ಲೋಕಸಭಾ ಚುನಾವಣೆಯಲ್ಲಿ NDAಗೆ 326 ಸ್ಥಾನ: INDIA ಕೂಟಕ್ಕೆ 190 ಸ್ಥಾನ: ಟೈಮ್ಸ್ ನೌ ಸಮೀಕ್ಷೆ
ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 296ರಿಂದ 326 ಸ್ಥಾನ ಬರಲಿವೆ ಎಂದು ‘ಟೈಮ್ಸ್ ನೌ’ ಹಾಗೂ ‘ಇಟಿಜಿ’ ಜಂಟಿಯಾಗಿ ನಡೆಸಿದ ಸಮೀಕ್ಷೆ ಹೇಳಿದೆ.

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 296ರಿಂದ 326 ಸ್ಥಾನ ಬರಲಿವೆ ಎಂದು ‘ಟೈಮ್ಸ್ ನೌ’ ಹಾಗೂ ‘ಇಟಿಜಿ’ ಜಂಟಿಯಾಗಿ ನಡೆಸಿದ ಸಮೀಕ್ಷೆ ಹೇಳಿದೆ. ಇದೇ ವೇಳೆ ಈಗ ತಾನೇ ರಚನೆಯಾಗಿರುವ ವಿಪಕ್ಷಗಳ ‘ಇಂಡಿಯಾ’ ಕೂಟಕ್ಕೆ 160ರಿಂದ 190 ಹಾಗೂ ಇತರರು 70-80 ಸ್ಥಾನ ಗಳಿಸಲಿದ್ದಾರೆ ಎಂದು ಅಂದಾಜಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ 353 ಸ್ಥಾನ ಬಂದಿದ್ದವು. ಈಗಿನ ಸಮೀಕ್ಷೆ ಅದಕ್ಕಿಂತ ಕಡಿಮೆ ಸೀಟು ನೀಡಿದ್ದರೂ, ನರೇಂದ್ರ ಮೋದಿ ಹ್ಯಾಟ್ರಿಕ್ ಬಾರಿಸುವುದು ಖಚಿತವಾಗಿದೆ. ಇನ್ನು ಎನ್‌ಡಿಎ ಶೇ.55, ಇಂಡಿಯಾ, ಶೇ.36 ಹಾಗೂ ಇತರರು ಶೇ.9ರಷ್ಟು ಮತ ಗಳಿಸಲಿದ್ದಾರೆ.
ಬಿಜೆಪಿಗೆ ಸ್ಪಷ್ಟಬಹುಮತ:
ಈ ನಡುವೆ, ಎನ್‌ಡಿಎ ಅಂಗಪಕ್ಷಗಳನ್ನು ಬದಿಗೆ ಸರಿಸಿದರೆ ಬಿಜೆಪಿಯೊಂದೇ 288ರಿಂದ 314 ಸ್ಥಾನ ಗಳಿಸಲಿದೆ. ಕಾಂಗ್ರೆಸ್ 62ರಿಂದ 80 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ವಿವರಿಸಿದೆ.
9 ವರ್ಷದಲ್ಲಿ 2 ಅವಿಶ್ವಾಸ ಗೆದ್ದ ಮೋದಿ: ಮಣಿಪುರಕ್ಕೆ ಕಿಚ್ಚು ಹಚ್ಚಿದವರ ಇತಿಹಾಸ ಹೇಳಿದ ಪ್ರಧಾನಿ!
ಕರ್ನಾಟಕದಲ್ಲಿ ಬಿಜೆಪಿಗೆ 20 ಸೀಟು
ನವದೆಹಲಿ: ಈಗಲೇ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿಗೆ 18ರಿಂದ 20 ಸ್ಥಾನ ಬರಲಿವೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ 8ರಿಂದ 10 ಸ್ಥಾನ ಗಳಿಸಬಹುದು ಎಂದು ‘ಟೈಮ್ಸ್ ನೌ’ ಸಮೀಕ್ಷೆ ಹೇಳಿದೆ. ಬಿಜೆಪಿಗೆ ಶೇ.44.6 ಹಾಗೂ ಇಂಡಿಯಾ ಕೂಟಕ್ಕೆ ಶೇ.43.3 ಮತಗಳು ಬರಬಹುದು ಎಂದು ಭವಿಷ್ಯ ನುಡಿಯಲಾಗಿದೆ. ಕಳೆದ ಸಲ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರರು 1ಸ್ಥಾನ ಗೆದ್ದಿದ್ದರು
ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು