ಎರಡು ತುಂಡಾದ ಚಲಿಸುತ್ತಿದ್ದ ಮಗಧ್ ಎಕ್ಸ್‌ಪ್ರೆಸ್ ರೈಲು, ಕಪ್ಲಿಂಗ್ ವೈಫಲ್ಯದಿಂದ ಅವಘಡ!
ದೆಹಲಿಯಿಂದ ಹೊರಟ ಮಗಧ್ ಎಕ್ಸ್‌ಪ್ರೆಸ್ ರೈಲು ಕಪ್ಲಿಂಗ್ ಸಮಸ್ಯೆಯಿಂದ ಎರಡು ತುಂಡಾಗಿದೆ. ಕೆಲ ಭೋಗಿಗಳು ಒಂದೆಡೆಯಾದರೆ ಮತ್ತಷ್ಟು ಬೋಗಿಗಳು ಮತ್ತೊಂದೆಡೆಯಾಗಿ ಅವಘಡ ಸಂಭವಿಸಿದೆ.
ಪಾಟ್ನಾ(ಸೆ.08) ಭಾರತೀಯ ರೈಲ್ವೇಯ ಮಗದ್ ಎಕ್ಸ್‌ಪ್ರೆಸ್ ರೈಲು ಬಿಹಾರದ ಬುಕ್ಸಾರ್ ಜಿಲ್ಲೆಯಲ್ಲಿ ಅವಘಡಕ್ಕೆ ತುತ್ತಾದ ಘಟನೆ ನಡೆದಿದೆ. ದೆಹಲಿಯಿಂದ ಇಸ್ಲಾಂಪುರಕ್ಕೆ ತೆರಳಿದ್ದ ರೈಲು ತುರಿಗಂಜ್ ಹಾಗೂ ರುಘನಾಥಪುರ ರೈಲು ನಿಲ್ದಾಣದ ಮದ್ಯೆ ಅವಘಡಕ್ಕೆ ತುತ್ತಾಗಿದೆ. ರೈಲಿನ ಕಪ್ಲಿಂಗ್ ಸಮಸ್ಯೆಯಿಂದ ರೈಲು ಎರಡು ಭಾಗವಾಗಿದೆ. ಚಲಿಸುತ್ತಿದ್ದಂತೆ ಕಪ್ಲಿಂಗ್ ಕೊಂಡಿ ಕಳಚಿದೆ. ಇದರ ಪರಿಣಾಮ ಹಲವು ಬೋಗಿಗಳು ರೈಲಿನಿಂದ ಬೇರ್ಪಟ್ಟು ಆತಂಕ ಸೃಷ್ಟಿಯಾಗಿತ್ತು. ಆದರೆ ಅವಘಡ ಸಂಭವಿಸುತ್ತಿದ್ದಂತೆ ರೈಲು ನಿಯಂತ್ರಣಕ್ಕೆ ಪಡೆದು ನಿಲ್ಲಿಸಲಾಗಿದೆ. ಬೇರ್ಪಟ್ಟ ಬೋಗಿ ಕೂಡ ಕೆಲ ದೂರದಲ್ಲಿ ನಿಂತಿದೆ. ಇದರ ಪರಿಣಾಮ ಭಾರಿ ದುರಂತವೊಂದು ತಪ್ಪಿದೆ. ಅದೃಷ್ಠವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಮಗಧ್ ಎಕ್ಸ್‌ಪ್ರೆಸ್ ರೈಲು(20802) ದೆಹಲಿಯಿಂದ ಹೊರಟು ಬಿಹಾರ ಬುಕ್ಸಾರ್ ಜಿಲ್ಲಿ ತಲುಪುತ್ತಿದ್ದಂತೆ ಕಪ್ಲಿಂಗ್ ಕೊಂಡಿ ಕಳಚಿಕೊಂಡಿದೆ. ಅವಘಡ ಸಂಭವಿಸುತ್ತಿದ್ದಂತೆ ಪ್ರಯಾಣಿಕರು ಭಯಭೀತಗೊಂಡಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ರೈಲು ನಿಂತ ಕಾರಣ ಅಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಲೋಕೋ ಪೈಲೆಟ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಹಳಿಗಳ ಮೂಲಕ ಸಾಗುವ ಎಲ್ಲಾ ರೈಲುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.
ಇದು ರೈಲು ಸೀಟಿಗಾಗಿ ನಡೆದ ಜಗಳವಲ್ಲ, ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್ ಕಿತ್ತಾಟ!
ರೈಲಿನ 13 ಮತ್ತು 14ನೇ ಬೋಗಿಯ ಕಪ್ಲಿಂಗ್ ಕೊಂಡಿ ಕಳಚಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೇ ಸಿಬ್ಬಂದಿಗಳು ಧಾವಿಸಿದ್ದಾರೆ. ಬಳಿಕ ಎರಡು ರೈಲುಗಲನ್ನು ರಘುನಾಥಪುರ ರೈಲ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಬಳಿಕ ರೈಲನ್ನು ತಾಂತ್ರಿಕ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಇತ್ತ ರಿಪೇರಿ ಕೆಲಸಕ್ಕೆ ಸಮಯ ಹಿಡಿಯುವ ಕಾರಣ ಪ್ರಯಾಣಿಕರನ್ನು ಇಳಿಸಿ ಬೇರೆ ರೈಲಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರು ಬುಕ್ಸಾರ್ ಜಿಲ್ಲಾ ಡಿಎಸ್‌ಪಿ ಅಫಾಕ್ ಅಖ್ತರ್ ಅನ್ಸಾರಿ, ರೈಲು ಅಪಘಾತವಾಗಿಲ್ಲ. ಕೊಂಡಿ ಕಳಚಿದ ಪರಿಣಾಮ ಒಂದು ರೈಲು ಇಬ್ಬಾಗವಾಗಿ ಎರಡಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರೈಲು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಈ ಅವಘಡ ಸಂಭಿಸಿದೆ. ಕೊಂಡಿ ಕಳಚುತ್ತಿದ್ದಂತೆ ರೈಲು ನಿಲ್ಲಿಸಲಾಗಿದೆ. ಇತ್ತ ಕಳಚಿದ ಕೊಂಡಿಯೂ ಹಳಿಯಲ್ಲಿ ನಿಂತಿದೆ. ಹೀಗಾಗಿ ಅನಾಹುತ ಸಂಭವಿಸಿಲ್ಲ. ಘಟನೆ ಕುರಿತು ರೈಲ್ವೇ ವಿಭಾಗ ತನಿಖೆಗೆ ಆದೇಶಿಸಿದೆ ಎಂದಿದ್ದಾರೆ. ಇಂದು(ಸೆ.08) ಬೆಳಗ್ಗೆ 11.08ಕ್ಕೆ ಈ ಅವಘಡ ಸಂಭವಿಸಿದೆ. ಇದರ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು.
ಭಾರತೀಯ ರೈಲ್ವೇ ಬಿಳಿ ಬೆಡ್ ಶೀಟ್, ದಿಂಬುಗಳನ್ನೇ ಏಕೆ ಬಳಸುತ್ತೆ? ಇಲ್ಲಿದೆ ಕುತೂಹಲ ವಿವರ!