ನಟಿ ಕಂಗನಾ ರಣಾವತ್ ಭರ್ಜರಿ ಗೆಲುವಿಗೆ ತಾಯಿಯ ಸಿಹಿ ಮುತ್ತಿನ ಉಡುಗೊರೆ!
ಬಾಲಿವುಡ್ ನಟಿ ಕಂಗನಾ ರಣಾವತ್ ಭರ್ಜರಿ ಗೆಲುವು ಕಂಡಿದ್ದಾರೆ. 70 ಸಾವಿರ ಮುನ್ನಡೆ ಸಾಧಿಸುತ್ತಿದ್ದಂತೆ ಕಂಗನಾ ರಣವಾತ್‌ಗೆ ತಾಯಿ ಸಿಹಿ ತಿನ್ನಿಸಿ ಸಿಹಿ ಮುತ್ತು ನೀಡಿ ಆಶೀರ್ವಾದ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ನಟಿ, ಮಾಜಿ ಸಿಎಂ ಹಾಗೂ ಹಾಲಿ ಸಂಸದೆಯ ಪುತ್ರನ ಮಣಿಸಿದ ಸಾಧನೆ ಮಾಡಿದ್ದಾರೆ.
ಹಿಮಾಚಲ ಪ್ರದೇಶ(ಜೂನ್ 04) ಲೋಕಸಭಾ ಚುನಾವಣೆ ತೀರ್ಪು ಬಿಜೆಪಿಗೆ ಪರವಾಗಿಲ್ಲ. ಎನ್‌ಡಿಎ ಮೈತ್ರಿಗೆ ಬಹುಮತ ಸಿಕ್ಕರೂ ಸಮಾಧಾನ ನೀಡಿಲ್ಲ. ಬಿಜೆಪಿಯ ಹಲವು ಘಟಾನುಘಟಿ ನಾಯಕರು ಸೋಲು ಕಂಡಿದ್ದಾರೆ. ಆದರೆ ರಾಜಕೀಯ ಅನುಭವವೇ ಇರದೆ, ಇದೇ ಮೊದಲ ಬಾರಿಗೆ ಸ್ಪರ್ಧಿಸಿದ ಕೆಲವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಚೂಣಿಯಲ್ಲಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿದ ನಟಿ ಕಂಗನಾ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಂಗನಾ ಭಾರಿ ಮುನ್ನಡೆ ಪಡೆದು, ಗೆಲುವಿನತ್ತ ದಾಪುಗಾಲಿಡುತ್ತಿದ್ದಂತೆ ತಾಯಿ ಆಶೀರ್ವಾದ ಪಡೆದಿದ್ದಾರೆ.
ಕಂಗನಾ ರಣಾವತ್ ಮುನ್ನಡೆ 70 ಸಾವಿರ ಗಡಿ ದಾಡುತ್ತಿದ್ದಂತೆ ಗೆಲುವಿನ ಸೂಚನೆಗಳು ಸಿಕ್ಕಿದೆ. ಈ ವೇಳೆ ಕಂಗನಾ ತಾಯಿ ಸಿಹಿ ನೀಡಿ ಜೊತೆಗೆ ಸಿಹಿ ಮುತ್ತು ನೀಡಿ ಆಶೀರ್ವಾದ ಮಾಡಿದ್ದಾರೆ. ನಟಿ ಕಂಗನಾ ಬಿಗಿದಪ್ಪಿದ ತಾಯಿ, ಜನರ ಆಶೀರ್ವಾದ ನಿನ್ನ ಮೇಲಿದೆ. ಜನರ ಬೇಡಿಕೆ, ಆಶೋತ್ತರಗಳನ್ನು ಈಡೇರಿಸುವಂತೆ ಸಲಹೆ ನೀಡಿದ್ದಾರೆ.
ಸ್ಮೃತಿ, ಅಣ್ಣಾಮಲೈ, ಓಮರ್; ಲೋಕ ಕಣದಲ್ಲಿ ಘಟಾನುಘಟಿ ನಾಯಕರಿಗೆ ಸೋಲಿನ ಶಾಕ್, ಇಲ್ಲಿದೆ ಲಿಸ್ಟ್!
ನಟಿ ಕಂಗನಾ ಗೆಲುವು ಕಾಂಗ್ರೆಸ್‌ನಲ್ಲಿ ಶಾಕ್ ನೀಡಿದೆ. ಮಂಡಿ ಕ್ಷೇತ್ರ ಕಂಗನಾ ರಣಾವತ್‌ಗೆ ಸುಲಭ ತುತ್ತು ಆಗಿರಲಿಲ್ಲ. ಕಾರಣ ಈ ಕ್ಷೇತ್ರದಿಂದ ಹಿಮಾಚಲ ಪ್ರದೇಶದ ಮಾಜಿ ಸಿಎಂ ದಿವಂಗತ ವೀರ್‌ಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಕಣಕ್ಕಿಳಿದಿದ್ದರು. ವಿಕ್ರಮಾದಿತ್ಯ ಹಾಲಿ ಮಂಡಿ ಕ್ಷೇತ್ರದ ಸಂಸದೆ ಪ್ರತಿಭಾ ಸಿಂಗ್ ಪುತ್ರ ಅನ್ನೋದು ಮತ್ತೊಂದು ವಿಶೇಷ. ಇಷ್ಟೇ ಅಲ್ಲ ಪ್ರತಿಭಾ ಸಿಂಗ್ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿಕ್ರಮಾದಿತ್ಯ ಸಿಂಗ್ ವಿರುದ್ದ ಕಂಗನಾ ರಣಾವತ್ 74755 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಂಗನಾ 537022 ಮತಗಳನ್ನು ಪಡೆದರೆ, ಸೋಲು ಕಂಡ ವಿಕ್ರಮಾದಿತ್ಯ ಸಿಂಗ್ 462267 ಮತ ಪಡೆದಿದ್ದಾರೆ. ಬಹುಜನ ಸಮಾಜವಾದಿ ಪಾರ್ಟಿ, ಹಿಮಾಚಲ ಪ್ರದೇಶ ಜನತಾ ಪಾರ್ಟಿ ಸೇರಿದಂತೆ 9 ಪ್ರತಿಸ್ಪರ್ಧಿಗಳ ವಿರುದ್ಧ ಕಂಗನಾ ಗೆಲುವು ಸಾಧಿಸಿದ್ದಾರೆ.
ಹಿಮಾಚಲ ಪ್ರದೇಶದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿದೆ. ಈ ಮೂಲಕ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿದೆ. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ. ಇನ್ನು ಪಶ್ಚಿಮ ಬಂಗಾಳದಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಇತ್ತ ಕರ್ನಾಟಕದಲ್ಲೂ ಬಿಜೆಪಿ ಸ್ಥಾನ ಕಳೆದುಕೊಂಡಿದೆ. ಇದರ ಪರಿಣಾಮ 240ಕ್ಕೆ ತೃಪ್ತಿ ಪಡಬೇಕಾಗಿ ಬಂದಿದೆ.
ಬಹುಮತ ಪಡೆಯದ ಬಿಜೆಪಿಗೆ ಶಾಕ್ ನೀಡಿ ಸರ್ಕಾರ ರಚಿಸುತ್ತಾ ಇಂಡಿಯಾ ಒಕ್ಕೂಟ?