ನವದೆಹಲಿ(ಸೆ.15): ಲಾಕ್‌ಡೌನ್‌ ಸೇರಿದಂತೆ ಕೇಂದ್ರ ಸರ್ಕಾರ ಸಕಾಲಕ್ಕೆ ಕೈಗೊಂಡ ನಿರ್ಧಾರಗಳಿಂದಾಗಿ ಕೊರೋನಾ ವೈರಸ್‌ನಿಂದ ಉಂಟಾಗಲಿದ್ದ ದೊಡ್ಡ ಆಪತ್ತಿನಿಂದ ಭಾರತ ಪಾರಾಗಿದೆ. 37-38 ಸಾವಿರ ಜನರ ಜೀವ ಉಳಿದಿದೆ. 14ರಿಂದ 29 ಲಕ್ಷ ಮಂದಿ ಸೋಂಕಿನಿಂದ ಪಾರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಎಂಬುದು ನರೇಂದ್ರ ಮೋದಿ ಸರ್ಕಾರ ಕೈಗೊಂಡ ದಿಟ್ಟನಿರ್ಧಾರ. ಅದಕ್ಕಾಗಿ ನಾನು ಪ್ರಧಾನಿಯನ್ನು ಅಭಿನಂದಿಸುತ್ತೇನೆ. ಕೊರೋನಾ ವಿರುದ್ಧ ದೇಶ ಒಗ್ಗಟ್ಟಿನಿಂದ ಹೋರಾಡುತ್ತಿದೆ ಎಂಬುದಕ್ಕೆ ಲಾಕ್‌ಡೌನ್‌ ಯಶಸ್ವಿಯಾಗಿದ್ದೇ ಸಾಕ್ಷಿ. ಅದು ದೊಡ್ಡ ಪ್ರಮಾಣದಲ್ಲಿ ವೈರಸ್‌ ಹರಡುವುದನ್ನು ಯಶಸ್ವಿಯಾಗಿ ತಡೆದಿದೆ. ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ 14-29 ಲಕ್ಷ ಕೊರೋನಾ ಪ್ರಕರಣಗಳು ಕಡಿಮೆಯಾಗಿವೆ ಮತ್ತು 37,000-38,000 ಸಾವು ಸಂಭವಿಸುವುದು ತಪ್ಪಿದೆ ಎಂದು ಅಂದಾಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಅನಂತ ಹೆಗಡೆ, ಲೇಖಿ ಸೇರಿ 30 ಸಂಸದರಿಗೆ ಪಾಸಿಟಿವ್‌!

ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೊರೋನಾ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದಕ್ಕಿಂತ ಸಾಕಷ್ಟುಹೆಚ್ಚು ಕೊರೋನಾ ಪರೀಕ್ಷೆಗಳು ದೇಶದಲ್ಲಿಂದು ನಡೆಯುತ್ತಿವೆ. ಆಕ್ಸಿಜನ್‌ ಸಿಲಿಂಡರ್‌ ಹಾಗೂ ಪಿಪಿಇ ಕಿಟ್‌ಗಳು ದೇಶದಲ್ಲಿ ಬೇಕಾದಷ್ಟಿವೆ. ನಾವೀಗ ಪಿಪಿಇ ಕಿಟ್‌ಗಳನ್ನು ಬೇಕಾದರೆ ರಫ್ತು ಮಾಡಬಹುದು. ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಆಕ್ಸಿಜನ್‌ ಸಿಲಿಂಡರ್‌ಗಳನ್ನು ರಾಜ್ಯಗಳಿಗೆ ಪೂರೈಸಿದ್ದೇವೆ. ಕೊರೋನಾ ವಿರುದ್ಧದ ಹೋರಾಟ ಇನ್ನೂ ದೀರ್ಘವಾಗಿದೆ ಎಂದು ಹೇಳಿದರು.

ಸಾವಿನ ದರ ಶೇ.1.67:

ದೇಶದಲ್ಲಿ ಕೊರೋನಾ ಸೋಂಕಿತರ ಸಾವಿನ ದರ ಶೇ.1.67ರಷ್ಟಿದೆ. ಶೇ.77.65ರಷ್ಟುಸೋಂಕಿತರು ಇಲ್ಲಿಯವರೆಗೆ ಗುಣಮುಖರಾಗಿದ್ದಾರೆ. ಹೆಚ್ಚಿನ ಸಾವು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ, ಅಸ್ಸಾಂ, ಕೇರಳ ಮತ್ತು ಗುಜರಾತ್‌ನಲ್ಲಿ ಸಂಭವಿಸಿವೆ. ಈ ಎಲ್ಲ ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸೋಂಕು ವರದಿಯಾಗಿದೆ. ಜಗತ್ತಿನಲ್ಲಿ ಕೊರೋನಾ ಸೋಂಕಿತರ ಸಾವಿನ ಸರಾಸರಿ ಶೇ.3.2ರಷ್ಟಿದೆ. ನಮ್ಮ ದೇಶದಲ್ಲಿ ಸಾವಿನ ದರ ಮತ್ತು ಸೋಂಕಿನ ಪ್ರಮಾಣ ಬೇರೆ ದೇಶಗಳಿಗಿಂತ ಬಹಳ ಕಡಿಮೆಯಿದೆ ಎಂದು ಹರ್ಷವರ್ಧನ್‌ ತಿಳಿಸಿದರು.

ಸಂಸತ್ತಲ್ಲಿ ಹೊಸ ಇತಿಹಾಸ, ಸಂಸದರ ಮಧ್ಯೆ ಪ್ಲಾಸ್ಟಿಕ್ ಪರದೆ!

2021ರ ಮೊದಲ ತ್ರೈಮಾಸಿಕಕ್ಕೆ ದೇಸಿ ಲಸಿಕೆಭಾರತದಲ್ಲಿ ಕೊರೋನಾ ವೈರಸ್‌ಗೆ 3 ದೇಸಿ ಲಸಿಕೆಗಳು1/2/3 ಹೀಗೆ ಮುಂಚೂಣಿ ಹಂತದ ಪರೀಕ್ಷೆಯಲ್ಲಿವೆ. 30ಕ್ಕೂ ಹೆಚ್ಚು ಲಸಿಕೆಗಳು ಪ್ರಯೋಗದಬೇರೆ ಬೇರೆ ಹಂತಗಳಲ್ಲಿವೆ. 2021ರ ಮೊದಲ ತ್ರೈಮಾಸಿಕದಲ್ಲಿ ಲಸಿಕೆ ಸಿದ್ಧವಾಗಬಹುದುಎಂದು ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದರು.ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್‌)ಯಸಹಯೋಗದಲ್ಲಿ ಭಾರತ್‌ ಬಯೋಟೆಕ್‌ ಕಂಪನಿ ಅಭಿವೃದ್ಧಿಪಡಿಸಿರುವ ದೇಸಿ ಲಸಿಕೆ ಕೋವಾಕ್ಸಿನ್‌ಹಾಗೂ ಜೈಡಸ್‌ ಕ್ಯಾಡಿಲಾ ಕಂಪನಿಯ ಜೈಕೋವ್‌-ಡಿ ಲಸಿಕೆಗಳು 2ನೇ ಹಂತದಪರೀಕ್ಷೆಯಲ್ಲಿವೆ. ಆಕ್ಸ್‌ಫರ್ಡ್‌-ಆಸ್ಟ್ರಾಜೆನೆಕಾ ಕಂಪನಿಯ ಭಾರತೀಯ ಆವೃತ್ತಿಯ ಲಸಿಕೆ ಕೋವಿಶೀಲ್ಡ್‌ನಪ್ರಯೋಗ ದೇಶಾದ್ಯಂತ ನಡೆಯುತ್ತಿದೆ ಎಂದು ತಿಳಿಸಿದರು.