ನವದೆಹಲಿ(ಡಿ.03): ಕಲಾಪದ ವೇಳೆ ಅಶಿಸ್ತು ವರ್ತನೆ ತೋರಿದ ಕೇಂದ್ರ ಸಚಿವರ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಿಟ್ಟಾದ ಘಟನೆ ನಡೆದಿದೆ.

ಶೂನ್ಯ ವೇಳೆಯಲ್ಲಿ ಶಿವಸೇನೆಯ ಹೇಮಂತ್ ತುಕಾರಾಂ ಗೋಡ್ಸೆ ಮಾತನಾಡುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ರಾವ್ ಸಾಹೇಬ್ ಪಾಟೀಲ್ ಧನ್ವೆ, ಪ್ರಶ್ನೆಯನ್ನು ಪುನರುಚ್ಛಿಸುವಂತೆ ಕೋರಿದರು.

ಕರ್ತವ್ಯ ನಿಷ್ಠೆ ಪ್ರಶ್ನಿಸಿದ ಕಾಂಗ್ರೆಸ್‌ ಸಂಸದನಿಗೆ ಸ್ಪೀಕರ್‌ ಬಿರ್ಲಾ ಎಚ್ಚರಿಕೆ!

ಇದರಿಂದ ಸಿಟ್ಟಾದ ಓಂ ಬಿರ್ಲಾ, ಸದನದಲ್ಲಿದ್ದಾಗ ಸದ್ಯಸರ ಮಾತುಗಳನ್ನು ಗಮನವಿಟ್ಟು ಕೇಳಿ ಎಂದು ಸಲಹೆ ನೀಡಿದರು. ಅಲ್ಲದೇ ಪ್ರಶ್ನೆಯನ್ನು ಮತ್ತೆ ಪುನರುಚ್ಛಿಸದಂತೆ ಗೋಡ್ಸೆ ಅವರಿಗೂ ಬಿರ್ಲಾ ಸಲಹೆ ನೀಡಿದರು.

ಇನ್ನು ರಾಮ್ ವಿಲಾಸ್ ಪಸ್ವಾನ್ ಅವರಿಗೂ ಗೋಡ್ಸೆ ಪ್ರಶ್ನೆ ಕೇಳಿದ್ದು, ಕಾಲಿನ ಮೂಳೆ ಮುರಿದುಕೊಂಡಿರುವ ಪಾಸ್ವಾನ್ ಅವರಿಗೆ ಕುಳಿತುಕೊಂಡು ಉತ್ತರ ನೀಡುವಂತೆ ಬಿರ್ಲಾ ಸಲಹೆ ನೀಡಿದರು. ಆದರೆ ಪಾಸ್ವಾನ್ ನಿಂತುಕೊಂಡೇ ಉತ್ತರಿಸಿದ್ದು ವಿಶೇಷವಾಗಿತ್ತು.

ಸಂಸದರ ಕಿತ್ತಾಟ: ಸಂಸತ್ತನ್ನು ಬಂಗಾಳ ವಿಧಾನಸಭೆ ಮಾಡ್ಬೇಡಿ, ಸ್ಪೀಕರ್ ಗುಡುಗು!