ಪ್ರತಿ ಗ್ರಾಮಕ್ಕೆ ಬಾರ್, ಬಡವರಿಗೆ ಉಚಿತ ಬಿಯರ್-ವಿಸ್ಕಿ; ಮತದಾರರಿಗೆ ಭರ್ಜರಿ ಭರವಸೆ ನೀಡಿದ ಅಭ್ಯರ್ಥಿ!

ಪ್ರತಿ ಗ್ರಾಮಕ್ಕೊಂದು ಬಾರ್ ತೆರೆಯಲಾಗುತ್ತದೆ. ಬಡವರಿಗೆ ವಿದೇಶಗಳಿಂದ ಆಮದು ಮಾಡಿಕೊಂಡ ವಿಸ್ಕಿ-ಬಿಯರ್ ಉಚಿತವಾಗಿ ನೀಡಲಾಗುತ್ತದೆ. ಇದಕ್ಕಾಗಿ ಸಂಸದರ ನಿಧಿಯನ್ನೂ ಬಳಸಿಕೊಳ್ಳಲಾಗುತ್ತದೆ. ಇದು ಲೋಕಸಭಾ ಅಭ್ಯರ್ಥಿ ತಮ್ಮ ಮತದಾರರಿಗೆ ನೀಡಿದ ಭರವಸೆ. ಈ ಮಹಿಳಾ ಅಭ್ಯರ್ಥಿ ಇದೀಗ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
 

Lok Sabha Election 2024 Maharashtra ABMP candidate announce free whiskey beer to Poor as a Poll Promise ckm

ಚಂದ್ರಾಪುರ(ಮಾ.31) ಲೋಕಸಭಾ ಚುನಾವಣೆಯಲ್ಲಿ ಪ್ರತಿ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿ ಹಲವು ಭರವಸೆ ನೀಡುತ್ತದೆ. ಇದರ ಜೊತೆಗೆ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಿಗೆ ಕೆಲ ಭರವಸೆ ನೀಡುತ್ತಾರೆ. ಇದೀಗ ಲೋಕಸಭಾ ಮಹಿಳಾ ಅಭ್ಯರ್ಥಿಯೊಬ್ಬರ ಭರವಸೆಗೆ ಆ ಕ್ಷೇತ್ರ ಮಾತ್ರವಲ್ಲ ದೇಶವೇ ಬೆರಗಾಗಿದೆ. ಕಾರಣ ತನ್ನ ಲೋಕಸಭಾ ಕ್ಷೇತ್ರದ ಮತದಾರರಿಗೆ ಭರ್ಜರಿ ಭರವಸೆ ಜೊತೆಗೆ ಆಫರ್ ಕೂಡ ನೀಡಲಾಗಿದೆ. ಸಂಸದರಾಗಿ ನನ್ನನ್ನು ಆಯ್ಕೆ ಮಾಡಿದರೆ ಪ್ರತಿ ಗ್ರಾಮಕ್ಕೆ ಬಾರ್, ಬಡವರಿಗೆ ಉಚಿತ ವಿದೇಶಿ ಆಮದು ವಿಸ್ಕಿ-ಬಿಯರ್ ನೀಡುತ್ತೇನೆ. ಇದಕ್ಕೆ ಸಂಸದ ನಿಧಿ ಹಣವನ್ನೂ ಬಳಸಿಕೊಳ್ಳುತ್ತೇನೆ ಎಂದು ಮಹಾರಾಷ್ಟ್ರದ ಅಖಿಲ ಭಾರತೀಯ ಮಾನವತಾ ಪಾರ್ಟಿ ಅಭ್ಯರ್ಥಿ ವನಿತಾ ರಾವತ್ ಹೇಳಿದ್ದಾರೆ.

ಚಂದ್ರಾಪುರ ಜಿಲ್ಲೆಯ ಚಿಮೂರು ಗ್ರಾಮದ ವನಿತಾ ರಾವುತ್ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ ನಾಗ್ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವನಿತಾ ರಾವುತ್ ಇದೀಗ ಚಂದ್ರಾಪುರ ಜಿಲ್ಲೆಯಿಂದಲೇ ಸ್ಪರ್ಧಿಸುತ್ತಿದ್ದಾರೆ. ಇದೀಗ ವಿನೀತ ರಾವತ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ತನ್ನ ಕ್ಷೇತ್ರದಲ್ಲಿರುವ ಬಡವರಿಗೆ ಭರ್ಜರಿ ಭರವಸೆ ನೀಡಿದ್ದರೆ. 

ಅತ್ತ 4 ಗೋಡೆಗಳ ಮಧ್ಯೆ ಅಧ್ಯಕ್ಷ..ಇತ್ತ ಸೋನಿಯಾ ಪಟ್ಟಾಭಿಷೇಕ..! ಹಿಂಗ್ಯಾಕ್ ಮಾಡಿದ್ರೀ ಮೇಡಂ..?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿದರೆ ತನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದಲ್ಲಿ ಬಾರ್ ತೆರೆಯಲಾಗುತ್ತದೆ. ಇನ್ನು ಆಯಾ ಗ್ರಾಮದ ಬಾರ್‌ಗೆ ವಿದೇಶಿಗಳಿಂದ ಆಮದು ಮಾಡಿರುವ ಮದ್ಯಗಳನ್ನು ಪೂರೈಸಲಾಗುತ್ತದೆ. ವಿದೇಶಿ ಆಮದು ವಿಸ್ಕಿ ಬಿಯರ್‌ಗಳನ್ನು ಬಡವರಿಗೆ ಉಚಿತವಾಗಿ ನೀಡಲಾಗುತ್ತದೆ. ಇದಕ್ಕಾಗಿ ಸಂಸದರ ನಿಧಿ ಬಳಸಿಕೊಳ್ಳಲಾಗುತ್ತದೆ ಎಂದು ವನಿತಾ ರಾವತ್ ಭರವಸೆ ನೀಡಿದ್ದಾರೆ.

ಬಡ ಮತದಾರರು ಗುಣಮಟ್ಟದ ಮದ್ಯವನ್ನು ಕುಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಡವರು ಕಳಪೆ ಗುಣಮಟ್ಟದ ಮದ್ಯ ಸೇವಿಸಿ ಅಸ್ವಸ್ಥರಾಗುತ್ತಿದ್ದಾರೆ. ಹಲವು ಘಟನೆಗಳು ಈಗಾಗಲೇ ವರದಿಯಾಗಿದೆ. ಹೀಗಾಗಿ ಬಡವರಿಗೆ ಅತ್ಯುತ್ತಮ ಗುಣಟ್ಟದ ವಿದೇಶಿ ಮದ್ಯಗಳನ್ನು ಉಚಿತವಾಗಿ ನೀಡಲಾಗುವುದು ಎಂದು ವನೀತ ರಾವುತ್ ಹೇಳಿದ್ದಾರೆ.

ಬಿಜೆಪಿ 400 ಸೀಟು ಗೆದ್ದು ಸಂವಿಧಾನ ಬದಲಾಯಿಸುವ ಗುರಿ ಇಟ್ಟುಕೊಂಡಿದೆ: ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ

ಬಡವರು ಕೂಡ ಗುಣಟ್ಟದ ಕುಡಿಯು ಆನಂದಿಸಬೇಕು ಎಂದು ವನೀತಾ ಹೇಳಿದ್ದಾರೆ. ಇದೀಗ ವನಿತಾ ರಾವತ್ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕುಡುಕರ ಪರವಾಗಿ ಧ್ವನಿ ಎತ್ತಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಅಭ್ಯರ್ಥಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios