ಪುತ್ತೂರು(ಏ.24): ಪ್ರಧಾನಿ ನರೇಂದ್ರ ಮೋದಿ ಹಿರಿಯ ಬಿಜೆಪಿ ಮುಖಂಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಹಿರಿಯರ ಆರೋಗ್ಯ ವಿಚಾರಿಸಿದ್ದಾರೆ. ಕೆಲವು ನಿಮಿಷಗಳ ಕಾಲ ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಜನಸಂಘದ ಹಿರಿಯ ಕಾರ್ಯಕರ್ತರಾದ, ಬಿಜೆಪಿ ಧುರೀಣರಾದ ಮಾಜಿ ಶಾಸಕ ಉರಿಮಜಲು ರಾಮ ಭಟ್‌ ಮತ್ತು ಕಾಸರಗೋಡು ಜಿಲ್ಲೆಯ ಹಿರಿಯ ಬಿಜೆಪಿಗ, ಪೆರ್ಲ ನಿವಾಸಿ, ಟಿ.ಆರ್‌.ಕೆ.ಭಟ್‌ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ, ಭಟ್ ಜಿ ಆಪ್ ಕೈಸೆ ಹೋ

ಶಂಕರಮೂರ್ತಿ ಅವರೆಗೆ ಗುರುವಾರ ಮುಂಜಾನೆ, ರಾಮ ಭಟ್‌ಗೆ ಬುಧವಾರ ಬೆಳಗ್ಗೆ 11 ಗಂಟೆಗೆ, ಟಿ.ಆರ್‌.ಕೆ.ಭಟ್‌ಗೆ ಗುರುವಾರ ಬೆಳಗ್ಗೆ 9.05ಕ್ಕೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಯೋಗಕ್ಷೇಮ ವಿಚಾರಿಸಿ ಕೆಲವು ನಿಮಿಷಗಳ ಕಾಲ ಮಾತನಾಡಿದ್ದಾರೆ.