹೆಸರು ತಳುಕು ಹಾಕಿಕೊಂಡಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಒಂದೊಂದಾಗಿ ಸಮಸ್ಯೆಗಳು ಬಗೆಹರಿಯುತ್ತಿವೆ ಎಂದು ಹೇಳಿದ್ದಾರೆ.

ಪತ್ನಿ ಸಾರಾಗೆ ವಿಚ್ಛೇದನ ನೀಡಿರುವ ಸಚಿನ್‌ ಪೈಲಟ್‌, ನಾಮಪತ್ರದಿಂದ ಬಯಲಾಯ್ತು ರಹಸ್ಯ!

ಸ್ವಾತಂತ್ರ್ಯದ ಸಮಯದಲ್ಲಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತವನ್ನು ಒಂದುಗೂಡಿಸುವ ಕಾರ್ಯವನ್ನು ಕೈಗೊಂಡರು, ಆದರೆ ನಂತರ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು (ಭಾರತದ ಮೊದಲ ಪ್ರಧಾನಿ) ಇಲ್ಲಿಯೂ ಸಮಸ್ಯೆಗಳನ್ನು ಸೃಷ್ಟಿಸಿದರು, ಇದರಿಂದಾಗಿ ಭಯೋತ್ಪಾದನೆ ದೇಶದೆಲ್ಲಡೆ ಹರಡಿತು ಎಂದರು. "ಕಾಶ್ಮೀರ ಮತ್ತು 370 ನೇ ವಿಧಿಯ ಸಮಸ್ಯೆಯನ್ನು ಕಾಂಗ್ರೆಸ್ ಸೃಷ್ಟಿಸಿತ್ತು. ಆದರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಅದನ್ನು ಪರಿಹರಿಸಿದ್ದಾರೆ ಮತ್ತು ಭಯೋತ್ಪಾದನೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ" ಎಂದು ಆದಿತ್ಯನಾಥ್ ಹೇಳಿದರು.

ಲಂಡನ್‌ನಲ್ಲಿ ಶುರುವಾಗಿತ್ತು ಸಚಿನ್‌-ಸಾರಾ ಲವ್‌ ಸ್ಟೋರಿ, ಕುಟುಂಬವನ್ನೇ ಧಿಕ್ಕರಿಸಿ ಮದುವೆಯಾಗಿತ್ತು ಈ ಜೋಡಿ!

Latest Videos
Follow Us:
Download App:
  • android
  • ios