ತಿರುವನಂತಪುರಂ(ಎ.02): ಸಿನಿಮಾದಲ್ಲಿ ಹೀರೋ ಎಂಟ್ರಿಯಾಗುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವೇದಿಕೆಗೆ ಆಗಮಿಸಿದ್ದಾರೆ. ನಾಯಕರಿಗೆ ಕೈಮುಗಿಯುತ್ತಲೇ ಆಗಮಿಸಿದ ಮೋದಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಕೇರಳ ಜನತೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ತಮ್ಮ ಮೊಬೈಲ್ ಫ್ಲಾಶ್ ಲೈಟ್ ಆನ್ ಮಾಡಿ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಸ್ವಾಗತ ನೀಡಿದ್ದಾರೆ. ಈ ವಿಡಿಯೋ ಇದೀಗ ಹೊಸ ಸಂಚಲನ ಸೃಷ್ಟಿಸಿದೆ.

ಮೋದಿ ವಿಡಿಯೋ ಎಡಿಟ್ ಮಾಡಿ ಪೇಚಿಗೆ ಸಿಲುಕಿದ ಕಾಂಗ್ರೆಸ್; ಸತ್ಯ ಬಯಲಾದಾಗ ಟ್ವೀಟ್ ಡಿಲೀಟ್!

ತಿರುವನಂತಪುರಂನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮೋದಿಗೆ ಸಿಕ್ಕ ಸ್ವಾಗತವೇ ಮೈಜುಮ್ಮೆನಿಸುವಂತಿದೆ. ಸಂಪೂರ್ಣ ಕ್ರೀಡಾಂಗಣ ಭರ್ತಿಯಾಗಿದೆ. ಮೋದಿ ಮೋದಿ ಅನ್ನೋ ಘೋಷಣೆಯಲ್ಲಿ, ಕಾರ್ಯಕ್ರಮ ನಿರೂಪಕ ಅದೆಷ್ಟೆ ಕಿರುಚಿದರೂ ಧ್ವನಿ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ.

"

ಕೇಳದ ಕೊನ್ನಿಯಲ್ಲಿ ಆಯೋಜಿಸಿದ ರ್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಮೋದಿ, ನೇರವಾಗಿ ತಿರುವನಂತಪುರಂಗೆ ಬಂದಿಳಿದ್ದಾರೆ. ಪಟ್ಟಣಂತಿಟ್ಟ ಜಿಲ್ಲೆಯಲ್ಲಿರುವ ಕೊನ್ನಿಯಲ್ಲೇ ಪ್ರಖ್ಯಾತ ಅಯ್ಯಪ್ಪ ದೇವಸ್ಥಾನವಿದೆ. ಈ ರ್ಯಾಲಿ ಮುಗಿಸಿ, ತಿರುವನಂತಪುರಂಕ್ಕೆ ಆಗಮಿಸಿದ ಮೋದಿಗೆ ಕೇರಳ ಜನತೆ ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ.

2021ರ ಕೇರಳ ವಿಧಾನಸಭಾ ಚುನಾವಣ ಪ್ರಚಾರಕ್ಕಾಗಿ ಮೋದಿ 2ನೇ ಬಾರಿಗೆ ಆಗಮಿಸಿದ್ದಾರೆ. ಪ್ರತಿ ಭಾರಿ ಕೇರಳ ಜನತೆಯ ಪ್ರೀತಿಯ ಸ್ವಾಗತಕ್ಕೆ ಮೋದಿ ಧನ್ಯವಾದ ಹೇಳಿದ್ದಾರೆ.