ಇದು ರೈಲು ಸೀಟಿಗಾಗಿ ನಡೆದ ಜಗಳವಲ್ಲ, ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್ ಕಿತ್ತಾಟ!

ಟಿಕೆಟ್ ಬುಕಿಂಗ್ ಆಗಿದ್ದರೂ ರೈಲಿನಲ್ಲಿ ಸೀಟಿಗಾಗಿ ಜಗಳ ಮಾಡಬೇಕಾದ ಪರಿಸ್ಥಿತಿ ಎದುರಾಗ ಹಲವು ಘಟನೆಗಳು ವರದಿಯಾಗಿದೆ. ಇದೀಗ ವಂದೇ ಭಾರತ್ ಟ್ರೈನ್ ನಾನು ಓಡಿಸುತ್ತೇನೆ ಎಂದು ಕೆಲ ಲೋಕೋ ಪೈಲೆಟ್ ಕಿತ್ತಾಡಿಕೊಂಡ ಘಟನೆ ವೈರಲ್ ಆಗಿದೆ. ಈ ರೈಲು ಒಡಿಸಲು ಲೋಕೋ ಪೈಲೆಟ್ಸ್ ಕಿತ್ತಾಡಿದ್ದೇಕೆ?

Daily conflicts between loco pilots over vande bharat train operating agra udaipur route ckm

ಆಗ್ರ(ಸೆ.07) ವಂದೇ ಭಾರತ್ ರೈಲು ವಿಸ್ತರಣೆಯಾಗುತ್ತಿದೆ. ಇತ್ತೀಚೆಗೆ ಬೆಂಗಳೂರು-ಮಧುರೈ ಸೇರಿದಂತೆ 3 ವಂದೇ ಭಾರತ್ ರೈಲು ಸಂಚಾರ ಆರಂಭಿಸಿದೆ. ವಂದೇ ಭಾರತ್ ರೈಲು ಓಡಿಸಲು ಇದೀಗ ಲೋಕೋ ಪೈಲೆಟ್ಸ್ ನಡುವೆ ಪೈಪೋಟಿ, ಜಿದ್ದು, ಬಡಿದಾಟಗಳು ಆರಂಭಗೊಂಡಿದೆ. ಇದರ ಮುಂದುವರಿದ ಭಾಗ ಎಂಬಂತೆ ಆಗ್ರಾ-ಉದಯಪುರ ನಡುವಿನ ವಂದೇ ಭಾರತ್ ರೈಲು ಓಡಿಸಲು ಒಂದಷ್ಟು ಲೋಕೋ ಪೈಲೆಟ್ಸ್ ನಡುವೆ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ. ಲೈಕೋ ಪೈಲೆಟ್ಸ್ ಕಿತ್ತಾಡಿಕೊಂಡಿರುವ ದೃಶ್ಯಗಳು ಇದೀಗ ರೈಲ್ವೇ ಇಲಾಖೆಗೆ ಮುಜುಗರ ತರಿಸಿದೆ.

ಆಗ್ರಾ-ಉದಯಪುರ ರೈಲು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಆದರೆ ಈ ರೈಲಿನ ಲೋಕೋ ಪೈಲೆಟ್ಸ್ ನಡುವಿನ ಕಿತ್ತಾಟ ಮಾತ್ರ ಇದೀಗ ಭಾರಿ ಸದ್ದು ಮಾಡುತ್ತಿದೆ. ನಾರ್ತ್ ವೆಸ್ಟ್ರನ್, ನಾರ್ಥನ್ ಹಾಗೂ ವೆಸ್ಟರ್ನ್-ಸೆಂಟ್ರಲ್ ರೈಲ್ವೇ ವಿಭಾಗದ ಲೈಕೋ ಪೈಲೆಟ್ಸ್ ನಡುವೆ ಕಿತ್ತಾಟ ಜೋರಾಗಿದೆ.ಈ ಮೂರು ವಿಭಾಗದ ಅಡಿಯಲ್ಲಿ ಬರವು ಈ ವಂದೇ ಭಾರತ್ ರೈಲು ಓಡಿಸಲು 6ಕ್ಕೂ ಹೆಚ್ಚು ಲೋಕೋ ಪೈಲೆಟ್ಸ್ ಪ್ರತಿ ದಿನ ಕಿತ್ತಾಡಿಕೊಳ್ಳುತ್ತಿದ್ದಾರೆ. 

ಬೆಂಗಳೂರು-ಮದುರೈ ಸೇರಿ 3 ವಂದೇ ಭಾರತ್ ರೈಲಿಗೆ ಮೋದಿ ಚಾಲನೆ, ಇಲ್ಲಿದೆ ರೈಲು ವೇಳಾಪಟ್ಟಿ!

ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿರುವ ಈ ಲೋಕೋ ಪೈಲೆಟ್ ಕಿತ್ತಾಟದ ವಿಡಿಯೋದಲ್ಲಿ, ಎಲ್ಲಕ್ಕಿಂತ ಮೊದಲು ಒರ್ವ ಲೈಕೋಪೈಲೆಟ್ಸ್ ಆಗ್ರಾ-ಉದಯಪುರ ರೈಲಿನ ಪೈಲೆಟ್ಸ್ ಕಂಪಾರ್ಟ್‌ಮೆಂಟ್ ಹತ್ತಿ ಬಾಗಿಲು ಲಾಕ್ ಮಾಡಿದ್ದಾರೆ. ಇಷ್ಟೊತ್ತಿಗೆ, ಈ ರೈಲು ನಾನು ಓಡಿಸುವುದು ಎಂದು ಮತ್ತೆ ಕೆಲ ಲೋಕೋಪೈಲೆಟ್ಸ್ ಜಗಳ ಆರಂಭಿಸಿದ್ದಾನೆ. ಆದರೆ ಬಾಗಿಲು ತೆಗೆಯದ ಕಾರಣ ವಂದೇ ಭಾರತ್ ರೈಲಿನ ಕಿಟಿಕಿಯ ಭಾಗದಿಂದ ಒಬ್ಬೊಬ್ಬ ಲೊಕೋಪೈಲೆಟ್ ನಸುಳಿಕೊಂಡು ಹತ್ತಿದ್ದಾರೆ.

 

 

ಇವರ ಜಗಳವನ್ನು ಅಲ್ಲಿನ ಪ್ರಯಾಣಿಕರು ಹಾಗೂ ಇತರರು ಹುರಿದುಂಬಿಸಿದ್ದಾರೆ. ಹೀಗಾಗಿ ಜಗಳ ತಾರಕಕ್ಕೇರಿದೆ. ಲೋಕೋ ಪೈಲೆಟ್ಸ್ ಈ ರೀತಿ ಜಗಳ ಮಾಡಲು, ವಂದೇ ಭಾರತ್ ರೈಲು ಓಡಿಸಲು ಉತ್ಸಾಹ ತೋರುವದರ ಹಿಂದೆ ಒಂದು ಕಾರಣವಿದೆ. ವಂದೇ ಭಾರತ್ ರೈಲು ಪ್ರೀಮಿಯಂ ರೈಲು. ಇತರ ರೈಲು ಚಲಾಯಿಸುವ ಲೋಕೋ ಪೈಲೆಟ್‌ಗಿಂತ ವಂದೇ ಭಾರತ್ ಪ್ರಿಮಿಯಂ ರೈಲು ಚಲಾಯಿಸುವ ಲೋಕೋ ಪೈಲೆಟ್ಸ್ ಗ್ರೇಡ್ ಹೆಚ್ಚು. ವಂದೇ ಭಾರತ್ ರೈಲು ಓಡಿಸಿದ ಲೋಕೋ ಪೈಲೆಟ್‌ ವೃತ್ತಿ ಜೀವನದಲ್ಲಿ ಗ್ರೇಡ್ ಹೆಚ್ಚಾಗಲಿದೆ. ಇಷ್ಟೇ ಅಲ್ಲ ಪ್ರಮೋಶನ್ ಸೇರಿದಂತೆ ಇತರ ಬಡ್ತಿಗಳಿಗೂ ವಂದೇ ಭಾರತ್ ರೈಲು ಚಲಾಯಿಸಿದ ಅನುಭವ ನರೆವಾಗಲಿದೆ. ಪ್ರಮೋಶನ್, ವೇತನ ಹೆಚ್ಚಳ ಸೇರಿದಂತೆ ಹಲವು ಅನುಕೂತಲತೆಗಳಿರುವ ಕಾರಣ ಲೋಕೋ ಪೈಲೆಟ್ ಈ ರೀತಿ ಕಿತ್ತಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.

ಹಲವರು ಈ ಘಟನೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.  ರೈಲು ಸೀಟಿಗಾಗಿ ಪ್ರಯಾಣಿಕರು ಕಿತ್ತಾಡಿಕೊಂಡರೆ, ರೈಲು ಓಡಿಸಲು ಪೈಲೆಟ್ ಕಿತ್ತಾಡಿಕೊಳ್ಳುತ್ತಿದ್ದಾರೆ, ರೈಲ್ವೇ ಅಂದರೆ ಕಿತ್ತಾಟವೋ ಅಥವಾ ಕಿತ್ತಾಟ ಅಂದರೆ ರೈಲ್ವೇಯೋ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

3 ತಿಂಗಳಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರ: ಇದರ ವಿಶೇಷತೆಗಳೇನು ಗೊತ್ತಾ?
 

Latest Videos
Follow Us:
Download App:
  • android
  • ios