ಮೇ 3ರ ವೇಳೆಗೆ ಬಹುತೇಕ ಎಲ್ಲ ಕ್ಷೇತ್ರಗಳೂ ಕಾರ್ಯಾರಂಭ ಮಾಡಲಿದ್ದು, ಲಾಕ್‌ಡೌನ್‌ ತೆರವುಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್‌ ಸನ್ಯಾಲ್‌ ಹೇಳಿದ್ದಾರೆ.

ನವದೆಹಲಿ(ಏ.24): ಪೂರ್ವನಿಗದಿಯಂತೆ ಮೇ 3ಕ್ಕೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಮುಕ್ತಾಯವಾಗುತ್ತದೆಯೋ ಅಥವಾ ಮತ್ತೆ ಮುಂದುವರೆಯುತ್ತದೆಯೋ ಎಂಬ ಜನರ ಕುತೂಹಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ.

ಮೇ 3ರ ವೇಳೆಗೆ ಬಹುತೇಕ ಎಲ್ಲ ಕ್ಷೇತ್ರಗಳೂ ಕಾರ್ಯಾರಂಭ ಮಾಡಲಿದ್ದು, ಲಾಕ್‌ಡೌನ್‌ ತೆರವುಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್‌ ಸನ್ಯಾಲ್‌ ಹೇಳಿದ್ದಾರೆ.

ಶಂಕರಮೂರ್ತಿ, ರಾಮ ಭಟ್‌, ಟಿಆರ್‌ಕೆ ಭಟ್‌ಗೆ ಮೋದಿ ಕರೆ

ಉದ್ಯಮಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಜಗತ್ತಿನ ಇನ್ನುಳಿದ ಭಾಗ ಆರ್ಥಿಕತೆಗೆ ತೆರೆದುಕೊಳ್ಳುವುದಕ್ಕಿಂತ ಮೊದಲೇ ಭಾರತದ ಆರ್ಥಿಕತೆ ಕಾರ್ಯಾರಂಭ ಮಾಡಲಿದೆ. ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಮಾತ್ರ ಜಗತ್ತು ಸುರಕ್ಷಿತವಾಗುವವರೆಗೆ ಇನ್ನೂ ಕೆಲ ತಿಂಗಳ ಕಾಲ ಆರಂಭವಾಗುವುದಿಲ್ಲ ಎಂದು ತಿಳಿಸಿದರು.

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ, ಭಟ್ ಜಿ ಆಪ್ ಕೈಸೆ ಹೋ

ಆರ್ಥಿಕತೆಗೆ ಪುನಶ್ಚೇತನ ನೀಡುವ ವಿಷಯದಲ್ಲಿ ನಾವು ಮ್ಯಾರಥಾನ್‌ ಓಡುತ್ತಿದ್ದೇವೆಯೇ ಹೊರತು 100-200 ಮೀಟರ್‌ ಓಟವನ್ನಲ್ಲ. ಆರ್ಥಿಕ ಹಿಂಜರಿಕೆ ಇನ್ನೂ ವರ್ಷಗಟ್ಟಲೆ ಇರಲಿದೆ. ಹೀಗಾಗಿ ಒಂದೇ ಸಲ ತನ್ನೆಲ್ಲಾ ಹಣ ಖರ್ಚುಮಾಡುವ ಬದಲು ಕೇಂದ್ರ ಸರ್ಕಾರ ಹಂತ ಹಂತವಾಗಿ ನೆರವು ನೀಡಲಿದೆ. ಬಹಳಷ್ಟುದೇಶಗಳು ವೈರಸ್‌ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಜಾರಿಗೊಳಿಸುವುದಕ್ಕೂ ಮೊದಲೇ ಆರ್ಥಿಕತೆಗೆ ಬೃಹತ್‌ ಪ್ಯಾಕೇಜ್‌ ಘೋಷಿಸಿಬಿಟ್ಟಿವೆ.

ಕೆಮ್ಮು, ಜ್ವರ ಮಾತ್ರೆ ಪಡೆವವರ ಮೇಲೆ ಕಣ್ಣು

ತನ್ಮೂಲಕ ವ್ಯರ್ಥವಾಗಿ ಹಣ ಖರ್ಚು ಮಾಡಿವೆ. ನಾವು ಹಂತಹಂತವಾಗಿ ಆರ್ಥಿಕತೆಗೆ ಉತ್ತೇಜನ ನೀಡುತ್ತಿದ್ದೇವೆ. ಇಂದಲ್ಲಾ ನಾಳೆ ದೊಡ್ಡ ಆರ್ಥಿಕ ಪ್ಯಾಕೇಜ್‌ ಕೂಡ ಘೋಷಿಸುವವರಿದ್ದೇವೆ. ನಮ್ಮ ಕ್ರಮಗಳನ್ನು ಅಂತಾರಾಷ್ಟ್ರೀಯ ಹೂಡಿಕೆದಾರರು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.

ಈ ಅವಕಾಶವನ್ನು ಆರ್ಥಿಕತೆಯಲ್ಲಿ ಬಹುದೊಡ್ಡ ಸುಧಾರಣೆಗಳನ್ನು ಜಾರಿಗೆ ತರಲು ಭಾರತ ಸರ್ಕಾರ ಬಳಸಿಕೊಳ್ಳಲಿದೆ. ಇದೇನೂ ಜಗತ್ತಿನ ಕೊನೆಯಲ್ಲ. ಭಾರತ ಕೇವಲ ನಮ್ಮ ದೇಶವನ್ನು ಮರುನಿರ್ಮಾಣ ಮಾಡುವುದರಲ್ಲಿ ಮಾತ್ರವಲ್ಲ, ಹೊಸ ಜಗತ್ತನ್ನು ನಿರ್ಮಿಸುವ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳಬೇಕಿದೆ ಎಂದರು.