2024ರ ಚುನಾವಣೆಗೆ ತಯಾರಿ ಆರಂಭಿಸಿದ ಕಾಂಗ್ರೆಸ್ ಪಕ್ಷ ಸೇರಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ಗೆ ಅಹ್ವಾನ ಕಾಂಗ್ರೆಸ್ ಸೇರಲು ಆಸಕ್ತಿ ತೋರಿದ ಪ್ರಶಾಂತ್ ಕಿಶೋರ್

ನವದೆಹಲಿ(ಏ.16): ಮುಂಬರುವ ಲೋಕಸಭಾ ಚುನಾವಣಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ. ಶತಾಯಗತಾಯ ಅಧಿಕಾರಕ್ಕೇರಲು ಶಕ್ತಿ ಮೀರಿ ಪ್ರಯತ್ನಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗಯೂ ನಡೆದಿದೆ. ಪಕ್ಷಕ್ಕೆ ಸೇರಿಕೊಳ್ಳಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌‌ಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಇತ್ತ ಪ್ರಶಾಂತ್ ಕಿಶೋರ್ ಕೂಡ ಕಾಂಗ್ರೆಸ್ ಸೇರಿಕೊಳ್ಳಲು ಉತ್ಸುಕತೆ ತೋರಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿಯಾದ ಪ್ರಶಾಂತ್ ಕಿಶೋರ್, ಮುಂಬರುವ ಚುನಾವಣೆಗೆ ಕಾಂಗ್ರೆಸ್ ತಯಾರಿ, ಪಕ್ಷದಲ್ಲಿನ ವೀಕ್ನೆಸ್, ಯಾವ ವಿಚಾರ ಹಿಡಿದು ಮುನ್ನಗ್ಗಬೇಕು ಅನ್ನೋ ಕುರಿತು ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಕುರಿತು ಪ್ರಸೆಂಟೇಶನ್ ನೀಡಿರುವ ಪ್ರಶಾಂತ್ ಕಿಶೋರ್, 2024ರ ಚುನಾವಣೆಗೆ ಕಾಂಗ್ರೆಸ್ ಸಜ್ಜುಗೊಳಿಸಲು ಮಹತ್ವದ ಸೂಚನೆ ನೀಡಿದ್ದಾರೆ. ಇದರ ನಡುವೆ ಪ್ರಶಾಂತ್ ಕಿಶೋರ್‌ಗೆ ಕಾಂಗ್ರೆಸ್ ಭರ್ಜರಿ ಆಫರ್ ನೀಡಿದೆ. ಸಲಹೆಗಾರನಾಗುವ ಬದಲು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುವಂತೆ ಪ್ರಶಾಂತ್ ಕಿಶೋರ್‌ಗೆ ಆಹ್ವಾನ ನೀಡಿದೆ.

ಮಮತಾ, ಪ್ರಶಾಂತ್ ಕಿಶೋರ್ ಸಂಬಂಧದಲ್ಲಿ ಬಿರುಕು, ಎಮರ್ಜೆನ್ಸಿ ಮೀಟಿಂಗ್

ಪ್ರಶಾಂತ್ ಕಿಶೋರ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಲು ಆಸಕ್ತಿ ತೋರಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರನಾಗಿ, ಸಲಹೆಗಾರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ಇದೀಗ ಕಾಂಗ್ರೆಸ್ ನಾಯಕನಾಗಿ ಮುಂದುವರಿಯಲು ಸಜ್ಜಾಗಿದ್ದಾರೆ.

ಪ್ರಶಾಂತ್ ಕಿಶೋರ್ ಸಲಹೆಯಂತೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 370 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆಯಬೇಕಾಗ ಮಾರ್ಗಗಳ ಕುರಿತು ತಿಳಿಸಿದ್ದಾರೆ. ಸೋನಿಯ ಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆಗಿನ ಮಾತುಕತೆಯಲ್ಲಿ ಹಲವು ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಉತ್ತರ ಪ್ರದೇಶ, ಬಿಹಾರ, ಒಡಿಶಾ ರಾಜ್ಯಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಬೇಕು. ಇನ್ನು ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ. ಈ ಸಲೆಹೆಯನ್ನು ರಾಹುಲ್ ಗಾಂಧಿ ಕಣ್ಮುಚ್ಚಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಕೆಲ ಬದಲಾವಣೆಗಳನ್ನೂ ಪ್ರಶಾಂತ್ ಕಿಶೋರ್ ಸೂಚಿಸಿದ್ದಾರೆ. ಆದರೆ ಈ ಕುರಿತು ಕಾಂಗ್ರೆಸ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.

ಮತ್ತೆ ಪ್ರಶಾಂತ್‌ ಕಿಶೋರ್‌ ಜತೆ ನಿತೀಶ್‌ ಭೇಟಿ: ಬಿಜೆಪಿಗೆ ಸಂದೇಶ?

ಸತತ ಚುನಾವಣೆ ಸೋಲುಗಳಿಂದ ಮಂಕಾಗಿರುವ ಕಾಂಗ್ರೆಸ್ಸನ್ನು ಪುನರುತ್ಥಾನಗೊಳಿಸುವ ಗಂಭೀರ ಪ್ರಯತ್ನವೊಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಆರಂಭವಾಗಿದೆ. ಶನಿವಾರ ದೆಹಲಿಯಲ್ಲಿ ಹಿರಿಯ ನಾಯಕರ ಸಭೆಯನ್ನು ಸೋನಿಯಾ ನಡೆಸಿದ್ದು, ಈ ವೇಳೆ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರು ಚುನಾವಣೆ ಎದುರಿಸುವ ಕುರಿತು ಪ್ರಾತ್ಯಕ್ಷಿಕೆಯೊಂದನ್ನು ನೀಡಿದ್ದಾರೆ.

ಇದೇ ವೇಳೆ, ಮಾಸಾಂತ್ಯಕ್ಕೆ ರಾಜಸ್ಥಾನದಲ್ಲಿ ಚಿಂತನ ಶಿಬಿರ ನಡೆಸಿ ಮುಂಬರುವ ಗುಜರಾತ್‌ ಹಾಗೂ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್‌ ಉದ್ದೇಶಿಸಿದೆ. ಶನಿವಾರದ ಸಭೆಯಲ್ಲೂ ಆ ಎರಡೂ ರಾಜ್ಯಗಳ ಚುನಾವಣೆ ಕುರಿತು ಚರ್ಚೆ ನಡೆದಿದೆ.ಸೋನಿಯಾ ನಿವಾಸದಲ್ಲಿ ನಡೆದ ಪ್ರಶಾಂತ್‌ ಕಿಶೋರ್‌ ಜತೆಗಿನ ಸಭೆಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ಅಂಬಿಕಾ ಸೋನಿ, ಅಜಯ್‌ ಮಾಕನ್‌ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಇದ್ದರು.

2ನೇ ಸುತ್ತಿನ ಸಂಧಾನ:
ಈ ಮೊದಲು ಕಾಂಗ್ರೆಸ್‌ ಪರ ಪ್ರಶಾಂತ್‌ ಕಿಶೋರ್‌ ಅವರು ಚುನಾವಣಾ ತಂತ್ರಗಾರಿಕೆ ಮಾಡಿಕೊಟ್ಟಿದ್ದರಾದರೂ, ಆನಂತರ ಕಾಂಗ್ರೆಸ್‌ ಜತೆಗಿನ ಅವರ ಸಂಬಂಧ ಹಳಸಿತ್ತು. ಹಲವು ಸಂದರ್ಭದಲ್ಲಿ ಅವರು ರಾಹುಲ್‌ ಗಾಂಧಿ ವಿರುದ್ಧವೇ ಟೀಕೆ ಮಾಡಿದ್ದರು. ಪ್ರಶಾಂತ್‌ ಅವರ ಮಾಜಿ ಆಪ್ತನನ್ನು ಚುನಾವಣಾ ತಂತ್ರಗಾರಿಕೆಗೆ ಕಾಂಗ್ರೆಸ್‌ ಬಳಸಿಕೊಂಡಿತ್ತು. ಇದೀಗ ಕಾಂಗ್ರೆಸ್‌ ಹಾಗೂ ಪ್ರಶಾಂತ್‌ ಮತ್ತೆ ಒಂದಾಗಿದ್ದಾರೆ.