Asianet Suvarna News Asianet Suvarna News

ಸಂಸತ್ತಲ್ಲಿ ಹೊಸ ಇತಿಹಾಸ, ಸಂಸದರ ಮಧ್ಯೆ ಪ್ಲಾಸ್ಟಿಕ್ ಪರದೆ!

ಸಂಸತ್ತಲ್ಲಿ ಹೊಸ ಇತಿಹಾಸ| ಸಾಮಾಜಿಕ ಅಂತರದೊಂದಿಗೆ ಅಪರೂಪದ ಕಲಾಪ| ಸಂಸದರ ನಡುವೆ ಶೀಟ್‌ಗಳ ಅಳವಡಿಕೆ

New History Created In Parliament Of India MPs Separated By Plastic Covers Pod
Author
Bangalore, First Published Sep 15, 2020, 7:45 AM IST

ನವದೆಹಲಿ(ಸೆ.15): ಕೊರೋನಾ ಪರಿಸ್ಥಿತಿ ದೇಶದಲ್ಲಿ ತಾರಕಕ್ಕೇರಿರುವ ಸಂದರ್ಭದಲ್ಲಿ ಹಲವು ಪ್ರಥಮಗಳಿಂದ ಕೂಡಿದ ಸಂಸತ್ತಿನ ಐತಿಹಾಸಿಕ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದೆ.

ಸದಸ್ಯರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಕೂರಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎರಡೂ ಸದನಗಳನ್ನು ಬಳಸಿಕೊಂಡು ಒಂದು ಸದನದ ಕಲಾಪ ನಡೆಸಲಾಯಿತು. ಲೋಕಸಭೆ ಸದಸ್ಯರಿಗೆ ರಾಜ್ಯಸಭೆಯಲ್ಲಿ, ರಾಜ್ಯಸಭೆ ಸದಸ್ಯರಿಗೆ ಲೋಕಸಭೆಯಲ್ಲಿ ಕೂರುವ ಅಪರೂಪದ ಅವಕಾಶ ಲಭಿಸಿದೆ. ಬೆಳಗ್ಗೆ 9ರಿಂದ 1ರವರೆಗೆ ಲೋಕಸಭೆ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ಜರುಗಿದವು. ಆದರೆ ಮಂಗಳವಾರದಿಂದ ಇದೇ ಸಮಯದಲ್ಲಿ ಬೆಳಗ್ಗೆ ರಾಜ್ಯಸಭೆ ಹಾಗೂ ಮಧ್ಯಾಹ್ನ ಲೋಕಸಭೆ ಕಲಾಪ ನಡೆಯಲಿವೆ.

ಸಂಸತ್‌ ಅಧಿವೇಶನದಲ್ಲಿ ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚೆ ಸಾಧ್ಯತೆ ಇಲ್ಲ?

ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು ಹಾಗೂ ಸದಸ್ಯರ ನಡುವೆ ಪಾಲಿಕಾರ್ಬನ್‌ ಶೀಟ್‌ಗಳನ್ನು ಅಳವಡಿಸಲಾಗಿತ್ತು. ಸುಮಾರು 200 ಸದಸ್ಯರು ಲೋಕಸಭೆ ಚೇಂಬರ್‌ನಲ್ಲಿದ್ದರೆ, 50 ಸದಸ್ಯರು ಗ್ಯಾಲರಿಯಲ್ಲಿ ಕೂತಿದ್ದರು. ಎಲ್ಲರೂ ಮಾಸ್ಕ್‌ ಧರಿಸಿ ಕಲಾಪಕ್ಕೆ ಬಂದಿದ್ದರು. ಒಂದು ಸದನದಲ್ಲಿನ ಭಾಷಣ ಇನ್ನೊಂದು ಸದನದಲ್ಲಿ ಕಾಣಿಸಲು ಬೃಹತ್‌ ಪರದೆ ಅಳವಡಿಸಲಾಗಿತ್ತು. ಸಂಸದರ ಹಾಜರಿ ನಮೂದಿಸಲು ಪುಸ್ತಕದ ಬದಲು ಮೊಬೈಲ್‌ ಆ್ಯಪ್‌ ಬಳಸಲಾಯಿತು.

ಅನಂತ ಹೆಗಡೆ, ಲೇಖಿ ಸೇರಿ 30 ಸಂಸದರಿಗೆ ಪಾಸಿಟಿವ್‌!

