ಹಳಿ ದಾಟುತ್ತಿದ್ದ ದನದ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೆಟ್, ದೃಶ್ಯ ಸರೆ!

ಹಸುಗಳ ಗುಂಪು ರೈಲು ಹಳಿ ದಾಟುವ ಪ್ರಯತ್ನದಲ್ಲಿತ್ತು. ಇದನ್ನು ಗಮನಿಸಿದ ಲೋಕೋ ಪೈಲೆಟ್ ರೈಲು ನಿಲ್ಲಿಸಿದ್ದಾರೆ. ದನಗಳು ಹಳಿ ದಾಟಿದ ಬಳಿಕ ಪ್ರಯಾಣ ಮುಂದುವರಿಸಿದ ದೃಶ್ಯ ಸೆರೆಯಾಗಿದೆ. ಮಾನವೀಯತೆಗೆ ಸಾಕ್ಷಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Loco pilots stops express train to saves cow on railway track captured video ckm

ರೈಲು ಹಳಿ ದಾಟುವಾಗ ಹಲವು ಪ್ರಾಣಿಗಳು ಅಪಘಾತದಲ್ಲಿ ಮೃತಪಟ್ಟಿದೆ. ತೀವ್ರವಾಗಿ ಗಾಯಗೊಂಡ ಪ್ರಾಣಿಗಳು ನರಳಿ ನರಳಿ ಸತ್ತ ಘಟನೆಗಳು ಇವೆ. ಇದರ ನಡುವೆ ಲೋಕೋ ಪೈಲೆಟ್ ಹಸುಗಳ ಪ್ರಾಣ ಉಳಿಸಲು ರೈಲನ್ನೇ ನಿಲ್ಲಿಸಿದ ಮಾನವೀಯ ಘಟನೆಯೊಂದು ಸೆರೆಯಾಗಿದೆ. ರೈಲು ವೇಗವಾಗಿ ಸಾಗುತ್ತಿದ್ದ ವೇಳೆ ಅಚಾನಕ್ಕಾಗಿ  ಹಸುಗಳ ಗುಂಪು ರೈಲು ಹಳಿ ದಾಟಲು ಯತ್ನಿಸಿರುವುದನ್ನು ಲೋಕೋ ಪೈಲೆಟ್ ಗಮನಿಸಿದ್ದಾರೆ. ತಕ್ಷಣವೇ ರೈಲು ನಿಲ್ಲಿಸಿ ಹಸುಗಳು ರೈಲು ಹಳಿ ದಾಟಲು ಅನುವು ಮಾಡಿಕೊಟ್ಟ ಘಟನೆ ದೃಶ್ಯ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರೈಲು ವೇಗವವಾಗಿ ಸಾಗುತ್ತಿರುವ ದೃಶ್ಯವಿದೆ. ಇದೇ ವೇಳೆ ದೂರದಲ್ಲಿ ರೈಲಿನ ಹಳಿ ಮೇಲೆ ಹಲವು ಹಸುಗಳು ದಾಟುವ ಪ್ರಯತ್ನ ಮಾಡುತ್ತಿರುವುದನ್ನು ಲೋಕೋ ಪೈಲೆಟ್ ಗಮನಿಸಿದ್ದಾರೆ. ದನಗಳು ರೈಲು ಹಳಿ ದಾಟಲು ರೈಲು ನಿಧಾನ ಮಾಡಿದ್ದಾರೆ. ಬ್ರೇಕ್ ಹಾಕಿ ರೈಲಿನ ವೇಗ ಕಡಿತಗೊಳಿಸಿದ್ದರೆ.  ಈ ವೇಳೆ ಮೊದಲ ದನ ರೈಲು ಹಳಿ ದಾಟಿದೆ. ಮತ್ತೆ ನಿಧಾನವಾಗಿ ಸಾಗಿದರೆ ಮತ್ತಷ್ಟು ಹಸುಗಳು ರೈಲು ಹಳಿ ದಾಟುವ ಪ್ರಯತ್ನದಲ್ಲಿತ್ತು. ರೈಲು ಹತ್ತಿರ ಬಂದರೂ ದನಗಳು ಹಳಿಯಲ್ಲೇ ಇದ್ದ ಕಾರಣ ಲೋಕೋ ಪೈಲೆಟ್ ರೈಲು ನಿಲ್ಲಿಸಿದ್ದಾರೆ.

ಎರಡು ತುಂಡಾದ ಚಲಿಸುತ್ತಿದ್ದ ಮಗಧ್ ಎಕ್ಸ್‌ಪ್ರೆಸ್ ರೈಲು, ಕಪ್ಲಿಂಗ್ ವೈಫಲ್ಯದಿಂದ ಅವಘಡ!

ರೈಲಿನ ಸಿಬ್ಬಂದಿ ದನಗಳು ಹಳಿ ದಾಟಿದೆ ಖಾತ್ರಿ ಪಡಿಸಿದ ಬಳಿಕ ಲೋಕೋ ಪೈಲೆಟ್ ಪ್ರಯಾಣ ಮುಂದುವರಿಸಿದ ಘಟನೆಯ ವಿಡಿಯೋ ಹರಿದಾಡುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಅನ್ನೋದರ ಕುರಿತು ಮಾಹಿತಿ ಲಭ್ಯವಿಲ್ಲ. ಆದರೆ ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಮಾನವೀಯತೆ ಇನ್ನೂ ಇದೆ. ದನಗಳ ಪ್ರಾಣ ಉಳಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲೆಟ್‌ಗೆ ಸಲಾಮ್ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ವಿಶೇಷ ರೈಲಿನ ಲೈಕೋ ಪೈಲೆಟ್ ಹಳಿ ದಾಡುವ ಪ್ರಾಣಿಗಳ ಕುರಿತು ಗಮನವಿಡಬೇಕ. ಈ ಲೋಕೋ ಪೈಲೆಟ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 

 

 

ಇತ್ತೀಚೆಗೆ ಕಾಡನೆಯೊಂದು ರೈಲು ಹಳಿ ದಾಡುತ್ತಿದ್ದ ವೇಳೆ ಎಕ್ಸ್‌ಪಪ್ರೆಸ್ ರೈಲು ಡಿಕ್ಕಿಯಾದ ಘಟನೆ ವರದಿಯಾಗಿತ್ತು. ಕಾಡನೆ ಹಿಂಬದಿಯ ಎರಡು ಕಾಲುಗಳ ರೈಲು ಡಿಕ್ಕಿಯಾಗಿ ಮುರಿದಿತ್ತು. ತೀವ್ರ ನೋವಿನಿಂದ ತೆವಳುತ್ತಾ ಸಾಗಿದ ಕಾಡಾನೆ ಬಳಿಕ ಮೃತಪಟ್ಟಿತ್ತು. ಈ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಡಿನ ಪ್ರದೇಶದಲ್ಲಿ ರೈಲು ಹಳಿ ದಾಟಲು ಕಾಡು ಪ್ರಾಣಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲ. ಇತ್ತ ಕಾಡು ಪ್ರಾಣಿಗಳಿರುವ ಪ್ರದೇಶದಲ್ಲಿ ಎಚ್ಚರವಹಿಸುವಂತೆ ರೈಲ್ವೇ ಇಲಾಖೆಗೆ ಹಲವರು ಮನವಿ ಮಾಡಿದ್ದರು.

ಇದು ರೈಲು ಸೀಟಿಗಾಗಿ ನಡೆದ ಜಗಳವಲ್ಲ, ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್ ಕಿತ್ತಾಟ!

Latest Videos
Follow Us:
Download App:
  • android
  • ios