ಕೊರೋನಾ ವಿರುದ್ಧದ ಹೋರಾಟ/ ನಿಮ್ಮ ಜತೆಗೆ ಇರ್ತೆನೆ ಎಂದ ಪ್ರಧಾನಿ/ ಬ್ರೆಜಿಲ್ ಮತ್ತು ಇಸ್ರೇಲ್ ಸ್ನೇಹಿತರಿಗೆ ಮೋದಿ ಅಭಯ/ ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ವಿಚಾರ ಹಂಚಿಕೊಂಡ ನಾಯಕರು
ನವದೆಹಲಿ(ಏ. 10)ಕೊರೋನಾ ವಿರುದ್ಧದ ಹೋರಾಟದಲ್ಲಿ ನಿಮ್ಮಂತ ಸ್ನೇಹಿತರಿಗೆ ಸಹಾಯ ಮತ್ತು ಸಹಕಾರ ನೀಡಲು ಭಾರತ ಸದಾ ಬದ್ಧವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ಮತ್ತು ಇಸ್ರೇಲ್ ಗೆ ತಿಳಿಸಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲಸನಾರೋ ಮತ್ತು ಇಸ್ರೇಲ್ ಪ್ರಧಾಣಿ ಬೆಂಜಮಿನ್ ನೇತಾನ್ಯಹು ಗೆ ಪ್ರಧಾನಿ ಶುಕ್ರವಾರ ತಿಳಿಸಿದ್ದಾರೆ. ಕೊರೋನಾಕ್ಕೆ ಬಳಸುವ hydroxychloroquine ರಫ್ತು ಸಂಬಂಧ ಇಬ್ಬರು ನಾಯಕರು ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮೋದಿ ನಾಯಕರ ಟ್ವೀಟ್ ರಿ ಟ್ವೀಟ್ ಮಾಡಿದ್ದಾರೆ.
ಕೊರೋನಾ ಕುರಿತು ಹೈಕೋರ್ಟ್ ಗೆ ವರದಿ ಸಲ್ಲಿಸಿದ ಸರ್ಕಾರ, ಆತಂಕ
ನಮ್ಮ ನಡುವಿನ ದೂರವಾಣಿ ಸಂಭಾಷಣೆ ನನಗೆ ಹೆಚ್ಚಿನ ಬಲ ತಂದಿದೆ ಎಂದು ಬ್ರೆಜಿಲ್ ಅಧ್ಯಕ್ಷರು ಹೇಳಿಕೊಂಡಿದ್ದಾರೆ. ಕೊರೋನಾಕ್ಕೆ ಬಳಸಬುದು ಎನ್ನಲಾಗಿರುವ hydroxychloroquine ಬಗ್ಗೆ ಹಲವಾರು ದೇಶಗಳು ಪ್ರಯೋಗ ಮಾಡುತ್ತಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಸಹ ಇದರ ಬಗ್ಗೆ ಕೆಲ ದಿನಗಳ ಹಿಂದೆ ಮಾತನಾಡಿದ್ದರು.
ಇಡೀ ಪ್ರಪಂಚವೇ ಕೊರೋನಾ ಹಾವಳಿಗೆ ತತ್ತರಿಸಿದೆ. ಅಮೆರಿಕ, ಇಟಲಿಯಲ್ಲೆಂತೂ ಪರಿಸ್ಥಿತಿ ಕೈಮೀರಿ ಹೋಗಿದೆ. ಇದೆಲ್ಲದರ ನಡುವೆ ಭಾರತ ಪರಿಸ್ಥಿತಿಯನ್ನು ಒಂದು ಹಂತದ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ.