ಕಾಶ್ಮೀರದಲ್ಲಿ 370ನೇ ಪರಿಚ್ಛೇದ ರದ್ದಾದ ನಂತರ ಇದೇ ಮೊದಲ ಬಾರಿ ನ್ಯಾಷನಲ್‌ ಕಾನ್ಫರೆನ್ಸ್‌ ಸಂಸದ ಫಾರೂಖ್‌ ಅಬ್ದುಲ್ಲಾ ಸದನ ಪ್ರವೇಶಿಸಿದರು. 370ನೇ ವಿಧಿ ರದ್ದಾದ ನಂತರ ಅವರು ಗೃಹಬಂಧನಕ್ಕೀಡಾಗಿ ಇತ್ತೀಚೆಗಷ್ಟೇ ಬಂಧಮುಕ್ತರಾಗಿದ್ದರು.

ಕುಳಿತು ಮಾತನಾಡಲು ಅವಕಾಶ

ಕೊರೋನಾ ಹರಡುವಿಕೆ ಸಾಧ್ಯತೆಯನ್ನು ತಗ್ಗಿಸಲು ಸದಸ್ಯರಿಗೆ ಇದೇ ಮೊದಲ ಬಾರಿ ಕುಳಿತುಕೊಂಡೇ ಮಾತನಾಡಲು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವಕಾಶ ನೀಡಿದರು. ‘ಮೊದಲ ಬಾರಿ ಸದಸ್ಯರು ಕುಳಿತು ಮಾತಾಡುತ್ತಿದ್ದಾರೆ. ಇದು ಅವರಿಗೆ ಸರಿಹೊಂದದೇ ಹೋಗಬಹುದು’ ಎಂಬ ಚಟಾಕಿಯನ್ನೂ ಬಿರ್ಲಾ ಹಾರಿಸಿದರು.

'ನಿಮ್ಮ ಜೀವ ನೀವೇ ಉಳಿಸ್ಕೊಳ್ಳಿ, ಪಿಎಂ ನವಿಲಿನೊಂದಿಗೆ ಬ್ಯೂಸಿಯಾಗಿದ್ದಾರೆ'

ಸಂಸದರಿಗೆ ಕೊರೋನಾ ಕಿಟ್‌

ಕೊರೋನಾ ನಿರೋಧಕವಾಗಿ ಪ್ರತಿ ಸದಸ್ಯರಿಗೆ ಸುರಕ್ಷತಾ ಕಿಟ್‌ ನೀಡಲಾಗಿದೆ. ಪ್ರತಿ ಕಿಟ್‌ನಲ್ಲಿ 40 ಮಾಸ್ಕ್‌ಗಳು, 5 ಎನ್‌-95 ಮಾಸ್ಕ್‌, ಫೇಸ್‌ ಶೀಲ್ಡ್‌, 50 ಎಂ.ಎಲ್‌. 20 ಸ್ಯಾನಿಟೈಸರ್‌ ಬಾಟಲುಗಳು, 40 ಜೋಡಿ ಗ್ಲೌಸ್‌, ಸದನದ ಬಾಗಿಲನ್ನು ಕೈಯಿಂದ ಸ್ಪರ್ಶ ಮಾಡುವುದನ್ನು ತಡೆಯಲು ಹುಕ್‌ಗಳು, ಹರ್ಬಲ್‌ ವೈಫ್ಸ್‌, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚಹಾಪುಡಿ ಬ್ಯಾಗ್‌, ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕೈಪಿಡಿ ಇದೆ.

'ನಿಮ್ಮ ಜೀವ ನೀವೇ ಉಳಿಸ್ಕೊಳ್ಳಿ, ಪಿಎಂ ನವಿಲಿನೊಂದಿಗೆ ಬ್ಯೂಸಿಯಾಗಿದ್ದಾರೆ'

ಅಗಲಿದ ಗಣ್ಯರಿಗೆ ಸಂತಾಪ:

ಬೆಳಗ್ಗೆ 9ಕ್ಕೆ ಸದನ ಆರಂಭವಾಯಿತಾದರೂ ಕೋರಂ ಅಭಾವದ ಕಾರಣ 10.20ಕ್ಕೆ ಮುಂದೂಡಿಕೆ ಆಯಿತು. ನಂತರ ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸೇರಿದಂತೆ 13 ಮಾಜಿ ಸಂಸದರಿಗೆ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ನಡೆದ ಕಲಾಪದಲ್ಲಿ ಪೂರಕ ಹಣಕಾಸು ಅಂದಾಜು ಸೇರಿದಂತೆ ಹಲವು ಮಸೂದೆಗಳು ಮಂಡನೆಯಾದವು. ಕೆಲಕಾಲ ಆಡಳಿತ-ವಿಪಕ್ಷಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.

Follow Us:
Download App:
  • android
  • ios