ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಉತ್ತರ ಪ್ರದೇಶದಲ್ಲಿನ ವಲಸಿಗರು ಹೆಚ್ಚು ಸಮಸ್ಯೆಗೆ ತುತ್ತಾಗಿದ್ದಾರೆ. ದಿನಗೂಲಿ ನೌಕರರು, ಕೂಲಿ ಕಾರ್ಮಿಕರು ಲಾಕ್‌ಡೌನ್ ಕಾರಣ ಮೊರಾಬಾದ್‌ನಲ್ಲಿ ಸಿಲುಕಿದ್ದರು. ಇದೀಗ ಹೀಗೆ ಲಾಕ್ ಆಗಿದ್ದ 218 ವಲಸಿಗರರನ್ನು ಉತ್ತರ ಪ್ರದೇಶ ಸರ್ಕಾರ ತಮ್ಮ ತಮ್ಮ ಮನೆಗೆ ಕಳುಹಿಸಿಕೊಟ್ಟಿದೆ. 

ಉತ್ತರ ಪ್ರದೇಶ(ಏ.16): ಲಾಕ್‌ಡೌನ್ ಘೋಷಣೆಯಿಂದ ಹೆಚ್ಚು ಸಮಸ್ಯೆಗಳಾಗಿದೆ ನಿಜ. ಆದರೆ ಕೊರೋನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ ಹೊರತು ಪಡಿಸಿ ಬೇರೆ ಮಾರ್ಗಗಳಿಲ್ಲ. ಮೋದಿ ಮೊದಲ ಬಾರಿಗೆ ಲಾಕ್‌ಡೌನ್ ಘೋಷಣೆ ಮಾಡಿದಾಗ ಉತ್ತರ ಪ್ರದೇಶದಲ್ಲಿನ ವಲಸಿಗರು, ಕೂಲಿ ಕಾರ್ಮಿಕರು ಹೆಚ್ಚು ಸಮಸ್ಯೆ ಅನುಭವಿಸಿದರು. ಅತ್ತ ಕೆಲಸವೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ, ಇತ್ತ ಮನೆಗೂ ಹಿಂತಿರುಗಲು ಸಾಧ್ಯವಾಗದೆ ಸಿಲುಕಿಕೊಂಡಿದ್ದರು.

ನಗುತ್ತಿದೆ ನಿಸರ್ಗ: ಗಂಗೆ ಸ್ವಚ್ಛವಾದ ಬೆನ್ನಲ್ಲೇ ಅಪರೂಪದ ಪ್ರಾಣಿ ಪ್ರತ್ಯಕ್ಷ!

ಹೀಗೆ ಮೊರಾಬಾದ್‌ನಲ್ಲಿ ಸಿಲುಕಿದ್ದ ವಲಸಿಗರಿಗಾಗಿ ಉತ್ತರ ಪ್ರದೇಶ ಸರ್ಕಾರ ತಾತ್ಕಾಲಿಕ ಶೆಡ್ ನಿರ್ಮಿಸಿತ್ತು. ಬಳಿಕ ಆಹಾರ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿತ್ತು. ಇದೀಗ ಲಾಕ್‌ಡೌನ್ 2ನೇ ಅವದಿಗೆ ವಿಸ್ತರಣೆಯಾಗುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ತಾತ್ಕಾಲಿಕ ಶೆಡ್‌ನಲ್ಲಿದ್ದ 218 ವಲಸಿಗರನ್ನು ಬಸ್ ಮೂಲಕ ತಮ್ಮ ತಮ್ಮ ಮನೆಗೆ ಕಳಹಿಸಿಕೊಡಲಾಗಿದೆ.

ಕ್ವಾರಂಟೈನ್‌ ಕೇಂದ್ರಗಳಲ್ಲಿ ಎಣ್ಣೆ ಪಾರ್ಟಿ!

ಬಸ್‌ನಲ್ಲಿ ಕಳುಹಿಸುವಾಗಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಜೊತೆ ಸರ್ಕಾರವೇ ಬಸ್ ಮೂಲಕ ಎಲ್ಲರನ್ನೂ ಮನೆಗೆ ಕಳುಹಿಸಿದೆ. ಈಗಾಗಲೇ ಶೆಡ್‌ನಲ್ಲಿ ಎಲ್ಲರಿಗೂ ಕೋವಿಡ್ 19 ಟೆಸ್ಟ್ ಮಾಡಿಸಲಾಗಿದೆ. ಯಾರಿಗೂ ಸೋಂಕು ತಗುಲಿಲ್ಲ ಎಂದು ದೃಢಪಡಿಸಿದೆ. 

ಉತ್ತರ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 727 ದಾಟಿದೆ. ಇದರಲ್ಲಿ 11 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರೆ, 44 ಮಂದಿ ಗುಣಮುಖರಾಗಿದ್ದಾರೆ. ಭುದವಾರ(ಏ.15) ಒಂದೇ ದಿನ 70 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಲಾಕ್‌ಡೌನ್ ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ.