ನವದೆಹಲಿ(ಸೆ.15): ಉತ್ತರ ಕನ್ನಡ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್‌ ಹೆಗಡೆ, ಸಂಸದೆ ಮೀನಾಕ್ಷಿ ಲೇಖಿ ಸೇರಿದಂತೆ ಸುಮಾರು 30 ಸಂಸದರು ಹಾಗೂ 50ಕ್ಕೂ ಹೆಚ್ಚು ಸಂಸತ್ತಿನ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ನಿಂದ ದೇಶದಲ್ಲಿ 78 ಸಾವಿರ ಜನರ ಜೀವ ಉಳಿಯಿತು!

ಸೋಮವಾರದಿಂದ ಆರಂಭವಾದ ಸಂಸತ್ತಿನ ಅಧಿವೇಶನದಲ್ಲಿ ಪಾಲ್ಗೊಳ್ಳಲು ಎಲ್ಲ ಸಂಸದರು, ಸಂಸತ್‌ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ 72 ತಾಸು ಮುನ್ನ ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಅಂತೆಯೇ ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್‌) 2500ಕ್ಕೂ ಹೆಚ್ಚು ಜನರಿಗೆ ಕೊರೋನಾ ಪರೀಕ್ಷೆ ನಡೆಸಿದೆ.

ಅದರಲ್ಲಿ ಸುಮಾರು 30 ಸಂಸದರು, 50ಕ್ಕೂ ಹೆಚ್ಚು ಸಿಬ್ಬಂದಿ, ಕನಿಷ್ಠ ಒಬ್ಬರು ಪತ್ರಕರ್ತರಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದ್ದು, ಕಲಾಪದಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಅನಂತ ಹೆಗಡೆ ಅವರಿಗೆ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಅವರು ದೆಹಲಿಯ ನಿವಾಸದಲ್ಲಿ ಹೋಂ ಕ್ವಾರಂಟೈನ್‌ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಲ್ಲಿ ಹೊಸ ಇತಿಹಾಸ, ಸಂಸದರ ಮಧ್ಯೆ ಪ್ಲಾಸ್ಟಿಕ್ ಪರದೆ!

ಸಂಸತ್ತು ಯೋಧರ ಪರ ಒಟ್ಟಾಗಿ ನಿಲ್ಲಲಿದೆ: ಮೋದಿ

ಚೀನಾ ಮತ್ತು ಭಾರತ ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಆಗಿರುವಾಗಲೇ, ದೇಶದ ಗಡಿಯನ್ನು ಕಾಯುತ್ತಿರುವ ಯೋಧರ ಪರವಾಗಿ ಇಡೀ ದೇಶವೇ ಒಟ್ಟಾಗಿ ನಿಲ್ಲಲಿದೆ. ಈ ಸಮಯದಲ್ಲಿ ಯೋಧರ ಪರವಾಗಿ ನಿಲ್ಲುವುದು ಸಂಸತ್ತಿನ ವಿಶೇಷ ಜವಾಬ್ದಾರಿಯೂ ಹೌದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

'ನಿಮ್ಮ ಜೀವ ನೀವೇ ಉಳಿಸ್ಕೊಳ್ಳಿ, ಪಿಎಂ ನವಿಲಿನೊಂದಿಗೆ ಬ್ಯೂಸಿಯಾಗಿದ್ದಾರೆ'

ಸಂಸತ್ತಿನ ಮುಂಗಾರು ಅಧಿವೇಶನದ ಆರಂಭಕ್ಕೂ ಮುನ್ನ ಮಾಧ್ಯಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ ಬಾರಿ ಸಂಸತ್ತಿನ ಅಧಿವೇಶನದ ವೇಳೆ ಪ್ರತಿಯೊಬ್ಬ ಸದಸ್ಯರು ನಮ್ಮ ಯೋಧರ ಪರವಾಗಿ ನಿಲ್ಲಲಿದ್ದಾರೆ. ಸಂಸತ್ತು ಒಂದೇ ದನಿಯಲ್ಲಿ, ಒಂದೇ ಭಾವನೆಯಲ್ಲಿ ಮತ್ತು ಒಂದೇ ನಿರ್ಣಯದಲ್ಲಿ ಸಂದೇಶವನ್ನು ರವಾನಿಸಲಿದೆ. ನಮ್ಮ ವೀರ ಯೋಧರ ಪರವಾಗಿ ಸಂಸತ್ತು ಬಲಿಷ್ಠ ಸಂದೇಶ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.