ತಿರುವನಂತಪುರ(ಏ.  02)    ಪಂಚರಾಜ್ಯ ಚುನಾವಣೆ ಕಾವೇರಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್   ಮೇಲೆ ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿಯ ಅಭಿವೃದ್ಧಿ ಅಜೆಂಡಾದ ಪರ ಕೇರಳದ ಜನರಿದ್ದಾರೆ. ಈ ಸರ್ಕಾರ ಕೇರಳದ ಅಯ್ಯಪ್ಪ ಭಕ್ತರನ್ನು ನಡೆಸಿಕೊಂಡ ರೀತಿಯನ್ನು ಯಾರೂ ಸಹಿಸಲ್ಲ ಎಂದಿದ್ದಾರೆ. ಅಯ್ಯಪ್ಪ ಭಕ್ತರಿಗೆ ಹೂವಿನ ಸ್ವಾಗತ ಕೊಡಬೇಕು ಅದನ್ನು ಬಿಟ್ಟು ಅವರ ಮೇಲೆ ಲಾಠಿ ಬೀಸುವುದಲ್ಲ ಎಂದಿದ್ದಾರೆ. 

ಕೇರಳದಲ್ಲಿ ಮೋದಿಗೆ ಸಿಕ್ಕ ಅದ್ಭುತ ಸ್ವಾಗತ

ಪಥನಮತ್ತಟ್ಟದ ಪ್ರಚಾರ ಸಭೆಯಲ್ಲಿ ಮಾತನಾಡಿ, ಜನರು ದಬ್ಬಾಳಿಕೆಯ ಶಕ್ತಿಗಳ ವಿರುದ್ಧ ಒಂದೇ ಧ್ವನಿಯಲ್ಲಿ ಮಾತನಾಡುವ ಸಂದರ್ಭ ಬಂದಿದೆ. ಕೇರಳದಲ್ಲಿ ಅಂತದ್ದೊಂದು ಸನ್ನಿವೇಶ ಕಾಣುತ್ತಿದ್ದೇನೆ ಎಂದಿದ್ದಾರೆ.

ಮೆಟ್ರೋ ಮ್ಯಾನ್ ಕೊಟ್ಟಿರುವ ಕೊಡುಗೆ ಜಗತ್ತಿಗೆ ತಿಳಿದಿದೆ.  ವಿದ್ಯಾವಂತ ಜನರು ಕೇಸರಿ ಪಕ್ಷದೊಂದಿಗೆ ನಿಲ್ಲಲಿದ್ದಾರೆ.  ಶ್ರೀಧರನ್ ನೇತೃತ್ವದಲ್ಲಿ ಅಭಿವೃದ್ಧಿ ಮನೆ ಮನೆಗೆ ತೆರಳಲಿದೆ ಎಂದು ಹೇಳಿದರು.

ಎಲ್ ಡಿಎಫ್ ಮತ್ತು ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದ ಮೋದಿ ಈ ಶಕ್ತಿಗಳು ಜನರಲ್ಲಿಒ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 140 ಸ್ಥಾನದ ವಿಧಾನಸಭೆಯ ಚುನಾವಣೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದ್ದು ಫಲಿತಾಂಶ ಹೊರಬರಲಿದೆ.

ಪಶ್ಚಿಮ ಬಂಗಾಳದಲ್ಲಿ ಮತದಾನವೂ ನಡೆದಿದ್ದು ದೇಶದ ದಿಕ್ಕು ಯಾವ ಕಡೆ ಸಾಗುತ್ತಲಿದೆ ಎನ್ನುವುದಕ್ಕೆ  ಈ ಫಲಿತಾಂಶ  ಕಾರಣವಾಗಬಹುದು.