ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಜಾಗತಿಕ ಆರ್ಥಿಕ ರೇಟಿಂಗ್‌ ಏಜೆನ್ಸಿ ಫಿಚ್‌ ಭವಿಷ್ಯ ನುಡಿದಿದೆ. 

ನವದೆಹಲಿ: ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಜಾಗತಿಕ ಆರ್ಥಿಕ ರೇಟಿಂಗ್‌ ಏಜೆನ್ಸಿ ಫಿಚ್‌ ಭವಿಷ್ಯ ನುಡಿದಿದೆ. ಆದರೆ ಆ ಚುನಾವಣೆಯಲ್ಲಿ ದೊರಕುವ ಬಹುಮತದ ಪ್ರಮಾಣವು ಆಡಳಿತದ ಸುಧಾರಣಾ ಕಾರ್ಯಸೂಚಿಯ ಮೇಲೆ ಪ್ರಭಾವ ಬೀರಬಹುದು ಎಂದೂ ಅದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸ್ತುತ ಅಧಿಕಾರದಲ್ಲಿ ಇರುವ ಪಕ್ಷಗಳು ಭಾರತದಲ್ಲಿ ಹಾಗೂ ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಆಡಳಿತದ ಗದ್ದುಗೆ ಏರುವ ಸಾಧ್ಯತೆ ಇದೆ. ಇದರಿಂದ ಈ ಹಿಂದಿನ ನೀತಿಗಳೇ ನಿರಂತರವಾಗಿ ಮುಂದುವರಿಯಲು ಅನುಕೂಲವಾಗುತ್ತದೆ’ ಎಂದು ಫಿಚ್‌ ನುಡಿದಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೊದಲ ಬಾರಿ 2014ರಲ್ಲಿ ಅಧಿಕಾರಕ್ಕೆ ಬಂದಿತ್ತು ಮತ್ತು 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಭಾರಿ ಬಹುಮತದೊಂದಿಗೆ ಮತ್ತೆ ಜಯಿಸಿತ್ತು. ಮುಂದಿನ ಸಾರ್ವತ್ರಿಕ ಚುನಾವಣೆ 2024ರ ಏಪ್ರಿಲ್‌-ಮೇನಲ್ಲಿ ನಡೆಯಲಿವೆ.

ಲೋಕಸಭೆ ಚುನಾವಣೆ ಹೊತ್ತಲ್ಲೇ ಮೋದಿಗೆ ಬ್ರಹ್ಮಾಸ್ತ್ರ..! ಬಿಜೆಪಿ ಸರ್ಕಾರದ ಮುಂದಿನ ಗುರಿ ಪಿಒಕೆಯಾ..?

ರಾಜ್ಯಸಭೆಯಲ್ಲಿ 30 ನಿಮಿಷದ ನಮಾಜ್‌ ಬ್ರೇಕ್‌ ರದ್ದು ಮಾಡಿದ ಚೇರ್ಮನ್‌ ಜಗದೀಪ್‌ ಧನ್‌ಕರ್‌!